Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹೋಟೆಲ್ ರುಚಿಯ ಉದ್ದಿನ ವಡೆ ಮನೆಯಲ್ಲೇ ಟ್ರೈ ಮಾಡಿ..! ಇಲ್ಲಿದೆ ರೆಸಿಪಿ
ನಾವು ತಿಂಡಿ ತಿನ್ನಲು ಹೋಟೆಲ್ಗೆ ಹೋದರೆ ಮೊದಲು ನೆನಪಾಗೋದು ಇಡ್ಲಿ ವಡೆ, ದಕ್ಷಿಣ ಭಾರತದಲ್ಲಿ ಇಡ್ಲಿ ವಡೆ ಬೆಳಗ್ಗೆಯ ಫೇಮಸ್ ಖಾದ್ಯ, ಎಲ್ಲಾ ಹೋಟೆಲ್ನಲ್ಲೂ ಇಡ್ಲಿ ವಡೆ ಇದ್ದೇ ಇರುತ್ತೆ. ಆದ್ರೆ ಈ ಉದ್ದಿನ ವಡೆ ಬೆಳಗ್ಗೆ ಮಾತ್ರವಲ್ಲ ಇಡೀ ದಿನ ಹೋಟೆಲ್ನಲ್ಲಿ ಲಭ್ಯವಿರುತ್ತೆ. ಬೆಳಗ್ಗೆಯಿಂದ ಸಂಜೆವರೆಗೂ ವಡೆಗೆ ಬೇಡಿಕೆ ಇರುತ್ತೆ.
ವಡೆ ಜೊತೆಗೆ ಅದ್ಭುತವಾದ ಸಾಂಬಾರ್ ಇದ್ದರೆ ಆ ರುಚಿ ಯಾವ ತಿಂಡಿಯಲ್ಲೂ ಸಿಗಲ್ಲ. ಹೀಗಾಗಿ ಉದ್ದಿನ ವಡೆಗಾಗಿ ಜನ ಹೋಟೆಲ್ಗಳಿಗೆ ಹೋಗುವವರು ಸಹ ಇದ್ದಾರೆ. ಇನ್ನು ಈ ಉದ್ದಿನ ವಡೆಯನ್ನು ಮನೆಯಲ್ಲೇ ಮಾಡಬಹುದು. ಕೆಲವೇ ವಸ್ತುಗಳ ಬಳಸಿಕೊಂಡು ರುಚಿ ರುಚಿಯಾಗಿ ತಕ್ಷಣವೇ ರೆಡಿ ಮಾಡಬಹುದು.

ಬೆಳಗ್ಗೆಯ ತಿಂಡಿ ಇಲ್ಲವೆ ಸಂಜೆಯ ಕಾಲಕ್ಕೆ ತಿನ್ನಲು ಈ ಉದ್ದಿನ ವಡೆಯನ್ನು ಮಾಡಬಹುದು. ಹಾಗಾದರೆ ನಾವಿಂದು ಮನೆಯಲ್ಲಿ ಉದ್ದಿನ ವಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು, ತೂತು ವಡೆ ಮಾಡುವ ವಿಧಾನವೇನು? ಈ ವಡೆ ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಉದ್ದಿನ ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಉದ್ದಿನಬೇಳೆ - 2 ಕಪ್
- ಅಕ್ಕಿ - 1 ಕಪ್
- ಶುಂಠಿ - 1 tbs
- ಕರಿಮಣಸಿನ ಕಾಳು- 1 ಟೀಸ್ಪೂನ್
- ಹಸಿರು ಮೆಣಸಿನಕಾಯಿ - 2
- ಕರಿಬೇವಿನ ಎಲೆಗಳು - 1 tbs
- ಕೊತ್ತಂಬರಿ ಸೊಪ್ಪು - 2 ಚಮಚ
- ಅಡುಗೆ ಸೋಡಾ
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಉದ್ದಿನ ವಡೆ ಮಾಡುವ ವಿಧಾನ ಏನು?
ಮೊದಲು ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದುಕೊಂಡು ನೀರಿನಲ್ಲಿ ಸುಮಾರು 2 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು. ಹೀಗೆ ನೆನೆಸಿಟ್ಟರೆ ಹಿಟ್ಟು ಮೃದುವಾಗಿ ಬರುತ್ತದೆ. ಅಕ್ಕಿ ಮತ್ತು ಬೇಳೆಯನ್ನು ಒಂದೇ ಪಾತ್ರೆಯಲ್ಲಿ ನೆನೆಸಿಡಬೇಡಿ. ಬೇರೆ ಬೇರೆಯಾಗಿ ನೆನೆಸಿಡಬೇಕು.
ಈಗ ನೆನೆಸಿಟ್ಟಿರುವ ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ಅಳತೆ ಪ್ರಕಾರವಾಗಿ ನೋಡಿಕೊಂಡು ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ರುಬ್ಬುವಾಗಲೇ ನೀರು ಹಾಕಿಕೊಳ್ಳಿ. ಈ ಹಿಟ್ಟು ಸ್ವಲ್ಪ ಗಟ್ಟಿಯಾಗುವಂತೆ ನೋಡಿಕೊಳ್ಳಿ. ರುಬ್ಬಿದ ಬಳಿಕ ಅದಕ್ಕೆ ಸೋಡಾ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದೇ ಹಿಟ್ಟಿಗೆ ಮೆಣಸಿನಕಾಹಿ (ಸಣ್ಣದಾಗಿ ಹೆಚ್ಚಿಕೊಂಡು) ಕರಿಮೆಣಸಿನ ಕಾಳು, ಕರಿಬೇವಿನ ಸೊಪ್ಪು (ಹೆಚ್ಚಿಕೊಂಡು) ಶುಂಠಿಯನ್ನು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇನ್ನೊಂದೆಡೆ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಒಲೆ ಆನ್ ಮಾಡಿಕೊಳ್ಳಿ, ಸಣ್ಣ ಉರಿ ಇಟ್ಟು ಎಣ್ಣೆ ಕಾಯುವರೆಗೆ ಕಾಯಿರಿ. ಬಳಿಕ ಕೈಯನ್ನು ನೀರಿಗೆ ಅದ್ದಿಕೊಂಡು ಹಿಟ್ಟನ್ನು ತೆಗೆದುಕೊಂಡು ಒಂದು ಉಂಡೆ ಮಾಡಿಕೊಳ್ಳಿ ಹೆಬ್ಬೆಟ್ಟಿನಿಂದ ಮಧ್ಯದಲ್ಲಿ ತೂತು ಮಾಡಿಕೊಂಡು ನಿಧಾನವಾಗಿ ಎಣ್ಣೆಗೆ ಬಿಡಿ. ಪ್ರತಿ ಬಾರಿ ವಡೆ ಮಾಡುವಾಗಲು ಕೈಯನ್ನು ನೀರಿನಲ್ಲಿ ಅದ್ದಿಕೊಳ್ಳಿ. ಉರಿಯನ್ನು ಸಣ್ಣದಾಗಿ ಇಟ್ಟುಕೊಂಡು ವಡೆಯನ್ನು ತಿರುಗಿಸುತ್ತಾ ಇರಿ. ಒಂದು ವಡೆ 2 ರಿಂದ 3 ನಿಮಿಷ ಕಾದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಹೋಟೆಲ್ ರುಚಿಯ ಉದ್ದಿನ ವಡೆ ತಯಾರಾಗುತ್ತದೆ.
ಇದನ್ನು ಕಾಯಿ ಚಟ್ನಿ, ಸಾಂಬಾರ್ ಜೊತೆ ಸವಿಯಲು ಇಟ್ಟರೆ ರುಚಿ ಬೊಂಬಾಟ್ ಆಗಿರುತ್ತದೆ. ಇದನ್ನು ಒಂದು ದಿನದ ಮಟ್ಟಿಗೆ ಇಟ್ಟುಕೊಂಡು ಸವಿಯಬಹುದು. ಹಾಗಾದರೆ ನೀವೂ ಒಮ್ಮೆ ಮನೆಯಲ್ಲಿ ಈ ಉದ್ದಿನ ವಡೆಯನ್ನು ಟ್ರೈ ಮಾಡಿ ನೋಡಿ.



Click it and Unblock the Notifications
