Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅದ್ಭುತ ರುಚಿಯ ಅರಶಿಣ ಪುಳಿಯೋಗರೆ ಮಾಡಿದ್ದೀರಾ? ಹೀಗೆ ಮಾಡಿ ನೋಡಿ..!
ಬೆಳಗ್ಗೆ ತಿಂಡಿಗೆ ನೀವು ಎಷ್ಟೊಂದು ವಿಧವಾದ ಬಗೆ ಬಗೆ ಖಾದ್ಯ ಮಾಡಿ ಸವಿದಿರುತ್ತೀರಿ. ಅದರಲ್ಲೂ ರೈಸ್ ಬಳಸಿ ಮಾಡುವಂತಹ ಅನೇಕ ಖಾದ್ಯ ನಿಮ್ಮ ಬಾಯಲ್ಲಿ ನೀರು ತರಿಸುತ್ತದೆ. ಅದರಲ್ಲೂ ನಿಮಗೆ ಪುಳಿಯೋಗರೆ ಮಾಡಿ ಸವಿಯುವುದು ಬಹಳ ಇಷ್ಟ ಇರಬಹುದು. ಅಂಗಡಿಯಲ್ಲಿ ಸಿಗುವಂತಹ ಪುಳಿಯೋಗರೆ ಪುಡಿಯನ್ನು ತಂದು ಅದ್ಭುತ ರುಚಿಯಲ್ಲಿ ನೀವು ಮಾಡಿ ಸವಿದಿರುತ್ತೀರಿ.
ಹಾಗೆ ಕೆಲವೊಮ್ಮೆ ನೀವೇ ಮನೆಯಲ್ಲಿ ಪುಳಿಯೋಗರೆ ಗೊಜ್ಜನ್ನು ಮಾಡಿಕೊಂಡು ನಿಮಿಷದಲ್ಲಿ ಪುಳಿಯೋಗರೆ ಮಾಡಿ ಸವಿಯಲು ಇಷ್ಟಪಡುತ್ತೀರಿ. ಆದ್ರೆ ಎಂದಾದ್ರು ಚಿತ್ರಾನ್ನ ಮಾಡುವಂತೆ ಕರಿಬೇವಿನ ಸೊಪ್ಪು ಬಳಸಿ ಅರಶಿಣವನ್ನು ಬಳಸಿ ಪುಳಿಯೋಗರೆ ಮಾಡಿ ಸವಿದಿದ್ದೀರಾ? ಹಾಗಾದ್ರೆ ಇಂದು ಈ ರೀತಿ ವಿಶೇಷ ರೀತಿಯಲ್ಲಿ ಹೊಸ ರೀತಿ ಹೊಸ ಪುಳಿಯೋಗರೆ ಮಾಡುವ ಕುರಿತು ತಿಳಿದುಕೊಳ್ಳೋಣ.

ಹಾಗಾದ್ರೆ ಈ ರೀತಿ ವಿಶೇಷ ರುಚಿಯ ಪುಳಿಯೋಗರೆ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಈ ಪುಳಿಯೋಗರೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪುಳಿಯೋಗರೆ ಮಾಡಲು ಅಗತ್ಯವಿರುವ ವಸ್ತುಗಳು
- ಅನ್ನ
- ಕರಿಬೇವು
- ಕಡಲೆ ಬೀಜ
- ಉದ್ದಿನ ಬೇಲೆ
- ಕಡಲೆ ಬೇಳೆ
- ಸಾಸಿವೆ
- ಹಸಿರು ಮೆಣಸಿನಕಾಯಿ
- ಒಣ ಕೆಂಪು ಮೆಣಸಿನಕಾಯಿ
- ಬಿಳಿ ಎಳ್ಳು
- ಹುಣಸೆಹಣ್ಣು
- ಬೆಳ್ಳುಳ್ಳಿ
- ಉಪ್ಪು
- ಎಣ್ಣೆ
ಪುಳಿಯೋಗರೆ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಸ್ವಲ್ಪ ಜಾಸ್ತಿ ಎಣ್ಣೆ ಹಾಕಿಕೊಳ್ಳಿ, ನಂತರ ಇದಕ್ಕೆ ಕರಿಬೇವಿನ ಸೊಪ್ಪು ಹಾಕಿ ಪ್ರೈ ಮಾಡಿ. 1 ನಿಮಿಷದ ಬಳಿಕ ಕರಿಬೇವು ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಪಾತ್ರೆಗೆ ಕಡಲೆ ಬೀಜ ಹಾಕಿ ಫ್ರೈ ಮಾಡಿ ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಮತ್ತೆ ಉಳಿದ ಎಣ್ಣೆಗೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಬೇಕು.
ಈಗ ಹಸಿ ಮೆಣಸು, ಒಣ ಮೆಣಸು, ಬಿಳಿ ಎಳ್ಳು, ಕರಿಬೇವು, ಅರಶಿಣ ಕೂಡ ಹಾಕಿ 1 ನಿಮಿಷದೊಳಗೆ ಫ್ರೈ ಮಾಡಿ. ನಂತರ ನಿಂಬೆ ಗಾತ್ರದ ಹುಣಸೆ ಹುಳಿಯ ನೀರಿನಿಂದ ತೆಗೆದು ರಸ ಹಾಕಿಕೊಳ್ಳಿ. ನಂತರ ಉಪ್ಪು ಹಾಕಿಕೊಂಡು ಫ್ರೈ ಆಗಲು ಬಿಡಿ. ಈಗ ಇನ್ನೊಂದು ಕಡೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೊದಲು ಫ್ರೈ ಮಾಡಿದ್ದ ಕರಿಬೇವು, ಸಾಸಿವೆ, ಬೆಳ್ಳುಳ್ಳಿ ಹಾಕಿ ತರಿ ತರಿಯಾಗಿ ಪೌಡರ್ ಮಾಡಿ.
ಈಗ ಪುಡಿ ಮಾಡಿಕೊಂಡ ಈ ಮಸಾಲೆಯನ್ನು ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಫ್ರೈ ಮಾಡಿದ ಕಡಲೆ ಬೀಜ ಕೂಡ ಇದಕ್ಕೆ ಹಾಕಿಕೊಂಡು ಫ್ರೈ ಮಾಡಿ. ಗೊಜ್ಜಿನ್ನು ಚೆನ್ನಾಗಿ 2 ನಿಮಿಷ ಫ್ರೈ ಮಾಡಿ. ನಂತರ ಒಲೆ ಆಫ್ ಮಾಡಿಕೊಂಡು ಮೊದಲೇ ಮಾಡಿಟ್ಟಿರುವ ಹುಡಿ ಹುಡಿಯಾದ ಅನ್ನವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅನ್ನಕ್ಕೆ ಗೊಜ್ಜು ಹಿಡಿಯುವಂತೆ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ವಿಶೇಷ ರುಚಿಯ ಪುಳಿಯೋಗರೆ ಸಿದ್ದವಾಗಿತ್ತೆ. ನೀವು ಕೂಡ ಬೆಳಗ್ಗೆ ತಿಂಡಿಗೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
