Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತುಮಕೂರು ಸ್ಟೈಲ್‌ನ ಚಟ್ನಿ ಇದು..! ವಿಭಿನ್ನ ರುಚಿಯಲ್ಲಿ ನೀವು ಮಾಡಿ ನೋಡಿ!
ನಾವು ಬೆಳಗ್ಗೆ ತಿಂಡಿಗೆ ಎಷ್ಟೊಂದು ವಿಧದ ಚಟ್ನಿ ಮಾಡಿ ಸವಿದಿರುತ್ತೇವೆ. ಒಂದೊಂದು ಚಟ್ನಿಯು ಒಂದೊಂದು ರುಚಿಯಲ್ಲಿ ನಮಗೆ ಹಿಡಿಸಿರುತ್ತದೆ. ಆದ್ರೆ ನಾವು ಹೊಸ ಬಗೆಯ ಚಟ್ನಿ ಮಾಡುವುದನ್ನು ಆರಂಭಿಸುತ್ತೇವೆ. ಹಾಗೆ ಕೆಲವೊಂದು ಭಾಗದಲ್ಲಿ ಕೆಲವೊಂದು ಚಟ್ನಿಗಳು ಫೇಮಸ್ ಆಗಿರುತ್ತೆ. ಹೀಗಾಗಿ ನಾವಿಂದು ಒಂದೊಳ್ಳೆ ರುಚಿಯಲ್ಲಿ ತುಮಕೂರು ಚಟ್ನಿಯನ್ನು ಮಾಡಿ ಸವಿಯೋಣ.
ತುಮಕೂರು ಸ್ಟೈಲ್‌ನಲ್ಲಿ ಚಟ್ನಿ ಮಾಡಿದ್ರೆ ಊಟ, ತಿಂಡಿ ಎಲ್ಲದಕ್ಕೂ ಫಸ್ಟ್ ಕ್ಲಾಸ್ ರುಚಿ ನೀಡಲಿದೆ. ಇಡ್ಲಿ, ದೋಸೆ, ಚಪಾತಿಗಂತು ಈ ಚಟ್ನಿ ಬೊಂಬಾಟ್ ರುಚಿ ನೀಡಲಿದೆ. ನೀವು ತುಮಕೂರು ಭಾಗಕ್ಕೆ ಭೇಟಿ ನೀಡಿದರೆ ಇಲ್ಲವೆ ಬೆಂಗಳೂರಿನ ಕೆಲವು ಹೋಟೆಲ್‌ನಲ್ಲಿ ಈ ತುಮಕೂರು ಸ್ಪೆಷಲ್ ಚಟ್ನಿ ಮಾಡುತ್ತಾರೆ. ಹಾಗಾದ್ರೆ ನಾವಿಂದು ಮನೆಯಲ್ಲಿ ಈ ಸ್ಪೆಷಲ್ ಚಟ್ನಿ ಮಾಡುವುದು ಹೇಗೆ ನೋಡೋಣ.

ತುಮಕೂರು ಸ್ಪೆಷಲ್ ಚಟ್ನಿ ಮಾಡುವುದು ಹೇಗೆ?, ತುಮಕೂರು ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತುಮಕೂರು ಸ್ಪೆಷಲ್ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಉದ್ದಿನ ಬೇಳೆ
- ಶುಂಠಿ
- ಹಸಿ ಮೆಣಸು
- ಪುದೀನಾ
- ಕೊತ್ತಂಬರಿ ಸೊಪ್ಪು
- ಒಣ ಮೆಣಸು
- ತೆಂಗಿನ ಕಾಯಿ ತುರಿ
- ಇಂಗು
- ಸಾಸಿವೆ
- ಬೆಳ್ಳುಳ್ಳಿ
- ಈರುಳ್ಳಿ
- ಕರಿಬೇವು
- ಉಪ್ಪು
- ಎಣ್ಣೆ
ತುಮಕೂರು ಸ್ಪೆಷಲ್ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆಯನ್ನು ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ. ಬ್ರೌನ್ ಬಣ್ಣಕ್ಕೆ ಈ ಉದ್ದಿನ ಬೇಳೆ ತಿರುಗುವವರೆಗೂ ಫ್ರೈ. ಬಳಿಕ ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈ ಅದೇ ಬಾಣಲೆಗೆ ಶುಂಠಿ, ಬೆಳ್ಳುಳ್ಳಿ, ಹೆಚ್ಚಿಕೊಂಡಿರುವ ಈರುಳ್ಳಿ, ಮೆಣಸು, ಹಸಿ ಮೆಣಸು ಕೂಡ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ.
ನಂತರ ಅದರಲ್ಲಿ ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ 1 ನಿಮಿಷ ಫ್ರೈ ಮಾಡಿ. ನಂತರ ಅದಕ್ಕೆ ಇಂಗು ಮತ್ತು ತೆಂಗಿನ ತುರಿ ಹಾಕಿ 1 ನಿಮಿಷ ಹುರಿದು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಇದನ್ನು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿ ನೀರು ಹಾಕದೆ ಮೊದಲು ರುಬ್ಬಿಕೊಳ್ಳಿ. ಎರಡು ಮೂರು ಸುತ್ತು ರುಬ್ಬಿಕೊಂಡ ಬಳಿಕ ಮತ್ತೆ ನೀರು ಹಾಕಿಕೊಂಡು ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ಒಂದು ಬೌಲ್‌ಗೆ ಹಾಕಿಕೊಂಡು ನಿಮಗೆ ನೀರು ಬೇಕಿದ್ದರೆ ಹಾಕಿಕೊಳ್ಳಬಹುದು. ಅನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಒಗ್ಗರಣೆ ಮಾಡಿಕೊಳ್ಳಿ. ಎಣ್ಣೆ, ಸಾಸಿವೆ, ಒಣ ಮೆಣಸು, ಉದ್ದಿನ ಬೇಳೆ, ಕರಿಬೇವಿನ ಸೊಪ್ಪು ಹಾಕಿ 1 ನಿಮಿಷ ಫ್ರೈ ಮಾಡಿ ಇಳಿಸಿಕೊಂಡು ಅದೇ ಬೌಲ್‌ಗೆ ಹಾಕಿಕೊಂಡು ಒಗ್ಗರಣೆ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ತುಮಕೂರು ಸ್ಟೈಲ್‌ನ ಚಟ್ನಿ ರೆಡಿಯಾಗುತ್ತದೆ. ಕೆಲವೊಂದು ಕಡೆ ಇದಕ್ಕೆ ನೆಲಗಡಲೆ ಹಾಕಿ ರುಬ್ಬಿಕೊಳ್ಳುತ್ತಾರೆ, ಅದು ಕೂಡ ಬೊಂಬಾಟ್ ರುಚಿ ನೀಡಲಿದೆ.



Click it and Unblock the Notifications
