Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕೇಸರಿ, ಬಿಳಿ, ಹಸಿರು..ಈ ರೀತಿ ತಿಂಡಿ ಮಾಡೋಕೆ 5 ನಿಮಿಷ ಸಾಕು!
ಸ್ವಾತಂತ್ರ್ಯೋವದಲ್ಲಿ ಇಡೀ ದೇಶ ಸಂಭ್ರಮದಿಂದ ಹಬ್ಬ ಆಚರಿಸಲಿದೆ. ಅದ್ರಲ್ಲೂ ಎಲ್ಲಾ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು ಸೇರಿ ಹಲವು ಕಡೆಗಳಲ್ಲಿ ನಾವು ತ್ರಿವರ್ಣ ಧ್ವಜ ಹಾರುವುದು ನೋಡಬಹುದು. ಹಾಗೆ ಮನೆಯಲ್ಲಿ ಮಕ್ಕಳಿದ್ದರೆ ಅವರಿಗಾಗಿ ಇಷ್ಟದ ತಿಂಡಿಗಳ ಮಾಡಿ ಸವಿಯಬಹುದು. ಸರ್ಕಾರಿ ರಜಾ ದಿನದ ಹಿನ್ನೆಲೆ ಮಕ್ಕಳು ಮನೆಯಲ್ಲಿದ್ದರೆ ಅವರಿಗಾಗಿ ರುಚಿ ರುಚಿಯಾಗಿ ಹಾಗೆ ಸಿಹಿಯಾದ ಖಾದ್ಯವನ್ನು ಮಾಡಿ ಸವಿದು ನೋಡಿ.
ಇನ್ನು ಹಬ್ಬದಲ್ಲಿ ತ್ರಿವರ್ಣ ಧ್ವಜದಂತಹ ಬಣ್ಣದಲ್ಲಿ ಮಾಡುವ ತಿಂಡಿಗಳು ಮಕ್ಕಳ ಗಮನ ಸೆಳೆಯುತ್ತವೆ. ಹಾಗೆ ಅದು ನೋಡಲು ಮಾತ್ರವಲ್ಲ ಸವಿಯಲು ಕೂಡ ಬಹಳ ರುಚಿಯಾಗಿರಲಿದೆ. ಆದ್ರೆ ಸ್ವಾತಂತ್ರದ ದಿನಕ್ಕೆ ಯಾವೆಲ್ಲಾ ರೀತಿಯ ತಿಂಡಿ ಮಾಡಿ ಸವಿಯಬಹುದು ಎಂಬುದು ಕೂಡ ನೀವು ತಿಳಿದಿದ್ದೀರಿ. ಆದ್ರೆ ನಾವಿಂದು ತ್ರಿವರ್ಣ ಧ್ವಜದಲ್ಲಿನ ಬಣ್ಣವನ್ನು ಹೋಲುವ ಬಾತ್ ಮಾಡಿ ಸವಿದು ನೋಡೋಣ.
ಈ ಬಾತ್ ಅನ್ನು ಕೇಸರಿ, ಬಿಳಿ, ಹಸಿರು ಬಣ್ಣಗಳೊಂದಿಗೆ ಮಾಡಲಾಗುತ್ತದೆ. ರುಚಿಯಲ್ಲಿ ಅದ್ಭುತವಾಗಿ ಹಾಗೆ ನೋಡಲು ಕೂಡ ವಿಶೇಷ ರೀತಿಯಲ್ಲಿರಲಿದೆ. ಹಾಗಾದ್ರೆ ಈ ರುಚಿ ರುಚಿ ಬಾತ್ ಮನೆಯಲ್ಲಿ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ಇಂದು ತಿಳಿದಿಕೊಳ್ಳೋಣ.
ತ್ರಿವರ್ಣ ಧ್ವಜ ಹೋಲುವ ರುಚಿಕರ ಬಾತ್ ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ರವೆ
- ಸಕ್ಕರೆ
- ಕೇಸರಿ ಬಣ್ಣ
- ಹಸಿರು ಬಣ್ಣ
- ತುಪ್ಪ
- ಏಲಕ್ಕಿ ಪುಡಿ
ತ್ರಿವರ್ಣ ಧ್ವಜ ಹೋಲುವ ರುಚಿಕರ ಬಾತ್ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ತುಪ್ಪ ಹಾಕಿ ಬಳಿಕ 1 ಕಪ್ ರವೆಯನ್ನು ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಗೋಲ್ಡನ್ ಬ್ರೌನ್ ಕಲರ್ ತಿರುಗುವವರೆಗೂ ಹುರಿದುಕೊಳ್ಳಿ. ನಂತರ ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 3 ಕಪ್ ನೀರು ಹಾಕಿ ಕುದಿಯಲು ಬಿಡಿ.
ನೀರು ಕುದಿಬರುವಾಗ ಮೊದಲು ಹುರಿದಿಟ್ಟುಕೊಂಡಿದ್ದ ರವೆಯನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ನಿಧಾನವಾಗಿ ಮಿಕ್ಸ್ ಮಾಡುತ್ತಾ 1 ನಿಮಿಷ ಬಿಡಿ. 1 ನಿಮಿಷದ ಬಳಿಕ ಅರ್ಧ ಕಪ್ ಸಕ್ಕರೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಏಲಕ್ಕಿ ಪುಡಿ ಹಾಗೆ ಕೇಸರಿ ಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಒಂದು ಊಟದ ಬಾಕ್ಸ್‌ನಂತರ ವೃತ್ತಾಕಾರದ ಬಾಕ್ಸ್ ತೆಗೆದುಕೊಂಡು ತಳಕ್ಕೆ ತುಪ್ಪ ಅಥವಾ ಎಣ್ಣೆ ಸವರಿಕೊಂಡು ಬಳಿಕ ಈ ಕೇಸರಿ ಬಾತ್ ಅನ್ನು ಈ ಪಾತ್ರೆಗೆ ಸುರಿದು ಮೇಲೆ ಮೆತ್ತಗೆ ಒತ್ತಿಕೊಳ್ಳಿ.
ಈಗ ಉಳಿದ ಬಿಳಿ ಹಾಗೂ ಹಸಿರು ಬಣ್ಣದ ಬಾತ್‌ಗೂ ಕೂಡ ಇದೇ ರೀತಿಯಾಗಿ ಕ್ರಮದಲ್ಲಿ ಮಾಡಿ. ಬಿಳಿ ಬಣ್ಣಕ್ಕೆ ಕೇವಲ ರವೆ ಹಾಕಿ ಬಳಿಕ ಕೇಸರಿ ರವೆಯ ಬಳಿಕ ಬಿಳಿ ರವೆಯ ಬಾತ್ ಹಾಕಿ ಮೇಲಿನಿಂದ ಒತ್ತಿಡಿ. ಹಾಗೆ ಹಸಿ ಬಣ್ಣ ಹಾಕಿ ರವೆ ಸಕ್ಕರೆ ಹಾಕಿ ನಂತರ ಅದನ್ನು ಕೂಡ ಬಾಕ್ಸ್‌ಗೆ ಹಾಕಿ ಮೇಲೆ ತುಪ್ಪ ಸವರಿ ಹಾಕಿಡಿ.
ಈಗ ಒಂದು ತಟ್ಟೆಗೆ ಮತ್ತೆ ತುಪ್ಪ ಸವರಿ ಈ ಮೂರು ಬಾತ್‌ಗಳು ಸ್ವಲ್ಪ ಗಟ್ಟಿಯಾಗಾದಾಗ ಬಾಕ್ಸ್ ಅನ್ನು ಉಲ್ಟಾ ಮಾಡಿ ಬಾಕ್ಸ್ ತೆಗೆಯಿರಿ. ಈಗ ಬರಿ ಬಾತ್ ಮಾತ್ರ ಉಳಿಯುವಂತೆ ಮಾಡಿ ನಂತರ ಇದನ್ನು ಕತ್ತರಿಸಿದರೆ ಕೇಸರಿ ಬಿಳಿ ಹಸಿರು ಬಣ್ಣದ ತಿಂಡಿ ರೆಡಿಯಾಗಿರುತ್ತದೆ.



Click it and Unblock the Notifications

