Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಸಾಂಪ್ರದಾಯಿಕ ಅಕ್ಕಿ ವಡೆ ಸವಿದರೆ ನಿತ್ಯ ಇದೇ ತಿಂಡಿ ಬೇಕು ಅನ್ನೋದು ಪಕ್ಕ!
ಮನೆಗಳಲ್ಲಿ ಹಿಂದೆಲ್ಲಾ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡುತ್ತಿದ್ದ ಹಲವು ಅಡುಗೆಗಳನ್ನು ನಾವು ಮರೆತಿದ್ದೇವೆ. ಅದ್ರಲ್ಲೂ ಹಬ್ಬದ ಸಮಯದಲ್ಲಿ ಮಾತ್ರವಲ್ಲ ನಿತ್ಯ ಮನೆಯಲ್ಲಿ ಮಾಡುತ್ತಿದ್ದ ರುಚ ರುಚಿತ ಅಡುಗೆಗಳನ್ನು ಈಗ ಮಾಡೋದು ಕಡಿಮೆಯಾಗಿದೆ. ಅದ್ರಲ್ಲೂ ಈ ಹಬ್ಬದ ಸಮುಯದಲ್ಲಿ ಮಾಡುತ್ತಿದ್ದ ಅಕ್ಕಿ ವಡೆ ಈಗ ಮರೆತು ಹೋಗಿದೆ.
ಈ ಅಕ್ಕಿ ವಡೆ ಸಾಂಪ್ರಾದಾಯಿಕ ತಿಂಡಿಯಾಗಿದ್ದು, ದಕ್ಷಿಣ ಭಾರತದಲ್ಲಿ ಬೆಳಗ್ಗೆ ತಿಂಡಿಗೆ ಸವಿಯುವುದು ಕಾಮನ್, ಹಾಗೆ ರುಚಿ ರುಚಿಯಾಗಿ ಇದನ್ನು ಸವಿಯಬಹುದು. ಹಾಗಾದ್ರೆ ಈ ರುಚಿ ರುಚಿ ಅಕ್ಕಿ ವಡೆ ಮಾಡೋದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಈ ಅಕ್ಕಿ ವಡೆಯನ್ನು ಹೆಚ್ಚಾಗಿ ಹಬ್ಬದ ಸಂದರ್ಭದಲ್ಲಿ ಮಾಡುತ್ತಾರೆ. ಮುಂಬರುವ ಈ ಗಣೇಶನ ಹಬ್ಬಕ್ಕೂ ಕೂಡ ಮಾಡಿ ಸವಿಯಬಹುದು. ಹಾಗಾದ್ರೆ ಈ ಅಕ್ಕಿ ವಡೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಅಕ್ಕಿ ವಡೆ ಮಾಡಲು ಬೇಕಾಗುವ ವಸ್ತುಗಳು?
- ಅಕ್ಕಿ
- ಉದ್ದು
- ಕಾಯಿ ತುರಿ
- ಜೀರಿಗೆ
- ಕೊತ್ತಂಬರಿ ಕಾಳು
- ಸಾಸಿವೆ
- ಒಣ ಮೆಣಸು
- ಎಣ್ಣೆ
- ಇಂಗು
- ಓಂಕಾಳು
- ಉಪ್ಪು
ಅಕ್ಕಿ ವಡೆ ಮಾಡುವುದು ಹೇಗೆ?
ಮೊದಲು ಒಂದು ಬೌಲ್ನಲ್ಲಿ 2 ಕಪ್ ಅಕ್ಕಿ ಹಾಕಿ 2 ಗಂಟೆಗಳ ಕಾಲ ನೆನೆಸಿಡಬೇಕು. ಬಳಿಕ ಅಕ್ಕಿಯನ್ನು ಜರಡಿಯಲ್ಲಿ ಹಾಕಿ ನೀರು ತೆಗೆದು 10ರಿಂದ 15 ನಿಮಿಷ ಸ್ವಲ್ಪ ಡ್ರೈ ಆಗಲು ಬಿಡಬೇಕು. ಬಟ್ಟೆಯಲ್ಲಿ ಹರಡಿ ಸ್ವಲ್ಪ ಒಣಗಿಸಿಕೊಳ್ಳಿ. ಕಜ್ಜಾಯ ಮಾಡಲು ಬೇಕಾಗುವಂತಹ ಹದದಲ್ಲಿ ಅಕ್ಕಿ ಇರಬೇಕು. ಈಗ ಈ ಅಕ್ಕಿಯನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ರವೆಯಂತೆ ಪುಡಿ ಮಾಡಿಕೊಳ್ಳಬೇಕು.
ಈಗ ಒಂದು ಬೌಲ್ಗೆ ಈ ಅಕ್ಕಿ ಹಿಟ್ಟು ಹಾಕಿಕೊಂಡು ಬಳಿಕ ಕಾಲು ಕಪ್ ಉದ್ದಿನ ಬೇಳೆ ನೆನೆಸಿ ಅದನ್ನು ಕೂಡ ನೀರು ಹಾಕಿ ರುಬ್ಬಿಕೊಂಡು ಅಕ್ಕಿ ಹಿಟ್ಟಿನ ಜೊತೆಗೆ ಸೇರಿಸಿಕೊಳ್ಳಿ. ಈಗ ಅದೇ ಮಿಕ್ಸಿ ಜಾರ್ಗೆ ಕಾಲು ಕಪ್ ಕಾಯಿ ತುರಿ, ಜೀರಿಗೆ, ಕೊತ್ತಂಬರಿ ಕಾಳು, ಸಾಸಿವೆ, ಬ್ಯಾಡಗಿ ಒಣ ಮೆಣಸು ಹಾಕಿಕೊಂಡು ಸ್ವಲ್ಪ ನೀರು ಸಹ ಹಾಕಿ ಗಟ್ಟಿಯಾಗಿ ಖಾರ ಮಾಡಿಕೊಳ್ಳಿ.
ಈ ಖಾರವನ್ನು ಸಹ ಅಕ್ಕಿ ಹಿಟ್ಟಿಗೆ ಹಾಕಿ, ನಂತರ ಓಂಕಾಳು, ಇಂಗು, ಉಪ್ಪು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಗಟ್ಟಿಯಾದರೆ ಸ್ವಲ್ಪ ನೀರು ಸಹ ಹಾಕಿ ಹಿಟ್ಟು ಕಲಸಿಕೊಳ್ಳಿ. ಈ ಹಿಟ್ಟು ಚಪಾತಿ ಹಿಟ್ಟಿನಂತರ ಹದಕ್ಕೆ ಬರಬೇಕು. ನಂತರ ಪಾತ್ರೆಯಲ್ಲಿ ಹಾಕಿ ಮುಚ್ಚಿ 1 ಗಂಟೆಗಳ ಕಾಲ ಈ ಹಿಟ್ಟನ್ನು ಹಾಗೆಯೇ ಇಡಿ.
ಈಗ ಗಟ್ಟಿಯಾದ ಹಿಟ್ಟಿಗೆ 2 ಚಮಚ ಎಣ್ಣೆ ಹಾಕಿ ಮತ್ತೆ ನಾದಿಕೊಳ್ಳಬೇಕ. ಈಗ ಸಣ್ಣ ಉಂಡೆ ತೆಗೆದುಕೊಂಡು ಹಿಟ್ಟನ್ನು ಚಪಾತಿಯಂತೆ ಲಟ್ಟಿಸಬೇಕು. ನಿಪ್ಪಟ್ಟಿನ ಗಾತ್ರಕ್ಕೆ ಹಿಟ್ಟು ಲಟ್ಟಿಸಿಕೊಂಡು ಮಧ್ಯದಲ್ಲಿ ತೂತು ಮಾಡಿ ಕಾವಲಿಯಲ್ಲಿ ಇಟ್ಟ ಎಣ್ಣೆಗೆ ಇಳಿ ಬಿಡಬೇಕು. ಕೈಯಲ್ಲಿ ತಟ್ಟಿ ಕೂಡ ಇದನ್ನು ಮಾಡಬಹುದು. ಎಣ್ಣೆಯಲ್ಲಿ ಚೆನ್ನಾಗಿ ಕರಿದುಕೊಳ್ಳಬೇಕು. ಇದು ಉಬ್ಬಿ ಬರಲಿದೆ. ಹೀಗೆ ಎಲ್ಲಾ ಹಿಟ್ಟಿನಿಂದಲೂ ಈ ವಡೆ ಮಾಡಿ.



Click it and Unblock the Notifications
