Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮೂಳೆಯನ್ನು ಕಬ್ಬಿಣದಂತಾಗಿಸುವ ರಾಗಿ-ಶೇಂಗಾ ಉಂಡೆ ಇಲ್ಲಿದೆ.! ಮಾಡೋದು ಬಹಳ ಸುಲಭ!
ರಾಗಿ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದನ್ನು ನೀವು ತಿಳಿದಿರಬಹುದು. ಹಾಗೆ ಶೇಂಗಾ ಬೀಜಗಳು ಕೂಡ ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ ಅಂಶಗಳ ನೀಡುವ ಖಾದ್ಯ. ನಮ್ಮ ದೈನಂದಿನ ಆಹಾರದಲ್ಲಿ ಕಾಳುಗಳನ್ನು ಹೆಚ್ಚಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮವಾಗಿರಲಿದೆ. ರಾಗಿ ಭಾರತದ ಸಾಂಪ್ರದಾಯಿಕ ಆಹಾರ ಪದ್ದತಿ ಎನ್ನಬಹುದು.
ರಾಗಿ ಮುದ್ದೆ ಇಂದಿಗೂ ರಾಜ್ಯದ ಪ್ರಮುಖ ಆಹಾರವಾಗಿದೆ. ರಾಗಿಯಿಂದ ಮಾಡುವ ಹಲವು ಖಾದ್ಯಗಳನ್ನು ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ರಾಗಿಯಲ್ಲಿರು ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಫೈಬರ್ ಅಂಶವು ನಿಮಗೆ ಬಹಳ ಪ್ರಯೋಜನಕಾರಿ. ಇದರಲ್ಲಿನ ವಿಟಮಿನ್ ಬಿ, ಡಿ, ಕ್ಯಾಲ್ಸಿಯಂ ಅಂಶ ಹಾಗೆ ಜೀವಸ್ವಗಳು ನಿಮ್ಮ ದೇಹವನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಲಿವೆ.

ಹಾಗೆ ರಾಗಿಯು ದೇಹದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಹಾಗೆ ತೂಕ ಇಳಿಕೆಗೆ ಸಹಕಾರಿಯಾಗಿದೆ. ಮಕ್ಕಳ ಆರೋಗ್ಯಕ್ಕೂ ಇದು ಬಹಳ ಸಹಕಾರಿಯಾದ ಅಂಶ. ಅಪೌಷ್ಟಿಕತೆ ನಿವಾರಣೆಗಾಗಿ ಈಗಲೂ ಮಕ್ಕಳಿಗೆ ರಾಗಿಯನ್ನೇ ನೀಡಲು ಸಲಹೆ ನೀಡಲಾಗುತ್ತದೆ. ಇದೊಂದು ಸರ್ವ ಗುಣಗಳ ಹೊಂದಿರುವ ಆಹಾರ ಪದಾರ್ಥ ಎನ್ನಬಹುದು.
ಇನ್ನು ಈ ರಾಗಿಯನ್ನು ಬಳಸಿ ಎಷ್ಟೊಂದು ಖಾದ್ಯಗಳ ಮಾಡಬಹುದು ಎಂಬುದು ನಿಮಗೂ ತಿಳಿದಿರಬಹುದು. ಇಂದು ರಾಗಿ ಹಾಗೂ ಶೇಂಗಾವನ್ನು ಬಳಸಿ ಅದ್ಭುತ ರುಚಿಯಲ್ಲಿ ಹಾಗೆ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿ ಮಾಡುವ ಉಂಡೆಯನ್ನು ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ರಾಗಿ ಹಾಗೂ ಶೇಂಗಾ ಬಳಸಿ ಮಾಡುವ ಈ ಉಂಡೆಯು ನಿಮ್ಮ ಮೂಳೆಗ ಬಲ ಪಡಿಸುವುದು ಮಾತ್ರವಲ್ಲ. ರಕ್ತಪರಿಚಲನೆ ಸುಧಾರಿಸಲು ಕೂಡ ಉತ್ತಮ ಖಾದ್ಯವಾಗಿರಲಿದೆ. ಹಾಗಾದ್ರೆ ಈ ರಾಗಿ ಉಂಡೆ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಗಿ ಶೇಂಗಾ ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರಾಗಿ ಹಿಟ್ಟು
- ಶೇಂಗಾ ಬೀಜಗಳು
- ಬೆಲ್ಲ
- ಎಳ್ಳು
- ತುಪ್ಪ
ರಾಗಿ ಶೇಂಗಾ ಉಂಡೆ ಮಾಡುವ ವಿಧಾನವೇನು?
ಮೊದಲಿಗೆ ಬಾಣಲೆ ತೆಗೆದುಕೊಂಡು ಅದಕ್ಕೆ ರವೆ ಹಾಕಿಕೊಂಡು ಅಷ್ಟೇ ಪ್ರಮಾಣದಲ್ಲಿ ರಾಗಿ ಹಿಟ್ಟು ಕೂಡ ಹಾಕಿಕೊಂಡು ಬಳಿಕ 2 ಸ್ಪೂನ್ ತುಪ್ಪ ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈ ರೀತಿ ಫ್ರೈ ಮಾಡುವಾಗ ಘಮ ಬರಬೇಕು. ನಂತರ ಬಣ್ಣ ಬದಲಾದಾಗ ಒಲೆ ಆಫ್ ಮಾಡಿಕೊಳ್ಳಿ. ನಂತರ ಇದಕ್ಕೆ 1 ಕಪ್ ಬೆಲ್ಲದ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬೇಕಿದ್ದರೆ ಈಗ ಒಣ ಕೊಬ್ಬರಿ ಕೂಡ ಹಾಕಿಕೊಳ್ಳಬಹುದು.
ಹಾಗೆ ಘಮಕ್ಕೆ ನೀವು ಹುರಿದ ಎಳ್ಳು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬಹುದು. ತಣ್ಣಗಾದಾದ ಕೈಯಿಂದಲೇ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಚಪಾತಿ ಹಿಟ್ಟಿನಂತೆ ಹದ ಬರಬೇಕು. ಸ್ವಲ್ಪ ಹಾಲು ಅಥವಾ ನೀರು ಹಾಕಿಕೊಳ್ಳುತ್ತಾ ಈ ರೀತಿ ಹದ ಮಾಡಿಕೊಂಡು ಒಂದು ತಟ್ಟೆ ಮುಚ್ಚಿ ಇಟ್ಟು ಗಟ್ಟಿಯಾಗಲು ಬಿಡಿ. ಹಾಗೆ ಶೇಂಗಾ ಬೀಜಗಳನ್ನು ಹುರಿದು ತಣ್ಣಗಾಲು ಇಡಿ.
ಈಗ ಹಿಟ್ಟನ್ನು ಸಣ್ಣ ಸಣ್ಣದಾಗಿ ತೆಗೆದುಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿ ಪತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ. ಹಾಗೆ ಪುಡಿ ಮಾಡುವಾಗ ಮೊದಲು ಹುರಿದ ಎಳ್ಳು ಹಾಕಿಕೊಳ್ಳದೆ ಇದ್ದರೆ ಈಗ ಹಾಕಿ ಹುರಿದುಕೊಳ್ಳಿ. ನಂತರ ಇದಕ್ಕೆ ಏಲಕ್ಕಿ ಪುಡಿ, ಚಿಟಿಕೆ ಉಪ್ಪು ಸಹ ಹಾಕಿ ಪುಡಿ ಮಾಡಿಕೊಳ್ಳಿ. ಕೊನೆಯಲ್ಲಿ ಶೇಂಗಾ ಬೀಜವನ್ನು ಸಹ ಇದಕ್ಕೆ ಹಾಕಿ ಪುಡಿ ಮಾಡಿಕೊಳ್ಳಿ. ಈಗ ಪುಡಿಯಾದ ವಸ್ತುಗಳನ್ನು ಒಂದು ಬೌಲ್‌ಗೆ ಹಾಕಿ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಲು ಮುಂದಾಗಿ. ಹೀಗೆ ಉಂಡೆ ಕಟ್ಟಿದರೆ ನಿಮ್ಮ ಮುಂದೆ ರಾಗಿ ಶೇಂಗಾ ಬೀಜದ ಉಂಡೆ ರೆಡಿಯಾಗುತ್ತದೆ. ನೀವು ಕೂಡ ಈ ರೀತಿ ಸಿಹಿಯಾದ ಉಂಡೆ ಮಾಡಿ ನೋಡಿ.



Click it and Unblock the Notifications
