Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಸಾಂಪ್ರದಾಯಿಕ ಶೈಲಿಯಲ್ಲಿ ನಿಂಬೆ ಕಾಯಿ ಉಪ್ಪಿನಕಾಯಿ ಮಾಡಿ..! 1 ವರ್ಷ ಇಟ್ಟು ಸವಿಯಬಹುದು
ನೀವು ಊಟದ ಜೊತೆಗೆ ಉಪ್ಪಿನಕಾಯಿ ಸವಿಯುವ ಮಂದಿ ಆದಿದ್ದರೆ ಬಹಳ ಸಮಯದಿಂದ ಉಪ್ಪಿನಕಾಯಿ ಸವಿಯುವ ಅಭ್ಯಾಸ ಬೆಳೆಸಿಕೊಂಡಿದ್ದರೆ ನಿಮಗೆ ಉಪ್ಪಿನಕಾಯಿ ಊಟ ತಿಂಡಿಯ ಜೊತೆಗೆ ಇರಲೇಬೇಕು. ಹಾಗೆ ಈಗ ಮಾರುಕಟ್ಟೆಯಲ್ಲಿ ಎಷ್ಟೊಂದು ವಿಧವಾದ ಉಪ್ಪಿನಕಾಯಿಗಳು ಬಂದಿವೆ ಅನ್ನೋದನ್ನು ನೀವು ಊಹಿಸಲು ಕೂಡ ಸಾಧ್ಯವಿಲ್ಲ.
ಪ್ರತಿಯೊಂದು ತರಕಾರಿಯಿಂದ ಹಿಡಿದು ಮಾಂಸಹಾರಿ ಉಪ್ಪಿನಕಾಯಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇನ್ನು ಎಲ್ಲಾ ಮಾರುಲಟ್ಟೆಯಲ್ಲೂ ನಿಮಗೆ ನೋಡಲು ಸಿಗುತ್ತವೆ. ಉಪ್ಪಿನಕಾಯಿ ಮಾರುಕಟ್ಟೆ ಸಹ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಹಲವರಿಗೆ ಇದು ಉದ್ಯೋಗ ನೀಡುತ್ತಿದೆ. ಅದರಲ್ಲೂ ಉಪ್ಪಿನಕಾಯಿ ರುಚಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.

ಇನ್ನು ಮನೆಯಲ್ಲೇ ಮಾಡಿರುವ ಉಪ್ಪಿನಕಾಯಿ ಅಂದ್ರೆ ಎಲ್ಲರಿಗೂ ಇಷ್ಟ. ಸಾಂಪ್ರದಾಯಿಕ ಶೈಲಿಯಲ್ಲಿ ಉಪ್ಪಿನಕಾಯಿ ಹಾಕಿದರೆ ಬಹಳ ರುಚಿಕರವಾಗಿರುತ್ತೆ. ನೀವು ಸಹ ಈ ಉಪ್ಪಿನಕಾಯಿಯನ್ನು ಸವಿದು ನೋಡಿರುತ್ತೀರಿ. ಇನ್ನು ನಿಮ್ಮ ಆರೋಗ್ಯಕ್ಕೂ ಕೂಡ ಉಪ್ಪಿನಕಾಯಿ ಬಹಳ ಉತ್ತಮವಾಗಿರಲಿದೆ. ಉಪ್ಪಿನಕಾಯಿ ನಿಮ್ಮ ದೇಹದ ಹಲವು ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಲಿದೆ. ಏಕೆಂದರೆ ಇದರಲ್ಲಿ ಉಂಗು ಜೀರಿಗೆ, ಶುಂಠಿ, ಅಜ್ವೈನಾ ಹೀಗೆ ಹತ್ತು ಹಲವು ರೀತಿಯ ಔಷಧಿಕರ ಅಂಶಗಳ ಹಾಕಲಾಗುತ್ತದೆ.
ಹೀಗಾಗಿ ನಾವಿಂದು ಮನೆಯಲ್ಲೇ ಮಾಡುವ ನಿಂಬೆ ಕಾಯಿಯ ಉಪ್ಪಿನಕಾಯಿ ಕುರಿತು ತಿಳಿಯೋಣ. ನಿಂಬೆ ಕಾಯಿ ಉಪ್ಪಿನಕಾಯಿಯು ಬಹಳ ರುಚಿಯಾಗಿರುತ್ತೆ. ಊಟದ ಜೊತೆಗಂತು ಅದ್ಭುತ. ಆದ್ರೆ ಸಾಂಪ್ರದಾಯಿಕ ರೀತಿಯಲ್ಲಿ ಈ ಉಪ್ಪಿನಕಾಯಿ ಮಾಡಿ ಸವಿಯುವ ಕುರಿತು ನಾವು ತಿಳಿಯೋಣ. ನಿಂಬೆಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿಯೋಣ.
ನಿಂಬೆ ಕಾಯಿ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ನಿಂಬೆ ಕಾಯಿ- 10
ಖಾರದ ಪುಡಿ
ಮೆಣಸು
ಇಂಗು
ಕಾಳು ಮೆಣಸು
ಸಾಸಿವೆ
ಎಣ್ಣೆ
ಉಪ್ಪು
ನಿಂಬೆ ಕಾಯಿ ಉಪ್ಪಿನಕಾಯಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಮೆಂತ್ಯ ಹಾಕಿ ಹುರಿದುಕೊಳ್ಳಿ. ಚೆನ್ನಾಗಿ ಹುರಿದ ಬಳಿಕ ಬೌಲ್ಗೆ ಹಾಕಿಟ್ಟುಕೊಳ್ಳಿ. ನಂತರ ಮತ್ತೆ ಸಾಸಿವೆ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ಕೂಡ ಒಂದು ಬೌಲ್ಗೆ ಹಾಕಿಡಿ. ನಂತರ ಬಾಣಲೆಗೆ ಅರ್ಧ ಕಪ್ ಎಣ್ಣೆ ಹಾಕಿಕೊಂಡು ಅದಕ್ಕೆ ಕಾಳು ಮೆಣಸು, ಇಂಗು ಹಾಕಿಕೊಳ್ಳಿ.
ಎಣ್ಣೆ ಕುದಿಬರಲು ಬಿಟ್ಟು ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈಗ ಪುಡಿ ಮಾಡಿಕೊಂಡಿದ್ದ ಎರಡು ವಸ್ತುಗಳನ್ನು ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈಗ ನಿಂಬೆ ಕಾಯಿಗಳನ್ನು ಕತ್ತರಿಸಿಕೊಳ್ಳಿ. 1 ನಿಂಬೆಕಾಯಿಯಲ್ಲಿ 4 ಹೋಳುಗಳನ್ನು ಮಾಡಿಕೊಳ್ಳಿ. ಕತ್ತರಿಸಿದ ನಿಂಬೆಗಳನ್ನು ಬೌಲ್ಗೆ ಹಾಕಿ ಅದಕ್ಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದಕ್ಕೆ ಅರಶಿಣ ಹಾಗೂ ಖಾರದ ಪುಡಿ ಕೂಡ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹಾಗೆ ನಾವು ಪುಡಿ ಮಾಡಿಕೊಂಡಿದ್ದ ಮಸಾಲೆಯನ್ನು ಕೂಡ ಇದರ ಮೇಲೆ ಹಾಕಿ ಮಿಕ್ಸ್ ಮಾಡಿ.
ಈಗ ತಣ್ಣಗಾಗಲು ಇಟ್ಟಿದ್ದ ಎಣ್ಣೆಯನ್ನು ಸಹ ಇದಕ್ಕೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿ. ಕೈಯಿಂದ ಮಿಕ್ಸ್ ಮಾಡಬೇಡಿ. ಗಾಜಿನ ಡಬ್ಬಿಯಲ್ಲಿ ಹಾಕಿ ಎರಡು ದಿನಕ್ಕೊಮ್ಮೆ ಮಿಕ್ಸ್ ಮಾಡುತ್ತಾ ಇರಿ. ನೀವು ಇದನ್ನು ವರ್ಷಗಳ ಕಾಲ ಇಟ್ಟು ಸವಿಯಬಹುದು.



Click it and Unblock the Notifications