Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬ್ರೇಕ್ಫಾಸ್ಟ್ಗೆ ತೋತಾಪುರಿ ಮ್ಯಾಂಗೋ ಮಸಾಲ ರೈಸ್: ಬಾಯಲ್ಲಿ ನೀರು ಬರೋದು ಗ್ಯಾರಂಟಿ!
ವರ್ಷದಲ್ಲಿ ಕೆಲವೇ ತಿಂಗಳು ನೀವು ಮಾವಿನ ಹಣ್ಣಿನ ಸ್ವಾದ ಸವಿಯುತ್ತೀರಿ. ಆದ್ರೆ ವರ್ಷ ಪೂರ್ತಿ ನೀವು ಮಾವಿನ ಕಾಯಿ ಸವಿಯಬಹುದು. ಅದ್ರಲ್ಲೂ ಮಾವಿನ ಕಾಯಿಯಿಂದ ಮಾಡುವ ಹಲವು ರೀತಿಯ ಖಾದ್ಯಗಳು ನಿಮಗೆ ಬಹಳ ರುಚಿ ತರಲಿವೆ. ಅದ್ರಲ್ಲೂ ನಾವಿನ ಕಾಯಿ ಚಟ್ನಿ, ಮಾವಿನ ಕಾಯಿ ಚಿತ್ರಾನ್ನ ಸೇರಿದಂತೆ ಹಲವು ವಿಶೇಷ ರುಚಿಯ ಖಾದ್ಯ ಮಾಡಿ ಸವಿಯೋದು ಕಾಮನ್.
ನಾವಿಂದು ಮಾವಿನಕಾಯಿಯಿಂದ ಮಾಡುವಮತಹ ರುಚಿ ರುಚಿಯಾದ ಮಸಾಲ ಮ್ಯಾಂಗೋ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ರೈಸ್ನಿಂದ ಮಾಡುವ ಹಲವು ರೀತಿಯ ವಿಶೇಷ ಖಾದ್ಯಗಳನ್ನು ನಿತ್ಯ ಮಾಡಿರಬಹುದು. ಆದ್ರೆ ಇಂದು ಮ್ಯಾಂಗೋ ಮಸಾಲ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ತೋತಾಪುರಿ ಮಾವಿನಕಾಯಿ ಬಳಸಿ ಈ ರೈಸ್ ಮಾಡಲಾಗುತ್ತದೆ.

ಮ್ಯಾಂಗೋ ಮಸಾಲ ರೈಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಹಾಗೆ ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗೆ ಬೆಳಗ್ಗಿನ ತಿಂಡಿ ಸಮಯಕ್ಕೆ ನಾವು ಈ ಮ್ಯಾಂಗೋ ಮಸಾಲ ರೈಸ್ ಮಾಡಿ ಸವಿಯುವ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳೋಣ.
ತೋತಾಪುರಿ ಮ್ಯಾಂಗೋ ಮಸಾಲ ರೈಸ್ ಮಾಡಲು ಅಗತ್ಯ ವಸ್ತುಗಳು
- ಮಾವಿನಕಾಯಿ
- ಅನ್ನ
- ಕಡಲೆ ಬೇಳೆ
- ಉದ್ದಿನ ಬೇಳೆ
- ಕೊತ್ತಂಬರಿ ಕಾಳು
- ಸಾಸಿವೆ
- ಜೀರಿಗೆ
- ಮೆಂತ್ಯ
- ಬ್ಯಾಡಗಿ ಒಣ ಮೆಣಸಿನಕಾಯಿ
- ಬೆಳ್ಳುಳ್ಳಿ
- ತೆಂಗಿನಕಾಯಿ
- ಸಾಸಿವೆ - 1/4 ಟೀಸ್ಪೂನ್
- ಹಸಿಮೆಣಸಿನಕಾಯಿ - 3
- ಕರಿಬೇವು - 1 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ತೋತಾಪುರಿ ಮ್ಯಾಂಗೋ ಮಸಾಲ ರೈಸ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಉದ್ದಿನ ಬೇಳೆ, ಕಡಲೆ ಬೇಳೆ, ಕೊತ್ತಂಬರಿ ಕಾಳು, ಹಾಕಿ ಬಿಡಿ ಮಾಡಿ ಬಳಿಕ ಜೀರಿಗೆ, ಸಾಸಿವೆ, ಮೆಂತ್ಯ ಕಾಳು ಹಾಕಿ ಹದವಾಗಿ ಹುರಿದುಕೊಳ್ಳಿ. ಹಾಗೆ ಬ್ಯಾಡಗಿ ಮೆಣಸು ಸಹ ಹಾಕಿ ಫ್ರೈ ಮಾಡಿ ತೆಗೆದು ಒಂದು ತಟ್ಟೆಗೆ ಹಾಕಿ ತಣ್ಣಗಾಗಲಿ ಬಿಡಿ. ಈಗ ಮಿಕ್ಸಿ ಜಾರ್ಗೆ ಈ ಎಲ್ಲಾ ವಸ್ತುಗಳ ಹಾಕಿ ಬಳಿಕ ಅದಕ್ಕೆ ತೆಂಗಿನಕಾಯಿ ತುರಿ ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಮತ್ತೆ ಬಾನಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ. ಅನಂತರ ಹಸಿ ಮೆಣಸು, ಕರಿಬೇವು ಹಾಕಿಕೊಂಡು ಈಗ ರುಬ್ಬಿಕೊಂಡಿದ್ದ ಮಸಾಲೆಗಳನ್ನು ಸಹ ಇದಕ್ಕೆ ಹಾಕಿ. ಈಗ ಉಪ್ಪು ಹಾಕಿ, ತುರಿದುಕೊಂಡಿರುವ ಮಾವಿನಕಾಯಿ ತುರಿ ಸಹ ಹಾಕಿಕೊಂಡು ಒಲೆ ಆಫ್ ಮಾಡಿ. ಕಾಲು ಭಾಗದಷ್ಟು ಮಾವಿನಕಾಯಿ ತುರಿ ಸಾಕಾಗುತ್ತದೆ.
ಈಗ ಈ ಬಾಣಲೆಗೆ ಮೊದಲೇ ಮಾಡಿಟ್ಟಿರುವ ಅನ್ನವನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ಎಲ್ಲಾ ಮಸಾಲೆಗಳು ಅನ್ನಕ್ಕೆ ಚೆನ್ನಾಗಿ ಹಿಡಿಯುವಂತೆ ಮಿಕ್ಸ್ ಮಾಡಬೇಕು. ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಇದಕ್ಕೆ ಹಾಕಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ತೋತಾಪುರಿ ಮಸಾಲೆ ರೈಸ್ ಸಿದ್ದವಾಗುತ್ತೆ ನೀವು ಕೂಡ ಇದನ್ನು ಬ್ರೇಕ್ ಫಾಸ್ಟ್ಗೆ ಮಾಡಿ ಸವಿದು ನೋಡಿ. ಈ ರುಚಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ರುಚಿ ಕೂಡ ಅದ್ಭುತವಾಗಿರಲಿದೆ.



Click it and Unblock the Notifications
