Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹಕ್ಕೆ ತಂಪು ನೀಡುವ ತೊಂಡೆಕಾಯಿ ತೆಂಗಿನ ರಸ..! ಮಾಡೋದು ಹೇಗೆ?
ನೀವು ಈ ಚಳಿಯ ಸಮಯದಲ್ಲಿ ರಾತ್ರಿ ಹೊತ್ತು ಮಸಾಲೆ ಭರಿತ ಊಟ ಸವಿಯಲು ಇಷ್ಪಪಡುತ್ತೀರಿ. ಆದ್ರೆ ಮಧ್ಯಾಹ್ನದ ಬಿಸಿಲಿಗೆ ಊಟ ತಿಂಡಿ ಕೂಡ ದೂರ ಮಾಡುವ ಮನಸ್ಸಾಗುತ್ತೆ. ಮಧ್ಯಾಹ್ನದ ಬಿಸಿಲಿನಲ್ಲಿ ತಣ್ಣಗೆ ಹುಳಿ, ಮಜ್ಜಿಗೆ ಹಾಕಿಕೊಂಡು ಊಟ ಮಾಡಲು ಇಷ್ಟಪಡುವವರು ಹೆಚ್ಚು. ಮಜ್ಜಿಗೆ ಹುಳಿ, ಕಾಯಿ ರಸ, ರಸಂ ಹೀಗೆ ಸರಳವಾಗಿ ಮಾಡುವಂತಹ ಯಾವುದಾದರು ರಸಂ, ಹುಳಿ, ಸಾಂಬಾರ್ ಮಾಡಿ ಸವಿಯುವುದು ಸಾಮಾನ್ಯ.
ಬಿಸಿಲಿನ ಸಮಯದಲ್ಲಿ ದೇಹಕ್ಕೆ ತಂಪು ತರುವಂತಹ ರಸ ಊಟದ ರುಚಿ ಹೆಚ್ಚಿಸಲಿದೆ. ಅದರಲ್ಲೂ ಈ ಹುಳಿಯನ್ನು ಎಷ್ಟು ವಿಧದಲ್ಲಿ ಮಾಡಬಹುದು ಎಂಬುದು ಕೂಡ ನಿಮಗೆ ತಿಳಿದಿರಬಹುದು. ಮಜ್ಜಿಗೆ ಬಳಸಿ, ಸೋರೆಕಾಯಿ, ತೆಂಗಿನಕಾಯಿ, ಸೌತೆಕಾಯಿ ಹೀಗೆ ಹಲವು ವಸ್ತುಗಳನ್ನು ಬಳಸಿ ರುಚಿ ರುಚಿಯ ಹುಳಿ ಮಾಡಬಹುದು.

ನಾವಿಂದು ದೇಹಕ್ಕೆ ತಂಪು ನೀಡುವಂತಹ ತೊಂಡೆಕಾಯಿ ಬಳಸಿ ಮಾಡುವಂತಹ ಮಜ್ಜಿಗೆ ಹುಳಿ ಕುರಿತು ತಿಳಿದುಕೊಳ್ಳೋಣ. ಈ ಹುಳಿಯು ಅನ್ನದ ಜೊತೆಗೆ ಅದ್ಭುತ ರುಚಿ ನೀಡಲಿದೆ. ದೇಹಕ್ಕೂ ಬಹಳ ತಂಪು ನೀಡಲಿದೆ. ಹಾಗಾದ್ರೆ ತೊಂಡೆಕಾಯಿಯ ಮಜ್ಜಿಗೆ ಹುಳಿ ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ಈ ಹುಳಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ತೊಂಡೆಕಾಯಿ ಮಜ್ಜಿಗೆ ಹುಳಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೊಂಡೆಕಾಯಿ ರಸ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ತೊಂಡೆಕಾಯಿ
- ತೆಂಗಿನಕಾಯಿ
- ಹಸಿ ಮೆಣಸು
- ಕರಿಬೇವು
- ಒಣ ಮೆಣಸು
- ಸಾಸಿವೆ
- ಉಪ್ಪು
- ಎಣ್ಣೆ
- ಉದ್ದಿನ ಬೇಳೆ
ತೊಂಡೆಕಾಯಿ ರಸ ಮಾಡುವ ವಿಧಾನವೇನು?
ಮೊದಲು ತೊಂಡೆಕಾಯಿಯನ್ನು ಚೆನ್ನಾಗಿ ತೊಳೆದು ಎರಡು ಕಡೆಗಳಲ್ಲಿ ಕತ್ತರಿಸಿಕೊಂಡು ಬಳಿಕ ಒಂದು ತೊಂಡೆಕಾಯಿಯಲ್ಲಿ ಎರಡು ಭಾಗವಾಗಿ ಕತ್ತರಿಸಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಹಾಕಿ ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು. ಕುಕ್ಕರ್ಗೂ ಹಾಕಿ ಬೇಯಿಸಬಹುದು. ಆದರೆ ಸೀಟಿ ಹೊಡೆಸಿಕೊಳ್ಳಬೇಡಿ. ಒಂದು ಸೀಟಿಗೂ ಮೊದಲೇ ಆಫ್ ಮಾಡಿಕೊಳ್ಳಿ.
ಈಗ ಇನ್ನೊಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಉದ್ದಿನ ಬೇಳೆ ಹಾಗೂ 3 ಹಸಿ ಮೆಣಸಿನ ಕಾಯಿಯನ್ನು ಸೀಳಿಕೊಂಡು ಇದಕ್ಕೆ ಹಾಕಿ ಫ್ರೈ ಮಾಡಿ. ಎಣ್ಣೆ ಹಾಕಿಕೊಳ್ಳದೆ ಫ್ರೈ ಮಾಡಬೇಕು. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗುವಷ್ಟು ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ತಣ್ಣಗಾಗಲು ಬಿಡಿ, ನಂತರ ಒಂದು ಮಿಕ್ಸಿ ಜಾರ್ಗೆ ತೆಂಗಿನ ತುರಿ ಹಾಕಿ, ಫ್ರೈ ಮಾಡಿದ ಉದ್ದಿನ ಬೇಳೆ ಹಾಕಿಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. 3 ಸುತ್ತು ರುಬ್ಬಿದ ಬಳಿಕ ಫ್ರೈ ಮಾಡಿದ ಹಸಿ ಮೆಣಸಿನ ಕಾಯಿ ಕೂಡ ಇದಕ್ಕೆ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ಈಗ ಬೇಯಿಸಿಕೊಂಡಿರುವ ತೊಂಡೆಕಾಯಿಯನ್ನು ಒಲೆ ಮೇಲೆ ಇಟ್ಟು ಸಣ್ಣ ಉರಿ ಇಟ್ಟು ಬೇಯಲು ಬಿಡಿ. ಹಾಗೆ ರುಬ್ಬಿಕೊಂಡಿರುವ ಕಾಯಿಯ ಮಿಶ್ರಣವನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಳ್ಳಿ. ತಕ್ಷಣ ಒಲೆ ಆಫ್ ಮಾಡಿಕೊಳ್ಳಿ. ಈಗ ಒಂದು ಸಣ್ಣ ಪಾತ್ರೆಯಲ್ಲಿ ಒಗ್ಗರಣೆ ಮಾಡಿ. ಎಣ್ಣೆ ಹಾಕಿ ಸಾಸಿವೆ, ಒಣ ಮೆಣಸು, ಕರಿಬೇವು ಹಾಕಿ ಆ ಒಗ್ಗರಣೆಯನ್ನು ಈ ಕಾಯಿ ಸಾರಿಗೆ ಹಾಕಿ ಮಿಕ್ಸ್ ಮಾಡಿಕೊಂಡರೆ ಅದ್ಭುತ ರುಚಿಯ ತೊಂಡೆಕಾಯಿ ರಸ ರೆಡಿಯಾಗುತ್ತೆ.



Click it and Unblock the Notifications
