Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಬಾಯಿ ರುಚಿಗೆ ತೊಂಡೆಕಾಯಿ ಪಲ್ಯ..! ಇಲ್ಲಿದೆ ಸುಲಭ ರೆಸಿಪಿ!
ಊಟಕ್ಕೆ ನೀವು ಒಂದಲ್ಲಾ ಒಂದು ಪಲ್ಯ ಬಳಸುತ್ತಿರಿ. ಅದ್ರಲ್ಲೂ ತರಕಾರಿ ಸಾರು ಇದ್ದಾಗ ಮತ್ತೊಂದು ತರಕಾರಿ ಪಲ್ಯ ಇದ್ದರಷ್ಟೇ ಊಟ ಚೆನ್ನಾಗಿ ಸೇರುತ್ತದೆ. ಇಲ್ಲದೆ ಇದ್ದರೆ ಊಟ ಮಾಡಿದರೂ ಮಾಡಿದಂತೆ ಅನಿಸುವುದಿಲ್ಲ. ನಾವು ಈಗಾಗಲೇ ಹಲವು ತರಕಾರಿಯ ಪಲ್ಯ ಮಾಡುವ ಕುರಿತಂತೆ ರೆಸಿಪಿಗಳ ತಿಳಿಸಿದ್ದೇವೆ. ಇಂದು ಸಹ ಮತ್ತೊಂದು ತರಕಾರಿಯ ಪಲ್ಯ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ನಾವಿಂದು ತೊಂಡೆಕಾಯಿ ಪಲ್ಯ ಮಾಡುವ ಕುರಿತಂತೆ ತಿಳಿಯೋಣ. ತೊಂಡೆಕಾಯಿ ಊಟದ ಜೊತೆಗೆ ಪಲ್ಯ ಮಾಡಿದರೆ ಅದರ ರುಚಿಯೇ ಬೇರೆ. ತೊಂಡೆಕಾಯಿಯನ್ನು ಸಾಂಬಾರ್ ಜೊತೆ ಸವಿಯುವುದಕ್ಕಿಂತಲೂ ಪಲ್ಯ ಮಾಡಿದರೇನೆ ಹೆಚ್ಚು ರುಚಿ. ಆರೋಗ್ಯದ ದೃಷ್ಟಿಯಿಂದಲೂ ಸಹ ಈ ತೊಂಡೆಕಾಯಿ ಉತ್ತಮ ತರಕಾರಿ.

ತೊಂಡೆಕಾಯಿಯಲ್ಲಿ ವಿಟಮಿನ್ ಎ ಮತ್ತು ಸಿ ಯ ಅತ್ಯುತ್ತಮ ಮೂಲವಾಗಿದೆ, ಇದು ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮದ ಆರೋಗ್ಯವನ್ನು ಉತ್ತೇಜಿಸಲು ನಿರ್ಣಾಯಕವಾಗಿದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಆದರೆ ನೀರಿನ ಅಂಶ ಮತ್ತು ಫೈಬರ್‌ನಲ್ಲಿ ಅಧಿಕವಾಗಿದೆ, ಇದು ನಿಮಗೆ ಹೆಚ್ಚು ಸಮಯ ಪೂರ್ಣವಾಗಿರಲು ಸಹಾಯ ಮಾಡುತ್ತದೆ.
ಹಾಗಾದ್ರೆ ನಾವಿಂದು ರುಚಿ ರುಚಿಯಾಗಿ ತೊಂಡೆಕಾಯಿ ಪಲ್ಯ ಮಾಡುವುದು ಹೇಗೆ? ತೊಂಡೆಕಾಯಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ತೊಂಡೆಕಾಯಿ ಪಲ್ಯ ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೊಂಡೆಕಾಯಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ತೊಂಡೆಕಾಯಿ - 400 ಗ್ರಾಮ್
- ಅರಶಿನ
- ಎಣ್ಣೆ
- ಸಾಸಿವೆ
- ಜೀರಿಗೆ
- ಒಣ ಮೆಣಸು
- ತೆಂಗಿನಕಾಯಿ
- ಉದ್ದಿನ ಬೇಳೆ
- ಕಡಲೆ ಬೇಳೆ
- ಕರಿಬೇವು
- ಹುಣಸೆ ಹುಳಿ
ತೊಂಡೆಕಾಯಿ ಪಲ್ಯ ಮಾಡುವುದು ಹೇಗೆ?
ತೊಂಡೆಕಾಯಿಯನ್ನು ಚೆನ್ನಾಗಿ ತೊಳೆದು ಬಳಿಕ ವೃತ್ತಾಕಾರವಾಗಿ ಕತ್ತರಿಸಿಕೊಳ್ಳಬೇಕು. ಬಳಿಕ ಇದನ್ನು ಒಂದು ಕುಕ್ಕರ್‌ಗೆ ಹಾಕಿ ಬೇಯಿಸಿಕೊಳ್ಳಬೇಕು. ಕುಕ್ಕರ್‌ಗೆ ಹಾಕಿ ಅದಕ್ಕೆ ಉಪ್ಪು, ಅರಶಿನ, ಎಣ್ಣೆ, ನೀರು ಹಾಕಿಕೊಂಡು ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ಸೀಟಿ ಹೊಡೆಸಬೇಕು.
ಒಂದು ಸೀಟಿ ಹೊಡೆದಾಗ ಒಲೆ ಆಫ್ ಮಾಡಿ. ಬಳಿಕ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಎಣ್ಣೆ ಹಾಕದೆಯೇ ಸಾಸಿವೆ, ಜೀರಿಗೆ, ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಬೇಕು. ಇದಕ್ಕೆ ಎಣ್ಣೆ ಮಾತ್ರ ಹಾಕಬೇಡಿ. ಬಳಿಕ ಇದನ್ನು ಬದಿಗಿಟ್ಟುಕೊಳ್ಳಿ.
ಇದು ತಣ್ಣಗಾದ ಬಳಿಕ ಸಣ್ಣ ಮಿಕ್ಸಿ ಜಾರ್‌ಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ರುಬ್ಬಿಕೊಂಡ ಮಸಾಲೆಗೆ ತೆಂಗಿನಕಾಯಿ ಹಾಕಿ ಮತ್ತೆ ರುಬ್ಬಿಕೊಳ್ಳಬೇಕು. ಈಗ ರುಬ್ಬಿಕೊಂಡ ಮಸಾಲೆಯನ್ನು ಬದಿಗಿಟ್ಟುಕೊಳ್ಳಿ. ಈ ಮಸಾಲೆ ತರಿತರಿಯಾಗಿ ಇರಲಿ.
ಈಗ ಬೇಯಿಸಿಕೊಂಡಿರುವ ತೊಂಡೆಕಾಯಿಯನ್ನು ತೆಗೆದುಕೊಂಡು ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಇದಕ್ಕೆ ಎಣ್ಣೆ, ಜೀರಿಗೆ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ, ಕರಿವೇವು ಹಾಕಿ ಫ್ರೈ ಮಾಡಿಕೊಳ್ಳಿ. ಈಗ ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಬೇಯಿಸಿಕೊಂಡಿರುವ ತೊಂಡೆಕಾಯಿಯನ್ನು ಹಾಕಿ ಮಿಕ್ಸ್ ಮಾಡಿ. ಕೊನೆಯದಾಗಿ ಸ್ವಲ್ಪ ಹುಣಸೆ ಹುಳಿ ಹಿಂಡಿಕೊಳ್ಳಿ. ನಿಮಗೆ ಎಷ್ಟು ಡ್ರೈ ಬೇಕೋ ಅಷ್ಟು ಡ್ರೈ ಮಾಡಬಹುದು.
ತೊಂಡೆಕಾಯಿ ಹಾಕಿದ ಬಳಿಕ 5 ನಿಮಿಷ ಬಿಟ್ಟು ಚೆನ್ನಾಗಿ ಕಲಸಿಕೊಂಡರೆ ನಿಮ್ಮ ಮುಂದೆ ತೊಂಡೆಕಾಯಿ ಪಲ್ಯ ರೆಡಿಯಾಗಿರುತ್ತದೆ. ಇದು ಊಟದ ಜೊತೆಗೆ ತಿಂಡಿಗೂ ಸಹ ಹೇಳಿ ಮಾಡಿಸಿದ ಪಲ್ಯವಾಗಿದೆ.



Click it and Unblock the Notifications
