Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಊಟದ ರುಚಿ ಡಬಲ್ ಮಾಡುವ ತೊಂಡೆಕಾಯಿ ಹಸಿ ಕಾಯಿರಸ: ಮಾಡುವ ವಿಧಾನ ಬಹಳ ಸುಲಭ!!
ಊಟದೊಂದಿಗೆ ನೀವೇನಾದರು ಹೊಸದಾದ ರುಚಿಯ ಖಾದ್ಯಗಳನ್ನ ಸವಿಯಲು ಇಷ್ಟಪಡುವ ಮಂದಿ ಆಗಿದ್ದರೆ ಒಂದಿಷ್ಟು ರೆಸಿಪಿಗಳ ಟ್ರೈ ಮಾಡಿರುತ್ತೀರಿ. ಅದ್ರಲ್ಲೂ ಸುಲಭವಾಗಿ ಮಾಡಿ ಸವಿಯುವ ಅಥವಾ ಬಹಳ ರುಚಿ ನೀಡುವಂತಹ ಖಾದ್ಯಗಳ ಮಾಡಿ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಬಿಸಿಲಿನ ಈ ಸಮಯದಲ್ಲಿ ತಂಬುಳಿಗಳು, ರಸಂ, ಮಜ್ಜಿಗೆ ಹುಳಿಯಂತಹ ರೆಸಿಪಿಗಳನ್ನು ಸವಿಯಲು ಬಹುತೇಕರು ಇಷ್ಟಪಡುತ್ತಾರೆ.
ನಾವಿಂದು ಮಧ್ಯಾಹ್ನ ಹಾಗೂ ರಾತ್ರಿ ಊಟದ ರುಚಿ ಹೆಚ್ಚಿಸುವಂತಹ ಖಾದ್ಯವೊಂದರ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಬಹಳ ಸುಲಭವಾಗಿ 2 ನಿಮಿಷದೊಳಗೆ ಮಾಡಿ ಮುಗಿಸಬಹುದಾದ ಹಾಗೆ ಎಲ್ಲರು ಇಷ್ಟಪಟ್ಟು ಸವಿಯುವ ತೊಂಡೆಕಾಯಿ ಹಸಿ ಕಾಯಿರಸ ಮಾಡುವ ಕುರಿತು ತಿಳಿಯೋಣ. ಈ ಕಾಯಿ ರಸವು ರುಚಿಗೂ ಬೆಸ್ಟ್ ಹಾಗೆ ದೇಹಕ್ಕೂ ಉತ್ತಮವಾಗಿರಲಿದೆ.

ನೀವು ಆರೋಗ್ಯಯುತ ರೆಸಿಪಿಗಳ ಮಾಡಿ ಸವಿಯಲು ಇಷ್ಟಪಡುವ ಮಂದಿ ಆಗಿದ್ದರೆ ಈ ರೀತಿ ಕಾಯಿರಸ, ತಂಬುಳಿಗಳ ಮಾಡಿರುತ್ತೀರಿ. ಅದ್ರಲ್ಲೂ ತೊಂಡೆಕಾಯಿ ಬಳಸಿ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯಬಹುದು. ಆದ್ರೆ ನಾವಿಂದು ಈ ಕಾಯಿ ರಸ ಮಾಡಿ ಮಧ್ಯಾಹ್ನದ ಊಟದೊಂದಿಗೆ ಸವಿಯುವ ಕುರಿತಾಗಿ ಹೇಳಲಿದ್ದೇವೆ.
ಈ ತೊಂಡೆಕಾಯಿ ಹಸಿ ಕಾಯಿರಸ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ತಯಾರಿಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ತೊಂಡೆಕಾಯಿ ಹಸಿ ಕಾಯಿ ರಸ ಮಾಡಲು ಬೇಕಾಗುವ ಪದಾರ್ಥಗಳು?
- ತೊಂಡೆಕಾಯಿ
- ಉಪ್ಪು
- ಎಣ್ಣೆ
- ಜೀರಿಗೆ
- ಸಾಸಿವೆ
- ಉದ್ದಿನ ಬೇಳೆ
- ಹಸಿ ಮೆಣಸು
- ತೆಂಗಿನಕಾಯಿ ತುರಿ
- ಕರಿಬೇವು
ತೊಂಡೆಕಾಯಿ ಹಸಿ ಕಾಯಿ ರಸ ಮಾಡುವ ವಿಧಾನವೇನು?
ಮೊದಲು ತೊಂಡೆಕಾಯಿಯನ್ನು ಉದ್ದವಾಗಿ ಕತ್ತರಿಸಿಕೊಳ್ಳಬೇಕು. ಅದಕ್ಕೂ ಮೊದಲು ತೊಳೆದು ಸ್ವಚ್ಛವಾಗಿಡಿ. ಅನಂತರ ಈ ತೊಂಡೆಕಾಯಿಯನ್ನು ಒಂದು ಕುಕ್ಕರ್‌ಗೆ ಹಾಕಿ ನೀರು ಹಾಕಿ, ಉಪ್ಪು ಸಹ ಹಾಕಿಕೊಂಡು ಕುಕ್ಕರ್ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. ಒಂದು ಸೀಟಿ ಹೊಡೆಸಿಕೊಂಡರೆ ಸಾಕಾಗುತ್ತದೆ.
ನಂತರ ಮುಚ್ಚಳ ತೆಗೆದು ಸ್ವಲ್ಪ ತಣ್ಣಗಾಗಲು ಬಿಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಉದ್ದಿನ ಬೇಳೆ, ಹಸಿ ಮೆಣಸು, ಹಾಕಿ ಎಣ್ಣೆ ಹಾಕದೆ ಹುರಿದುಕೊಳ್ಳಿ. 1 ನಿಮಿಷ ಹುರಿದುಕೊಂಡರೆ ಸಾಕಾಗುತ್ತದೆ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತುರಿದ ತೆಂಗಿನಕಾಯಿ ಹಾಕಿಕೊಂಡು ಅದಕ್ಕೆ ಹುರಿದ ಉದ್ದಿನ ಬೇಳೆ ಹಾಕಿ ಅಗತ್ಯ ನೀರು ಹಾಕಿ ರುಬ್ಬಿಕೊಳ್ಳಬೇಕು. ಚಟ್ನಿ ರೀತಿ ಹುರಿದ ಬಳಿಕ ಅದಕ್ಕೆ ಹುರಿದ ಹಸಿ ಮೆಣಸು ಹಾಕಿಕೊಂಡು ಮತ್ತೆ 2 ಸುತ್ತು ರುಬ್ಬಿಕೊಳ್ಳಿ.
ಈಗ ಈ ರುಬ್ಬಿದ ಮಸಾಲೆಯನ್ನು ನೀರು ತೆಗೆದಿಟ್ಟಿರುವ ತೊಂಡೆಕಾಯಿಯೊಂದಿಗೆ ಹಾಕಿಕೊಳ್ಳಿ. ಈಗ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಒಲೆ ಮೇಲೆ ಇಟ್ಟು ಕುದಿಸುವುದು ಬೇಡ ಹಾಗೆ ಮಿಕ್ಸ್ ಮಾಡಿ ಇಡಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಂದು ಒಗ್ಗರಣೆ ಮಾಡಿಕೊಂಡು ಅದನ್ನು ಈ ತೊಂಡೆಕಾಯಿ ರಸದೊಂದಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ಊಟದೊಂದಿಗೆ ಸವಿಯಲು ಈ ರುಚಿ ರುಚಿಯ ತೊಂಡೆಕಾಯಿ ಹಸಿ ಕಾಯಿ ರಸ ಸಿದ್ದವಾಗುತ್ತೆ. ನೀವು ಕೂಡ ಮಧ್ಯಾಹ್ನದ ಊಟಕ್ಕೆ ಈ ರುಚಿ ರುಚಿಯ ತೊಂಡೆಕಾಯಿ ರಸ ಮಾಡಿ ಸವಿದು ನೋಡಿ. ಒಮ್ಮೆ ಸವಿದರೆ ಪದೇ ಪದೇ ಮಾಡೋದು ಖಚಿತ.



Click it and Unblock the Notifications
