Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ತೊಂಡೆಕಾಯಿ ಕಾಬುಲ್ ಕಡ್ಲೆಯ ಅದ್ಭುತ ರುಚಿ ಪಲ್ಯ ಇಲ್ಲಿದೆ..! ಮಾಡುವ ವಿಧಾನ ತಿಳಿಯಿರಿ!
ವಿಶೇಷ ದಿನಗಳಲ್ಲಿ ಅಥವಾ ಹಬ್ಬದ ಊಟದಲ್ಲಿ ಒಂದ ಬಗೆಯ ಪಲ್ಯವನ್ನಂತು ಮಾಡಿಯೇ ಮಾಡುತ್ತೇವೆ. ಅದರಲ್ಲೂ ವಿಶೇಷವಾಗಿ ತೊಂಡೆಕಾಯಿ ಪಲ್ಯವನಂತು ಮಾಡಿರುತ್ತೇವೆ. ಅದರಲ್ಲೂ ವಿಶೇಷವಾಗಿ ತೊಂಡೆಕಾಯಿ, ಕಾಬೂಲ್ ಕಡಲೆ ಹಾಕಿ ಮಾಡುವಂತಹ ಗೋಡಂಬಿ ಪಲ್ಯ ನೀವೊಮ್ಮೆ ಸವಿದರೆ ಅದರ ರುಚಿ ಒಂದಷ್ಟು ದಿನ ನೆನಪಿಸುವಂತೆ ಮಾಡುತ್ತೆ.
ಅದರಲ್ಲೂ ಹೆಚ್ಚಾಗಿ ಮದುವೆ ಮನೆಯ ಸಂದರ್ಭದಲ್ಲಿ, ಗೃಹ ಪ್ರವೇಶ, ಹೀಗೆ ಶುಭ ಕಾರ್ಯದ ಸಮಯದಲ್ಲಿ ಹೆಚ್ಚಾಗಿ ಈ ರೀತಿ ಅದ್ಭುತ ರುಚಿಯ ಪಲ್ಯವನ್ನು ನೀವು ಕೂಡ ಸವಿದಿರುತ್ತೀರಿ. ಆದ್ರೆ ನೀವು ಕೂಡ ಮನೆಯಲ್ಲಿ ಈ ಪಲ್ಯವನ್ನು ಮಾಡಿ ಸವಿದು ನೋಡಿ. ಅದರ ರುಚಿಗೆ ನೀವು ಕೂಡ ಮನಸೋಲುತ್ತೀರಿ. ಮದುವೆ ಮನೆಯಲ್ಲಿ ಈ ಕಾಬೂಲ್ ತೊಂಡೆಕಾಯಿ ಪಲ್ಯವೇ ಬಹಳ ರುಚಿಕರ ಖಾದ್ಯ.

ಕೆಲವರು ಈ ಪಲ್ಯವನ್ನು ತಿಂಡಿ, ಊಟದ ಜೊತೆಗೆ ಹಾಗೆಯೇ ಸವಿಯಲು ಕೂಡ ಇಷ್ಟಪಡುತ್ತಾರೆ. ಈ ಪಲ್ಯ ಆರೋಗ್ಯಕ್ಕೂ ಬಹಳ ಉತ್ತಮ. ಹೀಗಾಗಿ ತೊಂಡೆಕಾಯಿ ಕಾಬೂಲ್ ಕಡ್ಲೆಯ ಪಲ್ಯ ಮಾಡಿ ಸವಿಯುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಹಾಗಾದ್ರೆ ತೊಂಡೆಕಾಯಿ ಕಾಬೂಲ್ ಕಡ್ಲೆ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಪಲ್ಯ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೊಂಡೆಕಾಯಿ ಕಾಬುಲ್ ಕಡ್ಲೆಯ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಕಾಬುಲ್ ಕಡಲೆ
- ತೊಂಡೆಕಾಯಿ
- ತೆಂಗಿನಕಾಯಿ ತುರಿ
- ಬ್ಯಾಡಗಿ ಮೆಣಸಿನಕಾಯಿ
- ಒಣ ಮೆಣಸು
- ಕಡ್ಲೆಬೇಳೆ
- ಉದ್ದಿನ ಬೇಳೆ
- ಜೀರಿಗೆ
- ಸಾಸಿವೆ
- ಅರಿಶಿಣದ ಪುಡಿ
- ಹುಣಸೆಹಣ್ಣು
- ಕರಿಬೇವಿನ ಸೊಪ್ಪು
- ಉಪ್ಪು
- ಎಣ್ಣೆ
ತೊಂಡೆಕಾಯಿ ಕಾಬುಲ್ ಕಡ್ಲೆ ಮಾಡುವ ವಿಧಾನವೇನು?
ಹಿಂದಿನ ದಿನ ರಾತ್ರಿಯೆ ಬೌಲ್‌ನಲ್ಲಿ ಕಾಬುಲ್ ಕಡ್ಲೆಯನ್ನು ತೊಳೆದು ನೆನೆಸಿಡಬೇಕು. ನಂತರ ಮಾರನೆ ದಿನ ಬೆಳಗ್ಗೆ ಇದನ್ನು ಒಂದು ಕುಕ್ಕರ್‌ಗೆ ಹಾಕಿ ಬಳಿಕ ಸ್ವಲ್ಪ ನೀರು ಹಾಕಿ 2 ಸೀಟಿ ಹೊಡೆಯಲು ಬಿಡಿ. ಅನಂತರ ಕುಕ್ಕರ್ ಮುಚ್ಚಳ ತೆರೆದು ಒಂದು ತೊಂಡೆಕಾಯಿಯಲ್ಲಿ 4 ಭಾಗ ಆಗುವಂತೆ ಹೆಚ್ಚಿಕೊಂಡು ಎಲ್ಲಾ ತೊಂಡೆಕಾಯಿಯನ್ನು ಇದೇ ಕುಕ್ಕರ್‌ಗೆ ಹಾಕಿಕೊಳ್ಳಿ, ಹಾಗೆ ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಮುಚ್ಚಳ ಮುಚ್ಚಿ ಮತ್ತೆ 1 ಸೀಟಿ ಹೊಡೆಯಲು ಬಿಡಬೇಕು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಜೀರಿಗೆ, ಸಾಸಿವೆ ಹಾಕಿ 5ರಿಂದ 6 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ನಂತರ ಈ ಎಲ್ಲಾ ವಸ್ತುಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ 3 ಬ್ಯಾಡಗಿ ಮೆಣಸು, 5 ಖಾರ ಒಣ ಮೆಣಸು ಹಾಕಿ ಸ್ವಲ್ಪ ಎಣ್ಣೆ ಹಾಕಿ 3 ನಿಮಿಷ ಫ್ರೈ ಮಾಡಿಕೊಂಡು ಇದನ್ನು ಕೂಡ ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ.
ಅನಂತರ ತರಿತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಇದಕ್ಕೆ ತೆಂಗಿನಕಾಯಿ ತುರಿಯನ್ನು ಹಾಕಿ ಮತ್ತೆ ರುಬ್ಬಿಕೊಳ್ಳಬೇಕು. ಇದು ಚಟ್ನಿ ಪುಡಿಯಂತೆ ಕಾಣಿಸಬೇಕು. ಈಗ ಕುಕ್ಕರ್ ಮುಚ್ಚಳ ತೆಗೆದು ಬೆಂದಿರುವ ಕಾಬುಲ್ ತೊಂಡೆಕಾಯಿಯನ್ನು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಬಿಸಿ ಮಾಡಿ. ನಂತರ ಇದಕ್ಕೆ ಅರಶಿಣ ಪುಡಿ, ಕರಿಬೇವು ಹಾಕಿದ ಬಳಿಕ ಇದಕ್ಕೆ ಮಿಕ್ಸಿಯಲ್ಲಿದ್ದ ಮಸಾಲೆ ಮಿಶ್ರಣ ಹಾಕಿಕೊಂಡು 2 ನಿಮಿಷ ಕೈಬಿಡದೆ ಮಿಕ್ಸ್ ಮಾಡಿಕೊಳ್ಳಿ.
ಈಗ 10 ನಿಮಿಷ ನೆನೆಸಿದ ಹುಣಸೆ ಹಣ್ಣಿನ ಹುಳಿಯನ್ನು ಇದಕ್ಕೆ ಹಾಕಿ. ಹಾಗೆ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಅನಂತರ ಇದಕ್ಕೆ ಕುಕ್ಕರ್‌ನಲ್ಲಿ ಬೇಯಿಸಿಕೊಂಡಿರುವ ತೊಂಡೆಕಾಯಿ ಕಾಬುಲ್ ಕಡ್ಲೆಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 3ರಿಂದ 4 ನಿಮಿಷ ಇದನ್ನು ಮಿಕ್ಸ್ ಮಾಡಿಕೊಂಡರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ತೊಂಡೆಕಾಯಿ ಕಾಬುಲ್ ಪಲ್ಯ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ನೋಡಿ.



Click it and Unblock the Notifications
