Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಚಪಾತಿ-ದೋಸೆ ರೊಟ್ಟಿಗೆ ರುಚಿ ರುಚಿಯ ಟೊಮೆಟೋ ತೊಕ್ಕು; ಮಾಡಿ ನೋಡಿ!
Recipes
oi-Mohan
Posted By: Mohan
ಮನೆಯಲ್ಲಿ ಪೂರಿ, ಚಪಾತಿ, ದೋಸೆ ಅಷ್ಟೆ ಅಲ್ಲ ಊಟದ ಜೊತೆಗೂ ಸವಿಯಲು ಇಷ್ಟವಾಗುವಂತಹ ಗ್ರೇವಿ, ಚಟ್ನಿ, ಖಾದ್ಯಗಳ ಮಾಡಿ ಸವಿಯೋದು ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು ನಾವಿಲ್ಲಿ ಸುಲಭವಾಗಿ ಮಾಡುವಂತಹ ರುಚಿ ರುಚಿಯ ಟೊಮೆಟೋ ತೊಕ್ಕು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಟೊಮೆಟೋ ತೊಕ್ಕು ಊಟದೊಂದಿಗೆ ಕೂಡ ರುಚಿ ಹೆಚ್ಚಿಸುವ ಖಾದ್ಯ ಆಗಿರಲಿದೆ.
ಇನ್ನು ಚಪಾತಿಯೊಂದಿಗೆ, ಪೂರಿಯೊಂದಿಗೆ ಈ ಟೊಮೆಟೋ ತೊಕ್ಕು ಅದ್ಭುತ ರುಚಿ ತರಲಿದೆ. ಹಾಗೆ ಟೊಮೆಟೋ ತೊಕ್ಕು ಬಹಳ ಸುಲಭವಾಗಿ ಮಾಡಿ ಮುಗಿಸಬಹುದು, ಅಲ್ಲದೆ ಕಡಿಮೆ ವಸ್ತು ಬಳಸಿಕೊಂಡು ಇದನ್ನು ಮಾಡಿಮುಗಿಸಬಹುದು. ಹಾಗಾದ್ರೆ ಇದನ್ನು ಚಪಾತಿ, ಪೂರಿಯನ್ನು ಈ ಟೊಮೆಟೋ ತೊಕ್ಕು ಜೊತೆ ಸವಿಯಲು ಬಹಳ ರುಚಿಯಾಗಿರಲಿದೆ.

ಹಾಗಾದ್ರೆ ಮನೆಯಲ್ಲಿ ಅತ್ಯಂತ ಸುಲಭವಾಗಿ ಈ ಟೊಮೆಟೋ ತೊಕ್ಕು ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಟೊಮೆಟೋ ತೊಕ್ಕು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಟೊಮೆಟೋ ತೊಕ್ಕು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಟೊಮೆಟೋ ಹಣ್ಣು 1 ಕೆಜಿ ಅಥವಾ 10
- ಎಣ್ಣೆ
- ಸಾಸಿವೆ
- ಇಂಗು
- ಕರಿಬೇವಿನ ಸೊಪ್ಪು
- ಜೀರಿಗೆ 1 ಟೇಬಲ್ ಸ್ಪೂನ್
- ಮೆಂತ್ಯ ಕಾಳು 1/2 ಟೀ ಸ್ಪೂನ್
- ಬೆಳ್ಳುಳ್ಳಿ
- ಹುಣಸೆಹಣ್ಣು 1 ನಿಂಬೆಹಣ್ಣು ಗಾತ್ರದಷ್ಟು
- ಬ್ಯಾಡಗಿ ಮೆಣಸಿನಕಾಯಿ 10
- ಖಾರದ ಮೆಣಸಿನಕಾಯಿ 15
- ಉಪ್ಪು ರುಚಿಗೆ ತಕ್ಕಷ್ಟು
ಟೊಮೆಟೋ ತೊಕ್ಕು ಮಾಡುವ ಸುಲಭದ ವಿಧಾನ ಇಲ್ಲಿದೆ
- ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಜೀರಿಗೆ, ಮೆಂತ್ಯ, ಬೆಳ್ಳುಳ್ಳಿ, ಒಣ ಮೆಣಸು ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಹೀಗೆ ಬಿಸಿ ಮಾಡಿದ ಬಳಿಕ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
- ರುಬ್ಬುವಾಗ ಉಪ್ಪು, ಹುಣಸೆ ಹುಳಿ ಹಾಗೆ 10 ಟೊಮೆಟೋ ಹಣ್ಣು ಸಹ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಎಲ್ಲ ವಸ್ತುಗಳನ್ನು ಒಟ್ಟಿಗೆ ರುಬ್ಬಿ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
- ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಹೆಚ್ಚು ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಇಂಗು, ಕರಿಬೇವು ಹಾಗೆ ಮಿಕ್ಸಿಯಲ್ಲಿ ರುಬ್ಬಿದ್ದ ಎಲ್ಲಾ ಪದಾರ್ಥಗಳನ್ನು ಸಹ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ.
- ಸಣ್ಣ ಉರಿಯಲ್ಲಿ ಇಟ್ಟು ಮುಚ್ಚಳ ಮುಚ್ಚಿ ಕಾಯಿಸಿ. ಆಗಾಗ ಮುಚ್ಚಳ ತೆಗೆದು ಮಿಕ್ಸ್ ಮಾಡಬೇಕು. ಒಟ್ಟು 10 ನಿಮಿಷ ಕುದಿಸಬೇಕು. ಹಾಗೆ ಕುದಿಬರಲು ಬಿಟ್ಟು ಸ್ವಲ್ಪ ಗಟ್ಟಿಯಾಗುವಾಗ ಆಗಾಗ ಮಿಕ್ಸ್ ಮಾಡುತ್ತಾ ಇರಬೇಕು. ಒಟ್ಟು 20 ನಿಮಿಷ ಆದರೂ ಕುದಿಬರಬೇಕು.
- ಈಗ ಒಲೆ ಆಫ್ ಮಾಡಿಕೊಂಡು ಮಿಶ್ರಣವನ್ನು ಚೆನ್ನಾಗಿ ಕಲಸಿಕೊಂಡು ಒಲೆಯಿಂದ ಇಳಿಸಿಕೊಳ್ಳಿ. ಇಷ್ಟಾದರೆ ಟೊಮೆಟೋ ತೊಕ್ಕು ಸವಿಯಲು ಸಿದ್ದವಾಗುತ್ತೆ. ನೀವಿದನ್ನು ಯಾವುದೇ ತಿಂಡಿಯೊಂದಿಗೆ ಹಾಗೆ ಊಟದೊಂದಿಗೆ ಸವಿಯಬಹುದು. ನೀವು ಕೂಡ ಮನೆಯಲ್ಲಿ ಈ ಖಾದ್ಯವನ್ನು ಮಾಡಿ ಸವಿದು ನೋಡಿ. ಎಲ್ಲರಿಗೂ ಇಷ್ಟವಾಗುತ್ತೆ, ಹಾಗೆ ನಿಮ್ಮ ತಿಂಡಿ ಊಟದ ರುಚಿಯೂ ದುಪ್ಪಟ್ಟಾಗೋದು ಖಚಿತ.
Comments
[ of 5 - Users]
Story first published: Sunday, November 16, 2025, 17:10 [IST]
Other articles published on Nov 16, 2025



Click it and Unblock the Notifications