Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬೇಳೆ ಬಳಸದೆ ಈ ಟೊಮೆಟೋ ಸಾರು ಮಾಡಿ..! 5 ನಿಮಿಷದಲ್ಲಿ ರುಚಿ ರುಚಿ ಸಾರು!
ಊಟದ ಜೊತೆಗೆ ಎಷ್ಟು ಬಗೆಯ ಸಾರು, ಹುಳಿ, ಕರಿ, ಸಾಂಬಾರ್, ರಸಂ ಮಾಡಿ ಸವಿದಿರುತ್ತೇವೆ. ಬಗೆ ಬಗೆಯ ಖಾದ್ಯ ಮಾಡಿರುತ್ತೇವೆ. ಅನ್ನದ ಜೊತೆಗೆ ಯಾವುದಾದರೊಂದು ಸಾರು ಇದ್ದರೇನೆ ಹೆಚ್ಚು ರುಚಿಕರ ಊಟ ಮಾಡಿದಂತಾಗುತ್ತದೆ. ಊಟಕ್ಕೆ ಎಷ್ಟು ರುಚಿ ಸಾರು ಮಾಡಿದರು ಸಾಲದು. ಇನ್ನು ರಸಂಗೆ, ಸಾಂಬಾರ್ಗೆ ಎಷ್ಟೆಲ್ಲಾ ವಸ್ತುಗಳು ಬೇಕು ಅನ್ನೋದನ್ನು ನಾವು ತಿಳಿದಿದ್ದೇವೆ. ಸಾಮಾನ್ಯವಾಗಿ ಹೆಚ್ಚು ಹೆಚ್ಚು ವಸ್ತುಗಳ ಬಳಸಿದಾಗ ಹೆಚ್ಚು ರುಚಿಕರವಾಗಿ ಈ ಸಾರು, ರಸಂ ಮಾಡಬಹುದು.
ಇನ್ನು ಟೊಮೆಟೋ ಸಾರು ಮಾಡಲು ಒಂದಿಷ್ಟು ಟೊಮೆಟೋ, ಬೇಳೆ ಹಾಕಿಯೇ ಮಾಡಲಾಗುತ್ತದೆ. ಆದ್ರೆ ನಾವಿಂದು ಟೊಮೆಟೋ ಸಾರನ್ನು ಬೇಳೆ ಹಾಕದೆಯೇ ಬೊಂಬಾಟ್ ರುಚಿಯಲ್ಲಿ ಈ ಸಾರು ಮಾಡಬಹುದು. ಈ ಸಾರನ್ನು ಒಮ್ಮೆ ನೀವು ಸವಿದರೆ ಸಾಕು ಅದರ ರುಚಿಗೆ ಮತ್ತೆ ಮತ್ತೆ ಸವಿಯಲು ಮುಂದಾಗುತ್ತೀರಿ.

ಹಾಗಾದ್ರೆ ಸಾರು ಮಾಡುವುದು ಹೇಗೆ?, ಟೊಮೆಟೋ ಹಾಕಿ ಮಾಡುವ ಸಾರು ಮಾಡಲು ಏನೆಲ್ಲಾ ಬೇಕಾಗುತ್ತದೆ ಎಂಬುದನ್ನು ತಿಳಿಯೋಣ. ಈ ಸಾರನ್ನು ಬೇಳೆಯೇ ಇಲ್ಲದೆ ಮಾಡುವುದರಿಂದ ಖರ್ಚು ಕೂಡ ಕಡಿಮೆ, ಬಹಳ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾಗಿದೆ. ಹಾಗಾದ್ರೆ ಅನ್ನಕ್ಕೆ ಈ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೇಳೆ ಹಾಕದೆ ಈ ಟೊಮೆಟೋ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಟೊಮೆಟೋ
- ಈರುಳ್ಳಿ
- ಹಸಿ ಮೆಣಸು
- ಒಣ ಮೆಣಸು
- ಕಾಳು ಮೆಣಸು
- ಇಂಗು
- ಅರಶಿನ
- ಬೆಳ್ಳುಳ್ಳಿ
- ಜೀರಿಗೆ
- ಸಾಸಿವೆ
- ಹುಣಸೆ ಹುಳಿ
- ಉಪ್ಪು
- ಎಣ್ಣೆ
- ಕಡಲೆ ಬೇಳೆ
- ಕರಿಬೇವು
ಬೇಳೆ ಹಾಕದೆ ಟೊಮೆಟೋ ಸಾರು ಮಾಡುವುದು ಹೇಗೆ?
ಮೊದಲು 5 ಟೊಮೆಟೋವನ್ನು ಹೆಚ್ಚಿಕೊಂಡು ಅದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ನಂತರ ಈ ಜಾರ್ಗೆ ಒಂದು ಹಸಿ ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಹಾಗೆ ಹುಣಸೆ ಹುಳಿಯನ್ನು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ರುಬ್ಬುವಾಗ ಉಪ್ಪು ಸಹ ಹಾಕಿಕೊಳ್ಳಬೇಕು. ಈ ಪೇಸ್ಟ್ ಅನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಕಡಲೆ ಬೇಳೆ, ಜಿರಿಗೆ, ಕೊತ್ತಂಬರಿ ಕಾಳು, ಕಾಳು ಮೆಣಸು, ಮೆಂತ್ಯ, ಕರಿಬೇವು ಹಾಕಿಕೊಂಡು ಹುರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ 4 ನಿಮಿಷ ಹುರಿದರೆ ಸಾಕಾಗುತ್ತದೆ. 4 ನಿಮಿಷದ ಬಳಿಕ ಇದಕ್ಕೆ 4 ಒಣ ಮೆಣಸು ಹಾಕಿ ಹುರಿದುಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ಮಸಾಲೆಗಳ ಇಳಿಸಿಕೊಳ್ಳಿ. ತಣ್ಣಗಾಗಲು ಬಿಟ್ಟು ನಂತರ ಸಣ್ಣ ಮಿಕ್ಸಿ ಜಾರ್ಗೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇದು ಸಾಂಬಾರ್ ಪುಡಿಯಂತೆ ಆಗುವವರೆಗೂ ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಾಯಲು ಬಿಡಿ. ನಂತರ ಇದಕ್ಕೆ ಸಾಸಿವೆ, ಈರುಳ್ಳಿ, ಕರಿಬೇವು ಹಾಕಿ ಫ್ರೈ ಮಾಡಿ. 1 ನಿಮಿಷ ಬಳಿಕ ಮೊದಲು ಮಾಡಿಕೊಂಡಿದ್ದ ಟೊಮೆಟೋ ಪೇಸ್ಟ್ ಅನ್ನು ಹಾಕಿ ಸ್ವಲ್ಪ ನೀರು ಹಾಕಿ ತಿರುಗಿಸಿಕೊಳ್ಳಿ. ಈಗ ಕುದಿಯಲು ಬಿಡುವಾಗ ಅರಶಿನ, ಇಂಗು ಹಾಕಿಕೊಂಡು ಬಿಡಿ.
ಒಂದು ಕುದಿ ಬಂದ ಬಳಿಕ ಮೊದಲು ರುಬ್ಬಿಕೊಂಡಿದ್ದ ಮಸಾಲೆಯ ಪುಡಿಯನ್ನು ಇದಕ್ಕೆ ಹಾಕಿಕೊಳ್ಳಬೇಕು. ಸಾರಿನ ಪುಡಿ ಹಾಕಿ ಮಿಕ್ಸ್ ಮಾಡಿ ಮತ್ತೆ ಕುದಿಯಲು ಬಿಡಬೇಕು. ಸುಮಾರು 4 ನಿಮಿಷ ಕುದಿಯಲು ಬಿಡಬೇಕು. ಬೇಕಾದರೆ ನೀವು ನೀರು ಹಾಕಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ಈ ಬೇಳೆ ಹಾಕದೆ ಮಾಡುವ ಟೊಮೆಟೋ ಸಾರು ರೆಡಿಯಾಗುತ್ತೆ. ಇದರ ರುಚಿ ಒಮ್ಮೆ ನೀವು ಸವಿದರೆ ಫಿದಾ ಆಗೋದು ಪಕ್ಕಾ.



Click it and Unblock the Notifications
