Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ತುಂಬಾ ಸಿಂಪಲ್ ಆಗಿ ಮಾಡಿದರೂ ಸಕತ್ ರುಚಿಯಾಗಿರುತ್ತೆ ಈ ಟೊಮೆಟೊ ಬಾತ್
Recipes
oi-Reena TK
Posted By: Reena TK
ಟೊಟೊಟೊ ರೈಸ್ ಅಥವಾ ಟೊಮೆಟೊ ಅನ್ನ ಹಲವು ರುಚಿಯಲ್ಲಿಮಾಡಬಹುದು, ಇದು ಸರಳವಾದ ಹಾಗೂ ರುಚಿಯಾದ ಬ್ರೇಕ್ಪಾಸ್ಟ್ ಆಗಿದೆ, ಟೊಮೆಟೊ ಜೊತೆಗೆ ಬಟಾಣಿ, ಹೊಲದವರೆ ಎಲ್ಲಾ ಹಾಕಿ ತಯಾರಿಸಬಹುದು, ಆದರೆ ಈ ಟೊಮೆಟೊ ರೈಸ್ನಲ್ಲಿ ಟೊಮೆಟೊವೇ ಪ್ರಮುಖ ಸಾಮಗ್ರಿ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
4-5 ಟೊಮೆಟೊ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ 1
ಚಕ್ಕೆ ಒಂದು ತುಂಡು
3-4 ಲವಂಗ
2 ಏಲಕ್ಕಿ
ಸ್ವಲ್ಪ ಸಾಸಿವೆ
ಚಿಟಿಕೆಯಷ್ಟು ಮೆಂತೆ
1 ಚಮಚ ಕೊತ್ತಂಬರಿ ಪುಡಿ
1/2 ಚಮಚ ಖಾರದ ಪುಡಿ
1/4 ಚಮಚ ಅರಿಶಿಣ ಪುಡಿ
1/4 ಚಮಚ ಕಾಳು ಮೆಣಸಿನ ಪುಡಿ
ಅರ್ಧ ಕಟ್ಟು ಪುದೀನಾ
ಅರ್ಧ ಕಟ್ಟು ಕೊತ್ತಂಬರಿ ಸೊಪ್ಪು
ತುಪ್ಪ 2 ಚಮಚ
ಒಂದೂವರೆ ಕಪ್ ಅಕ್ಕಿ
3 ಕಪ್ ನೀರು
ಮಾಡುವುದು ಹೇಗೆ?
- ಪುದೀನಾ, ಕೊತ್ತಂಬರಿ ಮಿಕ್ಸಿ ಜಾರ್ಗೆ ಹಾಕಿ ರುಬ್ಬಿದಂತೆ ಮಾಡಿಡಿ.
- ಈಗ ಕುಕ್ಕರ್ ಬಿಸಿ ಮಾಡಿ ತುಪ್ಪ ಹಾಕಿ, ತುಪ್ಪ ಬಿಸಿಯಾದಾಗ ಸಾಸಿವೆ ಜೀರಿಗೆ ಮೆಂತೆ ಹಾಕಿ. ಚಕ್ಕೆ-ಲವಂಗ, ಏಲಕ್ಕಿ ಸೇರಿಸಿ
- ಸಾಸಿವೆ-ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ
- ಈರುಳ್ಳಿ ಹಾಕಿ, ಈರುಳ್ಳ ಮೆತ್ತಗಾಗುವವರೆಗೆ ಫ್ರೈ ಮಾಡಿ
- ಪುದೀನಾ-ಕೊತ್ತಂಬರಿ ಜಜ್ಜಿದ ಪೇಸ್ಟ್ ಸೇರಿಸಿ.
- ನಂತರ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವಾಗ ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ
- ನಂತರ ಅಕ್ಕಿ ತೊಳೆದು ಸೇರಿಸಿ, ಒಂದೂವರೆ ಚಮಚ ಉಪ್ಪು ಸೇರಿಸಿ.
- ನಂತರ 3 ಕಪ್ ನೀರು ಸೇರಿಸಿ 2 ವಿಶಲ್ ಬರುವವರೆಗೆ ಬೇಯಿಸಿ ಟೊಮೆಟೊ ರೈಸ್ ರೆಡಿ.
ಇತರ ಸಲಹೆ:
ನೀವು ಈ ಟೊಮಟೊ ರೈಸ್ ಅನ್ನು ಬೇರೆ ರೀತಿಯಲ್ಲಿಯೂ ಮಾಬಹುದು,
ಮೆಣಸಿನ ಪುಡಿ ಬದಲಿಗೆ ಹಸಿ ಮೆಣಸು ಸೇರಿಸಬಹುದು
- ಕೊತ್ತಂಬರಿ ಪುಡಿ ಬಳಸದೆಯೂ ಇರಬಹುದು
- ಟಮೆಟೊವನ್ನು ಸ್ವಲ್ಪ ಗೋಡಂಬಿ ಹಾಕಿ ರುಬ್ಬಿ ಸೇರಿಸಬಹುದು
- ಮಸಾಲೆಗೆ ಒಂದು ಚಮಚ ಬಿರಯನಿ ಮಸಾಲ ಸೇರಿಸಬಹುದು. ನೀವು ಈ ರೀತಿ ಮಾಡುವ ಸಣ್ಣ ಪುಟ್ಟ ಬದಲಾವಣೆಗಳು ಅಡುಗೆಗೆ ತುಂಬಾನೇ ಭಿನ್ನ ಫ್ಲೇವರ್ ನೀಡುತ್ತದೆ.
ಯಾವ ಟೊಮೆಟೊ ಬಳಸಬೇಕು? ಇದನ್ನು ಮಾಡಲು ಹುಳಿ ಟೊಮೆಟೊ ಬದಲಿಗೆ ಜಾಮೂನು ಟೊಮೆಟೊ ಸೇರಿಸುವುದು ಒಳ್ಳೆಯದು.
Comments
[ of 5 - Users]



Click it and Unblock the Notifications
