Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಮನೆಯಲ್ಲಿ ಟೊಮೆಟೋ ರಸ ಮಾಡೋದು ಹೇಗೆ.?
ಟೊಮೆಟೊ ರಸಂ ಭಾರತೀಯ ಸಾಂಪ್ರದಾಯಿಕ ಅಡುಗೆಯಲ್ಲಿ ಒಂದು. ಇದನ್ನು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಸವಿಯುವುದನ್ನು ನಾವು ನೋಡಬಹುದು. ನಿತ್ಯದ ಅಡುಗೆಯಾಗಿ ತಯಾರಿಸುವ ರಸಂ ಅನ್ನದ ಜೊತೆ ತಿನ್ನಲು ಒಳ್ಳೆಯ ಸಾಥ್ ನೀಡುತ್ತದೆ. ಟೊಮೆಟೊ ಹಾಗೂ ರುಚಿಕರವಾದ ಮಸಾಲೆ ಮಿಶ್ರಣದೊಂದಿಗೆ ತಯಾರಿಸುವ ಈ ಸೂಪ್ ಅನಾರೋಗ್ಯಕ್ಕೂ ಉತ್ತಮ ಔಷಧಿ ಎಂದು ಕರೆಯುತ್ತಾರೆ. ಮಕ್ಕಳು ಮತ್ತು ವಯಸ್ಕರು ಯಾರೇ ಇರಲಿ ಅನಾರೋಗ್ಯ ಉಂಟಾದಾಗ ಹೆಚ್ಚಿನದಾಗಿ ಈ ರಸ ಅನ್ನು ಅನ್ನದೊಂದಿಗೆ ಸವಿಯಲು ನೀಡುತ್ತಾರೆ.
ದಕ್ಷಿಣ ಭಾರತ ವಿಧವಿಧವಾದ ಅಡುಗೆಗೆ ಹೆಸರುವಾಸಿ. ಅದರಲ್ಲಿ ಟೊಮೆಟೊ ರಸ ಅತ್ಯಂತ ರುಚಿಕರ ಹಾಗೂ ಆರೋಗ್ಯಕ್ಕೂ ತುಂಬಾ ಒಳ್ಳೆಯ ಖಾದ್ಯವಾಗಿದೆ. ಇದಕ್ಕೂ ಟೊಮೆಟೋ ರಸಂಗು ಸ್ವಲವೇ ವ್ಯತ್ಯಾಸವಿದೆ. ಹಾಗಾದ್ರೆ ಈ ಟೊಮೆಟೊ ರಸ ಮಾಡೋದು ಹೇಗೆ ಅದಕ್ಕೆ ಬೇಕಾದ ವಸ್ತುಗಳೇನು? ಮಾಡುವುದು ಹೇಗೆ? ಎಷ್ಟು ಸಮಯ ಬೇಕು ಎಂಬುದನ್ನು ನಾವಿಂದು ನೋಡೋಣ.

ಟೊಮೆಟೊ ರಸ ಮಾಡಲು ಬೇಕಾಗುವ ಪದಾರ್ಥ:
- ಟೊಮೆಟೊ- 2
- ಹಸಿ ಮೆಣಸು- 4
- ಒಣ ಮೆಣಸು - 3
- ರಸಂ ಪುಡಿ- 2 ಚಮಚ
- ಕರಿಬೇವು
- ಬೆಳ್ಳುಳ್ಳಿ ಎಸಳು - 3
- ಸ್ವಲ್ಪ ಬೆಲ್ಲ
- ತೊಗರಿ ಬೇಳೆ- 1 ಕಪ್
- ಎಣ್ಣೆ
- ಇಂಗು
- ಅರಿಶಿನ
- ಸಾಸಿವೆ
- ಹುಣಸೇಹಣ್ಣಿನ ರಸ
- ಕೊತ್ತಂಬರಿ
- ತೊಗರಿ ಬೇಳೆಗೆ ಚಿಟಿಕೆ ಅರಿಶಿನ, ಬೆಳ್ಳುಳ್ಳಿ ಎಸಳು ಮತ್ತು ಒಂದೆರಡು ಹನಿ ಎಣ್ಣೆ ಬೆರೆಸಿ ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಬೇಕು. ಒಂದು ಪಾತ್ರೆಗೆ ಒಂದು ಗ್ಲಾಸ್ ನೀರು ಹಾಕಿ ಕತ್ತರಿಸಿದ ಟೊಮೆಟೊ, ರಸಂ ಪುಡಿ, ಉಪ್ಪು, ಹುಣಸೆ ರಸ, ಕರಿಬೇವು, ಕೊತ್ತಂಬರಿ, ಬೆಲ್ಲ ಎಲ್ಲವನ್ನೂ ಸೇರಿಸಿ ಇದು ಚೆನ್ನಾಗಿ ಕುದಿಯುವವರೆಗೂ ಕಾಯಬೇಕು. ನಂತರ ಬೆಂದ ಈ ಮಿಶ್ರಣಕ್ಕೆ ಚೆನ್ನಾಗಿ ಬೆಂದ ತೊಗರಿ ಬೇಳೆ ಬೆರೆಸಿ ಚೆನ್ನಾಗಿ ಮಸೆದು ತಿರುಗಿಸಿ ಸಣ್ಣನೆಯ ಕಾವಿನಲ್ಲಿ ಒಲೆಯ ಮೇಲಿಡಬೇಕು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಸಾರಿಗೆ ಇನ್ನೂ ನೀರನ್ನು ಬೆರೆಸಿಕೊಳ್ಳಬಹುದು. ಈಗ ಚಿಕ್ಕ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಮತ್ತು ಇಂಗಿನಿಂದ ಒಗ್ಗರಣೆ ಹಾಕಿಕೊಂಡು ಸಾರಿಗೆ ಬೆರೆಸಿ ಕುದಿಸಬೇಕು.
ಈಗ ರುಚಿಕರ ಮತ್ತು ಮಸಾಲೆ ಭರಿತವಾದ ಟೊಮೆಟೊ ಸಾರು ತಿನ್ನಲು ಸಿದ್ಧವಾಗಿದೆ. ಅನ್ನದೊಂದಿಗೆ ತುಪ್ಪ ಬೆರೆಸಿ ಟೊಮೆಟೊ ಸಾರಿನ ರುಚಿ ಸವಿಯಬಹುದು.
ಮನೆಯಲ್ಲೇ ರಸಂ ಪುಡಿ ಮಾಡಲು ಹೀಗೆ ಮಾಡಿ
- 1/2 ಚಮಚ ಜೀರಿಗೆ
- 2 ಚಮಚ ಕೊತ್ತಂಬರಿ ಬೀಜ
- 1 ಚಮಚ ಮೆಂತೆ ಕಾಳು
- 1 ಚಮಚ ಸಾಸಿವೆ
- ಬೇವಿನ ಸೊಪ್ಪು
- 1/2 ಚಮಚ ಉದ್ದಿನ ಬೇಳೆ
- ಒಂದು ಚಿಟಿಕೆಯಷ್ಟು ಇಂಗು
- 1 ಚಮಚ ಕರಿಮೆಣಸು
- 6 ಒಣಮೆಣಸು (ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು)
ರಸಂ ಪುಡಿ ತಯಾರಿಸುವ ವಿಧಾನ
ಇಂಗು ಹೊರತು ಪಡಿಸಿ ಉಳಿದೆಲ್ಲಾ ಸಾಮಾಗ್ರಿಗಳನ್ನು ಬಾಣಲೆಗೆ ಹಾಕಿ ಕಡಿಮೆ ಉರಿಯಲ್ಲಿ ಹುರಿಯಬೇಕು. ಮೆಣಸು ಸ್ವಲ್ಪ ವಾಸನೆ ಬರಲು ಪ್ರಾರಂಭಿಸಿದಾಗ ಉರಿಯಿಂದ ತೆಗೆಯಬೇಕು. ನಂತರ ಈ ಹುರಿದ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ನೈಸ್ ಪುಡಿ ಮಾಡಬೇಕು, ನಂತರ ಇಂಗು ಸೇರಿಸಿದರೆ ರಸಂ ರುಚಿ ಹೆಚ್ಚಿಸುವ ಮಸಾಲೆ ಪುಡಿ ರೆಡಿ.



Click it and Unblock the Notifications
