Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
30 ದಿನ ಇಟ್ಟರೂ ಹಾಳಾಗದ ಟೊಮೆಟೋ ಉಪ್ಪಿನಕಾಯಿ: ಸುಲಭವಾಗಿ ಮಾಡುವ ವಿಧಾನ!
ಊಟ ಹಾಗೆ ತಿಂಡಿಯೊಂದಿಗೆ ಸವಿಯಲು ನೀವು ಚಟ್ನಿ, ಪಲ್ಯ, ಇದ್ದರೇನೆ ಎಲ್ಲರಿಗೂ ಪ್ರಿಯವಾಗುತ್ತೆ. ಹಾಗೆ ಊಟದೊಂದಿಗೆ ನೀವು ಉಪ್ಪಿನಕಾಯಿ ಸವಿಯೋಕೆ ಕೂಡ ಇಷ್ಟಪಡುವವರು ಹೆಚ್ಚಿನ ಮಂದಿ ಇದ್ದಾರೆ. ಊಟದೊಂದಿಗೆ ತಿಂಡಿಯೊಂದಿಗೆ ಯಾವುದಾದರು ಉಪ್ಪಿನಕಾಯಿ ಇದ್ದರೆ ಊಟ ಸೇರುತ್ತಿಲ್ಲ ಅನ್ನೋರು ಕೂಡ ಮತ್ತೆ ಒಂದು ತುತ್ತು ಹೆಚ್ಚಿ ಸವಿಯುತ್ತಾರೆ. ಹಾಗೆ ಉಪ್ಪಿನಕಾಯಿಯಲ್ಲೂ ಹತ್ತಾರು ಬಗೆಗಳಿವೆ ಅನ್ನೋದನ್ನು ಸಹ ನಾವು ಗಮನಿಸಬಹುದು.
ಅದ್ರಲ್ಲೂ ಉಪ್ಪಿನಕಾಯಿಯಲ್ಲಿ ಹಲವು ಬಗೆಗಳಿಗೆ ರುಚಿ ರುಚಿಯಾದ ಉಪ್ಪಿನಕಾಯಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ, ನಾವಿಂದು ಸುಲಭವಾಗಿ ಮನೆಯಲ್ಲೇ ಮಾಡಿ ಸವಿಯಬಹುದಾದ ಬಾಯಲ್ಲಿ ನೀರು ತರಿಸುವಂತಹ ಉಪ್ಪಿನಕಾಯಿ ಕುರಿತು ತಿಳಿಯೋಣ. ಆದ್ರೆ ಅಂಗಡಿಯಿಂದ ತಂದ ಉಪ್ಪಿನಕಾಯಿಗಳು ಬಹುಬೇಗ ಹಾಳಾಗುವುದು ನೋಡಬಹುದು. ಆದ್ರೆ ಈ ರೀತಿಯ ಉಪ್ಪಿನಕಾಯಿ ತಿಂಗಳ ಕಾಲ ಇಟ್ಟು ಸವಿಯಬಹುದು.

ಅದ್ರಲ್ಲೂ ನಾವಿಂದು ಮನೆಯಲ್ಲೇ ಟೊಮೆಟೋ ಉಪ್ಪಿನಕಾಯಿ ಮಾಡಿ ಸವಿಯುವ ಕುರಿತು ತಿಳಿಯೋಣ. ಈ ಉಪ್ಪಿನಕಾಯಿಯನ್ನು ನೀವು ಬರೋಬ್ಬರಿ 30 ದಿನಗಳಿಗೂ ಹೆಚ್ಚು ದಿನ ಇಟ್ಟು ಸವಿಯಬಹುದು. ಇದರ ರುಚಿ ಒಮ್ಮೆ ಸವಿದರೆ ಮತ್ತೆಂದು ಬೇರೆ ಉಪ್ಪಿನಕಾಯಿ ಸವಿಯಲು ಮುಂದಾಗೋದೇ ಇಲ್ಲ.
ಹಾಗಾದ್ರೆ ಮನೆಯಲ್ಲಿ ಈ ಟೊಮೆಟೋ ಉಪ್ಪಿನಕಾಯಿ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ. ಟೊಮೆಟೋ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ವಸ್ತುಗಳ ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಟೊಮೆಟೋ ಉಪ್ಪಿನಕಾಯಿ ಮಾಡಲು ಬೇಕಾಗುವ ವಸ್ತುಗಳು
- ಟೊಮೆಟೋ
- ಬ್ಯಾಡಗಿ ಮೆಣಸಿನಕಾಯಿ - 10
- ಒಣ ಮೆಣಸು - 20
- ಕಡಲೆ ಬೇಳೆ
- ಸಾಸಿವೆ
- ಜೀರಿಗೆ
- ಮೆಂತ್ಯ
- ಧನಿಯಾ ಕಾಳು
- ಬೆಳ್ಳುಳ್ಳಿ
- ಕರಿಬೇವು
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಟೊಮೆಟೋ ಉಪ್ಪಿನಕಾಯಿ ಮಾಡುವ ಸುಲಭದ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಹೆಚ್ಚಾಗಿಯೇ ಬಳಸಿಕೊಳ್ಳಿ. ಈಗ ಸಾಸಿವೆ, ಜೀರಿಗೆ, ಧನಿಯಾ, ಮೆಂತ್ಯ, ಒಣ ಮೆಣಸುಗಳನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. 2 ನಿಮಿಷ ಹುರಿದುಕೊಂಡ ಬಳಿಕ ಒಣ ಮೆಣಸುಗಳನ್ನು ಮಾತ್ರ ಹೊರ ತೆಗೆದು ಇಟ್ಟುಕೊಳ್ಳಿ.
ಈಗ ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಟೊಮೆಟೋ ಹಣ್ಣುಗಳ ಹಾಕಿಕೊಳ್ಳಿ. 2ರಿಂದ 3 ನಿಮಿಷದ ವರೆಗೂ ಬೇಯಿಸಿಕೊಂಡು ನಂತರ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಮೊದಲು ಹುರಿದುಕೊಂಡಿದ್ದ ಒಣ ಮೆಣಸು, ಬೆಳ್ಳುಳ್ಳಿ, ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಂಡು ತೆಗೆದಿಟ್ಟುಕೊಳ್ಳಿ.
ಈಗ ಅದೇ ಜಾರ್ಗೆ ಬೇಯಿಸಿಕೊಂಡಿದ್ದ ಟೊಮೆಟೋವನ್ನು ಸಹ ಹಾಕಿಕೊಳ್ಳಿ. ನಂತರ ಇದನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಇದು ಪೇಸ್ಟ್ ರೀತಿ ಆಗಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು 5ರಿಂದ 6 ಚಮಚ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಅನಂತರ ಸಾಸಿವೆ, ಜೀರಿಗೆ, ಕಡಲೆ ಬೇಳೆ ಹಾಕಿ, ಹಾಗೆ ಒಣ ಮೆಣಸು, ಕರಿಬೇವು ಹಾಕಿ 1 ನಿಮಿಷ ಹಿರಿದುಕೊಳ್ಳಿ.
ಈಗ ಟೊಮೆಟೋ ಪೇಸ್ಟ್ ಹಾಗೆ ರುಬ್ಬಿದ ಮಸಾಲೆಯನ್ನು ಸಹ ಇದಕ್ಕೆ ಹಾಕಿ 3 ನಿಮಿಷ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಇದು ಟೊಮೆಟೋ ಗೊಜ್ಜಿನ ರೀತಿ ಬರಲಿದೆ. ಹೀಗೆ ಕುದಿಯಲು ಬಿಟ್ಟರೆ ಅದು ಎಣ್ಣೆ ಬಿಡಲು ಆರಂಭಿಸಲಿದೆ. ಅನಂತರ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಬೇಕು. ಅನಂತರ ಗಾಳಿ ಹೋಗದ ಬಾಕ್ಸ್ನಲ್ಲಿ ಹಾಕಿ ಇಟ್ಟರೆ 1 ತಿಂಗಳು ಇಡಬಹುದು. ನೀವು ಸಹ ಮನೆಯಲ್ಲಿ ಈ ಟೊಮೆಟೋ ಉಪ್ಪಿನಕಾಯಿ ಮಾಡಿ ನೋಡಿ.



Click it and Unblock the Notifications
