Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಊಟ ಬೇಡ ಅನ್ನೋರು ಕೂಡ ತಟ್ಟೆ ಖಾಲಿ ಮಾಡ್ತಾರೆ..! ಟೊಮೆಟೋ ಉಪ್ಪಿನಕಾಯಿ ಇದ್ರೆ ಸಾಕು!!
ಊಟದೊಂದಿಗೆ ಉಪ್ಪಿನಕಾಯಿ ಇದ್ದರೆ ಆ ಊಟ ಮತ್ತಷ್ಟು ರುಚಿ ನೀಡುವುದು ಪಕ್ಕ. ಊಟಕ್ಕೆ ಮಾತ್ರವಲ್ಲದೆ ತಿಂಡಿಗೂ ಕೂಡ ಉಪ್ಪಿನಕಾಯಿ ಹಾಕಿಕೊಂಡು ಸವಿಯುವವರನ್ನು ನಾವು ನೋಡಿರುತ್ತೇವೆ. ಕೆಲವರಿಗೆ ಉಪ್ಪಿನಕಾಯಿ ಇಲ್ಲದಿದ್ದರೆ ಊಟ ಮುಗಿಸಿದಂತೆ ಆಗುವುದಿಲ್ಲ. ಯಾವುದೇ ಖಾದ್ಯ ಇದ್ದರು ಅವರಿಗೆ ಉಪ್ಪಿನಕಾಯಿಯೊಂದು ಬೇಕಿರುತ್ತೆ.
ಹಾಗೆ ಶುಭ ಸಮಾರಂಭಗಳಲ್ಲಂತೂ ಉಪ್ಪಿನಕಾಯಿ ಇಲ್ಲದೆ ಯಾವುದೇ ಊಟ ಆರಂಭವಾಗೋದಿಲ್ಲ. ಅದರಲ್ಲೂ ವಿಧ ವಿಧವಾದ ಉಪ್ಪಿನಕಾಯಿಗಳು ಈಗ ಮಾರುಕಟ್ಟೆಗೆ ಬಂದಿವೆ. ನಾನ್ ವೆಜ್ ಉಪ್ಪಿನಕಾಯಿಗಳು ಕೂಡ ನೋಡಸಿಗುತ್ತಿವೆ. ಇಂತಹ ಹತ್ತಾರು ಉಪ್ಪಿನಕಾಯಿಗಳನ್ನು ನಾವು ಕೂಡ ಮಾರುಕಟ್ಟೆಯಿಂದ ಖರೀದಿಸಿ ತಂದು ಸವಿದಿರುತ್ತೇವೆ.

ಈಗ ಬಹುತೇಕರ ಮನೆಯಲ್ಲಿ ಅಂಗಡಿಯ ಉಪ್ಪಿನಕಾಯಿಗಳನ್ನೇ ನೋಡಬಹುದು. ಹಾಗೆ ಮನೆಯಲ್ಲೂ ಕೂಡ ನಾವು ಉಪ್ಪಿನಕಾಯಿಯನ್ನು ಸುಲಭವಾಗಿ ಮಾಡಬಹುದು. ಅಂತಹ ಮನೆಯಲ್ಲೇ ಮಾಡುವಂತಹ ಉಪ್ಪಿನಕಾಯಿಯಲ್ಲಿ ಟೊಮೆಟೋ ಉಪ್ಪಿನಕಾಯಿ ಕೂಡ ಒಂದು. ಇದು ಊಟದ ರುಚಿ ಹೆಚ್ಚಿಸೋ ಉಪ್ಪಿನಕಾಯಿಯಾಗಿದೆ. ಹಾಗಾದ್ರೆ ಮನೆಯಲ್ಲೇ ಈ ಅದ್ಭುತ ರುಚಿ ಉಪ್ಪನಕಾಯಿ ಮಾಡುವ ಕುರಿತು ಇಲ್ಲಿ ತಿಳಿಯೋಣ.
ಟೊಮೆಟೋ ಉಪ್ಪಿನಕಾಯಿ ಮಾಡೋದು ಹೇಗೆ? ಈ ಉಪ್ಪಿನಕಾಯಿ ಮಾಡುವ ವಿಧಾನವೇನು? ಯಾವೆಲ್ಲಾ ರೀತಿಯ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹಣ್ಣು ಟೊಮೆಟೋ
- ಹುಣಸೆ ಹುಳಿ
- ಸಾಸಿವೆ
- ಜೀರಿಗೆ
- ಇಂಗು
- ಬೆಳ್ಳುಳ್ಳಿ
- ಕರಿಬೇವು
- ಎಣ್ಣೆ
- ಉಪ್ಪು
- ಮೆಂತ್ಯ
- ಒಣ ಮೆಣಸು
- ಅರಶಿಣ ಪುಡಿ
ಟೊಮೆಟೋ ಉಪ್ಪಿನಕಾಯಿ ಮಾಡುವ ವಿಧಾನವೇನು?
ಮೊದಲು ಅರ್ಧ ಕೆ.ಜಿ ಹಣ್ಣಾಗಿರುವ ಟೊಮೆಟೋ ಚೆನ್ನಾಗಿ ತೊಳೆದು ನೀರು ಇಲ್ಲದಂತೆ ಬಟ್ಟೆಯಲ್ಲಿ ಒರೆಸಿಕೊಂಡು ಕತ್ತರಿಸಿಕೊಳ್ಳಬೇಕು. ಹಾಗೆ ಅದರ ಮೇಲ್ಭಾಗದ ಬಿಳಿಯ ಭಾಗ ತೆಗೆಯಬೇಕು. ಸ್ಲೈಸ್ ಆಗಿ ಹೆಚ್ಚಿಕೊಂಡರೆ ಉತ್ತಮ. ಹೀಗೆ ಹೆಚ್ಚಿಕೊಂಡಿರುವ ಟೊಮೆಟೋ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈಗ ಅದಕ್ಕೆ ದೊಡ್ಡ ನಿಂಬೆ ಗಾತ್ರದಷ್ಟು ಹುಣಸೆ ಹುಳಿ ತೆಗೆದುಕೊಂಡು ನೀರಿನಲ್ಲಿ ನೆನೆಸಿಟ್ಟು ಅರ್ಧ ಕಪ್ ಹುಳಿಯನ್ನು ಇದಕ್ಕೆ ಹಾಕಿ.
ಈಗ ಅರ್ಧ ಕಪ್ ಎಣ್ಣೆಯನ್ನು ಇದಕ್ಕೆ ಹಾಕಿ, ಬಳಿಕ ಉಪ್ಪು ಹಾಕಿ ಒಲೆ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿ ಕುದಿಯಲು ಬಿಡಬೇಕು. ಟೊಮೆಟೋ ನೀರು ಬಿಟ್ಟುಕೊಂಡು ಕುದಿಯಲು ಆರಂಭಿಸಿದಾಗ ಸಣ್ಣ ಉರಿಯಲ್ಲಿ ನೀರು ಆವಿಯಾಗಲು ಬಿಡಿ.
ಇಗ ಇನ್ನೊಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಸಾಸಿವೆ, ಮೆಂತ್ಯೆ, ಜೀರಿಗೆ ಹಾಕಿ ಡ್ರೈ ಆಗಿ ಫ್ರೈ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈ ನಡುವೆ ಒಲೆ ಮೇಲೆ ಕುದಿಯುತ್ತಿರುವ ಟೊಮೆಟೋ ಅನ್ನು ತಿರುಗಿಸುತ್ತಾ ಇರಿ, ಇದು ಗೊಜ್ಜಿನ ರೀತಿ ಬರಬೇಕು. ಈಗ ಮಿಕ್ಸಿ ಜಾರ್ಗೆ ತಣ್ಣಗಾದ ವಸ್ತುಗಳ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಿ.
ಹೀಗೆ ಪುಡಿ ಮಾಡಿಕೊಂಡ ಮಸಾಲೆಗಳನ್ನು ಕುದಿಯುತ್ತಿರುವ ಟೊಮೆಟೋಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ 2 ನಿಮಿಷ ಕುದಿಯಲು ಬಿಡಿ. ಈಗ ಒಂದು ಬಾಣಲೆ ಒಟ್ಟು ಅದಕ್ಕೆ ಅರ್ಧ ಕಪ್ ಎಣ್ಣೆ ಹಾಕಿ, ಬಳಿಕ ಸಾಸಿವೆ, ಬೆಳ್ಳುಳ್ಳಿ, ಒಣ ಮೆಣಸು, ಕರಿಬೇವು ಹಾಕಿ ಕರಿದುಕೊಳ್ಳಿ. ಹಾಗೆ ಇದಕ್ಕೆ ಅರ್ಧ ಸ್ಪೂನ್ ಇಂಗು, ಅರಶಿಣ ಪುಡಿ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಟೊಮೆಟೋ ಗೊಜ್ಜನ್ನು ಈ ಬಾಣಲೆಗೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ ರುಚಿ ನೋಡಿ ಸ್ವಲ್ಪ ಉಪ್ಪು ಹಾಕಿಕೊಂಡು 2 ನಿಮಿಷ ಕುದಿಯಲು ಬಿಟ್ಟು ಬಿಡಿ.
ಇಷ್ಟಾದರೆ ಟೊಮೆಟೋ ಉಪ್ಪಿನಕಾಯಿ ರೆಡಿಯಾಗುತ್ತದೆ. ಇದನ್ನು ಒಂದು ಸ್ಟೀಲ್ ಡಬ್ಬಿಯಲ್ಲಿ ಹಾಕಿ ಇಟ್ಟರೆ ಹಲವು ದಿನಗಳ ಕಾಲ ಇಟ್ಟು ಸವಿಯಬಹುದು.



Click it and Unblock the Notifications
