Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವರ್ಷಗಳವರೆಗೆ ಇಟ್ಟರೂ ಕೆಡುವುದಿಲ್ಲ ಟೊಮೆಟೋ ಉಪ್ಪಿನಕಾಯಿ..! ಮಾಡುವ ವಿಧಾನ ಇಲ್ಲಿದೆ.!
ನಾವು ಉಪ್ಪಿನಕಾಯಿ ಬಗ್ಗೆ ಮಾತನಾಡಿದರೆ, ನೀವು ಭಾರತದ ಪ್ರತಿಯೊಂದು ಮೂಲೆಯಲ್ಲಿಯೂ ವಿವಿಧ ರೀತಿಯ ಉಪ್ಪಿನಕಾಯಿಗಳನ್ನು ತಿನ್ನಬಹುದು. ಪ್ರತಿ ಭಾರತೀಯ ಮನೆಯಲ್ಲೂ ಉಪ್ಪಿನಕಾಯಿಯನ್ನು ವಿವಿಧ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಇನ್ನು ಉಪ್ಪಿನಕಾಯಿಯಿಲ್ಲದೆ ಊಟ ಅಪೂರ್ಣ ಅಂತಲೂ ಹೇಳಲಾಗುತ್ತದೆ.
ಊಟದ ಜೊತೆ ಉಪ್ಪಿನಕಾಯಿ ಇಲ್ಲದಿದ್ದರೆ ಯಾವ ಶುಭಾ ಸಮಾರಂಭಗಳು ನಡೆಯುವುದೇ ಇಲ್ಲ. ಹೀಗಾಗಿ ಭಾರತದಲ್ಲಿ ಉಪ್ಪಿನಕಾಯಿಗೆ ಅಷ್ಟು ಮಹತ್ವವಿದೆ. ಈಗ ನಾವು ಟೊಮೆಟೋ ಹಣ್ಣಿನಲ್ಲಿ ಮಾಡಬಹುದಾದ ಉಪ್ಪಿನಕಾಯಿ ಕುರಿತು ತಿಳಿದುಕೊಳ್ಳೋಣ.
ಟೊಮೆಟೋ ಉಪ್ಪಿನಕಾಯಿ ಮಾಡಲು ಎಷ್ಟು ಸುಲಭವೋ ಸವಿಸಲು ಅಷ್ಟೇ ರುಚಿಕರವಾಗಿರುತ್ತದೆ. ವರ್ಷಗಳ ಕಾಲ ನೀವು ಈ ಟೊಮೆಟೋ ಉಪ್ಪಿನಕಾಯಿಯನ್ನು ಸಂರಕ್ಷಿಸಿಡಬಹುದು. ಹಾಗಾದರೆ ಟೊಮೆಟೋ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಟೊಮೆಟೋ ಉಪ್ಪಿನಕಾಯಿ ಮಾಡಲು ಬೇಕಾಗುವ ವಸ್ತುಗಳು
- ಟೊಮೆಟೊ ಅರ್ಧ ಕೆಜಿ
- ಹಸಿ ಮೆಣಸಿನಕಾಯಿ 10-15
- ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
- 10-15 ಎಸಳು ಬೆಳ್ಳುಳ್ಳಿ
- ಅರಿಶಿಣ ಪುಡಿ 1 ಚಮಚ
- ಕೆಂಪು ಮೆಣಸಿನ ಪುಡಿ 1 ಚಮಚ
- ಸಾಸಿವೆ 1 ಚಮಚ
- ಮೆಂತೆ ಕಾಳು 1 ಚಮಚ
- ವಿನಿಗರ್ 2 ಚಮಚ
- ರುಚಿಗೆ ತಕ್ಕ ಉಪ್ಪು
- ಎಣ್ಣೆ ಅರ್ಧ ಕಪ್
ಟೊಮೆಟೋ ಉಪ್ಪಿನಕಾಯಿ ತಯಾರಿಸುವ ವಿಧಾನ
ಟೊಮೆಟೋವನ್ನು ಕತ್ತರಿಸಿ ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಅರಿಶಿಣ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ ವಿನಿಗರ್ ಹಾಕಿ 2 ಗಂಟೆಗಳ ಕಾಲ ಹಾಗೆಯೇ ಇಡಬೇಕು. ಇದರಿಂದ ಟೊಮೆಟೋದಲ್ಲಿರುವ ನಾರಿನ ಅಂಶ ಮತ್ತು ಹುಳಿ ಬಿಟ್ಟುಕೊಳ್ಳುತ್ತದೆ.
ನಂತರ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಸಾಸಿವೆಯನ್ನು ಹಾಕಿ ಪೇಸ್ಟ್ ರೀತಿ ಮಾಡಬೇಕು. ನಂತರ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಒಂದು ಚಮಚ ಸಾಸಿವೆಯನ್ನು ಹಾಕಬೇಕು. ಸಾಸಿವೆ ಕಾದ ಬಳಿಕ ಮೆಂತೆ ಕಾಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ, ಸಾಸಿವೆ ಹಾಕಿ ತಯಾರಿಸಿದ ಪೇಸ್ಟ್ ಅನ್ನು ಬಿಸಿಯಾದ ಎಣ್ಣೆಗೆ ಹಾಕಬೇಕು. ಗ್ಯಾಸ್ ಉರಿ ಸ್ವಲ್ಪ ಕಮ್ಮಿ ಮಾಡಿ ಈ ಮಿಶ್ರಣವನ್ನು 3-4 ನಿಮಿಷ ಕಾಲ ಹುರಿಯಬೇಕು.
ಈಗ ವಿನಿಗರ್ ಜೊತೆ ಮಿಶ್ರಣ ಮಾಡಿಟ್ಟ ಟೊಮೆಟೊವನ್ನು ಹಾಕಬೇಕು. ಟೊಮೆಟೊ ಚೆನ್ನಾಗಿ ಬೆಂದು ಮೆತ್ತಗಾದ ಮೇಲೆ ಸೌಟ್ ನಿಂದ ಪೇಸ್ಟ್ ರೀತಿ ಮಾಡಬೇಕು. ಟೊಮೆಟೊದ ಮೇಲೆ ಎಣ್ಣೆ ತೇಲುವವರೆಗೆ ಕುದಿಸಬೇಕು. ನಂತರ ಉರಿಯಿಂದ ತೆಗೆದು ತಣ್ಣಗಾಗಲು ಇಡಬೇಕು. ಈ ರೀತಿ ಮಾಡಿದರೆ ಟೊಮೆಟೊ ಉಪ್ಪಿನಕಾಯಿ ರೆಡಿ. ದನ್ನು ಗಾಳಿ ಸೇರದ ಗಾಜಿನ ಡಬ್ಬದಲ್ಲಿ ಹಾಕಿಟ್ಟರೆ ಒಂದು ವರ್ಷದವರೆಗೂ ಇಡಬಹುದು. ಇದನ್ನು ದೋಸೆ, ರೊಟ್ಟಿ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಇದಿಷ್ಟೇ ಅಲ್ಲದೆ ಟೊಮೆಟೋದ ಮೇಲೆ ಸಕ್ಕರೆ ಸೇರಿಸಿ ಮತ್ತು ಸಕ್ಕರೆ ಚೆನ್ನಾಗಿ ಕರಗುವ ತನಕ ಈ ಮಿಶ್ರಣವನ್ನು ಬೇಯಿಸುತ್ತಾರೆ. ಇದರ ನಂತರ, ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಮತ್ತು ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡುತ್ತಾರೆ. ಸಕ್ಕರೆ ಸೇರಿಸುವುದರಿಂದ ಉಪ್ಪಿನಕಾಯಿ ಸ್ವಲ್ಪ ಸಿಹಿಯಾಗಿರುತ್ತದೆ. ಒಂದು ವೇಳೆ ಖಾರ ಸೇವಿಸಲು ಇಷ್ಟ ಪಡದೇ ಇರುವವರು ಸಕ್ಕರೆ ಇಲ್ಲವೆ ಬೆಲ್ಲವನ್ನೂ ಇದರೊಟ್ಟಿಗೆ ಸೇರಿಸಿದರೆ ಸಿಹಿ ಉಪ್ಪಿನಕಾಯಿ ಲಭ್ಯವಾಗುತ್ತದೆ.



Click it and Unblock the Notifications
