Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಅನ್ನದ ಜೊತೆಗೆ ಅಮೃತದ ರುಚಿ ನೀಡುವ ಟೊಮೆಟೋ ಉಪ್ಪಿನಕಾಯಿ ಮಾಡಿ.! ಇಲ್ಲಿದೆ ಮಾಡುವ ವಿಧಾನ..!
ಊಟದ ಜೊತೆಗೆ ಉಪ್ಪಿನಕಾಯಿ ಇದ್ದರೆ ಊಟ ಅದ್ಭುತವಾಗಿ ಸೇರಬಹುದು. ಹಾಗೆ ಕೆಲವರು ಉಪ್ಪಿನಕಾಯಿ ಇಲ್ಲದೆ ಊಟದ ಮಾಡುವುದೇ ಇಲ್ಲ. ಹಾಗೆ ಈಗಂತು ಹತ್ತು ಹಲವು ರೀತಿಯ ಉಪ್ಪಿನಕಾಯಿಗಳು ಸಿಗುತ್ತವೆ. ಈಗಂತು ಮಾವಿನಕಾಯಿ ಸೀಸನ್ ಆರಂಭವಾಗಿರುವ ಕಾರಣ ಎಲ್ಲಿ ನೋಡಿದರು ಸುಲಭವಾಗಿ ಮಾವಿನ ಕಾಯಿ ಉಪ್ಪಿನಕಾಯಿ ಸಿಕ್ಕೇ ಸಿಗುತ್ತದೆ. ಹಾಗೆ ವಿವಿಧ ಬಗೆಯ ಉಪ್ಪಿನಕಾಯಿಗಳ ನೀವು ಸಹ ಸವಿದಿರಬಹುದು.
ಅಂದ ಹಾಗೆ ಮಾವಿನಕಾಯಿ ಉಪ್ಪಿನಕಾಯಿ, ನಿಂಬೆ ಕಾಯಿಯ ಉಪ್ಪಿನ ಕಾಯಿ, ತರಕಾರಿಗಳ ಉಪ್ಪಿನಕಾಯಿ, ಬೆಳ್ಳುಳ್ಳಿ ಉಪ್ಪಿನಕಾಯಿ ಹೀಗೆ ಇದರ ಪಟ್ಟಿ ಬೆಳೆಯುತ್ತಲೇ ಹೋಗಲಿದೆ. ನೀವು ಕೂಡ ಇಂತಹ ಹಲವು ಉಪ್ಪಿನಕಾಯಿಯನ್ನು ಮನೆಯಲ್ಲೂ ಸಹ ಮಾಡಿ ಸವಿದಿರುತ್ತೀರಿ. ಹಾಗೆ ಎಲ್ಲಾ ಶುಭ ಸಮಾರಂಭದಲ್ಲೂ ಅದ್ಭುತ ರುಚಿಯ ಉಪ್ಪಿನಕಾಯಿಯ ಸವಿದಿರುತ್ತೀರಿ.

ಇಂತಹ ಕೆಲವೇ ವಿಭಿನ್ನ ರುಚಿಯ ಉಪ್ಪಿಕಾಯಿಗಳಲ್ಲಿ ಟೊಮೆಟೋ ಉಪ್ಪಿನಕಾಯಿ ಕೂಡ ಒಂದಾಗಿದೆ. ಟೊಮೆಟೋ ಉಪ್ಪಿನಕಾಯಿ ನೆನೆದರೆ ನಿಮ್ಮ ಬಾಯಲ್ಲಿ ನೀರು ಬರಬಹುದು. ಟೊಮೆಟೋ ಉಪ್ಪಿನಕಾಯಿ ಕೂಡ ಮಾರುಕಟ್ಟೆಯಲ್ಲಿ ಸಿಗುವಂತಹ ರುಚಿ ರುಚಿಯ ಬಗೆಯಲ್ಲಿ ಒಂದಾಗಿದೆ. ಬಹಳಷ್ಟು ದಿನಗಳ ಕಾಲ ಇಟ್ಟು ಇದನ್ನು ಸವಿಯಬಹುದಾಗಿದೆ. ಹಾಗಾದ್ರೆ ಈ ಟೊಮೆಟೋ ಉಪ್ಪಿನಕಾಯಿ ಮನೆಯಲ್ಲೇ ಮಾಡೋದು ಹೇಗೆ?
ಟೊಮೆಟೋ ಉಪ್ಪಿನಕಾಯಿ ಮನೆಯಲ್ಲೇ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ಉಪ್ಪಿನಕಾಯಿ ಮಾಡಲು ಬೇಕಾಗುವ ವಸ್ತುಗಳು
- ಟೊಮೆಟೊ - 1 ಕೆ.ಜಿ
- ಮೆಂತ್ಯ - 1 ಚಮಚ
- ಸಾಸಿವೆ - 2 ಚಮಚ
- ಜೀರಿಗೆ - 2 ಚಮಚ
- ಬೆಳ್ಳುಳ್ಳಿ - 20 ರಿಂದ 25
- ಹುಣಸೆ ನಿಂಬೆ ಗಾತ್ರ
- ಅರಿಶಿನ ಪುಡಿ - 1/4 ಚಮಚ
- ಕೆಂಪು ಮೆಣಸಿನ ಪುಡಿ - 1 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ಟೊಮೆಟೋ ಉಪ್ಪಿನಕಾಯಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಮೆಂತ್ಯ, ಸಾಸಿವೆ, ಜೀರಿಗೆ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಫ್ರೈ ಮಾಡಿದ ಈ ಪದಾರ್ಥಗಳನ್ನು ತೆಗೆದಿಟ್ಟುಕೊಳ್ಳಿ, ಈಗ ಒಂದು ಕೆ.ಜಿ ಟೊಮೆಟೋವನ್ನು ಚೆನ್ನಾಗಿ ತೊಳೆದುಕೊಂಡು ನಂತರ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಬೇಕು, ನೀವು ಇರದಂತೆ ಮಾಡಿಕೊಳ್ಳಿ. ನಂತರ ಕತ್ತರಿಸಿಕೊಂಡು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಅದೇ ಬಾಣೆಲೆಗೆ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾದಾಗ ಅದಕ್ಕೆ ಟೊಮೆಟೋ ಹಣ್ಣುಗಳನ್ನು ಹಾಕಿಕೊಳ್ಳಿ. ಇದಕ್ಕೆ ಸಂಪೂರ್ಣ ಹಣ್ಣಗಾಗಿರುವ ಟೊಮೆಟೋಗಳನ್ನೇ ತೆಗೆದುಕೊಳ್ಳಿ. ನಂತರ ಇದಕ್ಕೆ ಹುಣಸೆ ಹಣ್ಣನ್ನು ಕೂಡ ಇದಕ್ಕೆ ಹಾಕಿ ಫ್ರೈ ಮಾಡಿಕೊಳ್ಳಿ. ನೀರಿನ ಅಂಶ ಇಲ್ಲದಂತೆ ಫ್ರೈ ಮಾಡಿಕೊಳ್ಳಿ 4ರಿಂದ 5 ನಿಮಿಷದಲ್ಲಿ ಇದು ಫ್ರೈ ಆಗಲಿದೆ.
ಇಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಮೊದಲು ಫ್ರೈ ಮಾಡಿಕೊಂಡಿದ್ದ ಸಾಸಿವೆ, ಜೀರಿಗೆ, ಮೆಂತ್ಯ ಹಾಕಿಕೊಂಡು ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಬೇಕು. ಇದು ತರಿತರಿಯಾಗಿ ಪುಡಿಯಾದ ಬಳಿಕ ಒಂದು ಬೌಲ್ಗೆ ಹಾಕಿಡಿ. ಈಗ ಮತ್ತೊಂದು ಜಾರ್ನಲ್ಲಿ ಫ್ರೈ ಮಾಡಿದ ಟೊಮೆಟೋ ತಣ್ಣಗಾದ ಬಳಿಕ ಅದನ್ನು ಕೂಡ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
ಈಗ ಮತ್ತೊಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಹೆಚ್ಚಾಗಿಯೇ ಬಳಸಿಕೊಳ್ಳಿ. ಈಗ ಈ ಎಣ್ಣೆಗೆ ಒಣ ಮೆಣಸು, ಸಾಸಿವೆ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಟೊಮೆಟೋ ಪೇಸ್ಟ್ ಅನ್ನು ಸಹ ಹಾಕಿಕೊಳ್ಳಿ. 2 ನಿಮಿಷದ ಬಳಿಕ ಉಪ್ಪು, ಖಾರದ ಪುಡಿ, ಅರಶಿಣ ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಬಿಟ್ಟು ನಂತರ ಮಿಕ್ಸಿಯಲ್ಲಿ ರುಬ್ಬಿದ ತರಿತರಿಯಾದ ಮಸಾಲೆಗಳನ್ನು ಸಹ ಹಾಕಿಕೊಂಡು ಚೆನ್ನಾಗಿ ಬೇಯಿಸಿಕೊಳ್ಳಿ. ಇದು ಸಂಪೂರ್ಣ ಎಣ್ಣೆ ಬಿಡುವವರೆಗೂ ಫ್ರೈ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಟೊಮೆಟೋ ಉಪ್ಪಿನಕಾಯಿ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
