Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
5 ನಿಮಿಷದಲ್ಲಿ ಮಾಡಬಹುದು ಟೊಮೆಟೋ ಪಲಾವ್..! ಎಷ್ಟು ಟೇಸ್ಟಿ ಇದು ಗೊತ್ತಾ?
ಬೆಳಗ್ಗೆ ತಿಂಡಿಗೆ ನೀವು ಪಲಾವ್ ಮಾಡುವುದು ಕಾಮನ್, ಸುಲಭವಾಗಿ ಈ ಪಲಾವ್ ಮಾಡಬಹುದಾಗಿರೋದ್ರಿಂದ ಎಲ್ಲರು ಗಡಿಬಿಡಿಯಲ್ಲೂ ಈ ಪಲಾವ್ ಮಾಡುತ್ತಾರೆ. ತರಕಾರಿಗಳ ಹೆಚ್ಚಿಕೊಂಡು ಕುಕ್ಕರ್ನಲ್ಲಿ ಇಟ್ಟು ಸುಲಭವಾಗಿ ಇದನ್ನು ಮಾಡುತ್ತಾರೆ. ಬ್ಯಾಚುಲರ್ಗಳ ಪಾಲಿಗೆ ಪಲಾವ್ ಮಾಡುವುದು ಅಂದ್ರೆ ತುಂಬಾನೆ ಇಷ್ಟ. ಹಾಗೆ ಈ ಪಲಾವ್ ಅನ್ನು ಹಲವು ಬಗೆಯಲ್ಲಿ ಹಲವು ರುಚಿಯಲ್ಲಿ ಮಾಡಬಹುದಾಗಿದೆ.
ಅದ್ರಲ್ಲೂ ಹೋಟೆಲ್ ಸ್ಟೈಲ್ನಲ್ಲಿ ಪಲಾವ್ ಮಾಡಿದ್ರೆ ಮನೆ ಮಂದಿಗೆ ಬಹಳ ಇಷ್ಟವಾಗುತ್ತದೆ. ಬೆಳಗ್ಗೆ ತಿಂಡಿಗೆ ಮಾತ್ರವಲ್ಲ ಮಧ್ಯಾಹ್ನದ ಊಟಕ್ಕೆ ಇದನ್ನು ಬಾಕ್ಸ್ಗೆ ಹಾಕಿ ನೀಡಿದರೂ ಅದನ್ನೂ ಕೂಡ ಸವಿಯುತ್ತಾರೆ. ಇದು ಬೆಳಗ್ಗೆ ಗಡಿ ಬಿಡಿಯಲ್ಲಿದ್ದಾಗಲೂ ಈ ಪಲಾವ್ ಮಾಡಬಹುದು. ಆದ್ರೆ ಕೆಲವು ಬಗೆಯಲ್ಲಿ ಪಲಾವ್ ಮಾಡುವುದು ನಮಗೆ ತಿಳಿದೆಯೇ ಇರುವುದಿಲ್ಲ.

ಹಾಗಾದ್ರೆ ನಾವಿಂದು ಈ ಟೊಮೆಟೋ ಪಾಲವ್ ಮಾಡುವ ಕುರಿತು ಇಂದು ತಿಳಿದುಕೊಳ್ಳೋಣ. ಈ ಟೊಮೆಟೋ ಪಲಾವ್ ಅನ್ನು ಸುಲಭವಾಗಿ ರುಚಿ ರುಚಿಯಾಗಿ ಮಾಡಬಹುದು. ಕಡಿಮೆ ಸಮಯದಲ್ಲಿ, ಹೆಚ್ಚು ವಸ್ತುಗಳು ಇಲ್ಲದೆ ಈ ಪಲಾವ್ ಅನ್ನು ಮಾಡಬಹುದು. ಹಾಗಾದ್ರೆ ಈ ಟೊಮೆಟೋ ಪಲಾವ್ ಮಾಡುವುದು ಹೇಗೆ? ಟೊಮೆಟೋ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಡು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಡೋ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಟೊಮೆಟೋ
- ಈರುಳ್ಳಿ
- ಜೀರಿಗೆ
- ಸಾಸಿವೆ
- ಚಕ್ಕೆ
- ಏಲಕ್ಕಿ
- ಲವಂಗ
- ಕರಿಬೇವು
- ಅರಶಿಣ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಟೊಮೆಟೊ ಪಲಾವ್ ಮಾಡುವುದು ಹೇಗೆ?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು 3 ಟೊಮೆಟೋಗಳ ಕತ್ತರಿಸಿಕೊಂಡು ಅದಕ್ಕೆ ಹಾಕಿಕೊಳ್ಳಿ. ನೀರು ಹಾಕಿಕೊಳ್ಳದೆ ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಜೀರಿಗೆ, ಸಾಸಿವೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿಕೊಂಡು ಮಿಕ್ಸ್ ಮಾಡಿ ಉದ್ದವಾಗಿ ಕತ್ತರಿಸಿಕೊಂಡು ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಈಗ 1 ನಿಮಿಷ ಬಿಟ್ಟು ಇದಕ್ಕೆ ಹಸಿ ಮೆಣಸು, ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಖಾರದ ಪುಡಿ, ಧನಿಯಾ ಪುಡಿ ಅರ್ಧ ಸ್ಪೂನ್ ಅಷ್ಟು ಸೇರಿಸಿದ ಬಳಿಕ ಚಿಟಿಕೆ ಅರಶಿಣ ಹಾಕಿಕೊಳ್ಳಿ, ಅನಂತರ ಉಪ್ಪು ಹಾಗೂ ಸಣ್ಣದಾಗಿ ಹೆಚ್ಚಿಕೊಂಡಿರುವ ಟೊಮೆಟೋವನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ.
ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಟೊಮೆಟೋ ಪೇಸ್ಟ್ ಅನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ತಿರುಗಿಸಿಕೊಂಡು ಇದರ ಮುಚ್ಚಳ ಮುಚ್ಚಿ 4 ನಿಮಿಷ ಬೇಯಿಸಿಕೊಳ್ಳಿ. ನಂತರ ಇದು ಒಂದು ಗೊಜ್ಜಿನ ರೀತಿ ಆಗಿರುತ್ತದೆ. ಇದಕ್ಕೆ ಮೊದಲೇ ಮಾಡಿಟ್ಟಿರುವ ಹುಡಿ ಹುಡಿಯಾದ ಅನ್ನವನ್ನು ಇದಕ್ಕೆ ಹಾಕಿಕೊಂಡು ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ಅನ್ನಕ್ಕೆ ಸರಿಯಾಗಿ ಮಸಾಲೆ ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಟೊಮೆಟೋ ಪಲಾವ್ ರೆಡಿಯಾಗುತ್ತದೆ. ನೀವು ಕೂಡ ಬೆಳಗ್ಗೆ ತಿಂಡಿಗೆ ಅಥವಾ ಮಧ್ಯಾಹ್ನದ ಊಟಕ್ಕೆ ಇದನ್ನು ಮಾಡಿ ನೋಡಿ.



Click it and Unblock the Notifications
