Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
2 ವಸ್ತು ಇದ್ದರೆ ಮಾಡಿ ಸೂಪರ್ ಚಟ್ನಿ..! ಇದರ ರುಚಿಗೆ ಸರಿಸಾಟಿ ಇಲ್ಲ!
ಊಟಕ್ಕೆ ಕುಳಿತಾಗ ತಟ್ಟೆಯಲ್ಲಿ ಅನ್ನ ಸಾಂಬಾರಿನ ಜೊತೆ ಒಂದು ಪಲ್ಯ, ಚಟ್ನಿ, ಗೊಜ್ಜು ಇದ್ದರೆ ಆ ಊಟಕ್ಕೆ ರುಚಿ ಬರೋದು. ಇದಕ್ಕೆ ಎಲ್ಲರೂ ಚಟ್ನಿ ಅಥವಾ ಪಲ್ಯ ಇರಬೇಕು ಎಂದುಕೊಳ್ಳುತ್ತಾರೆ. ಆದ್ರೆ ಒಂದು ಪಲ್ಯ ಅಥವಾ ಗೊಜ್ಜು ಊಟ ಹಾಗೂ ತಿಂಡಿ ಎರಡಕ್ಕೂ ಅಚ್ಚು ಮೆಚ್ಚು ಹಾಗಾದ್ರೆ ಎರಡಕ್ಕೂ ಮೆಚ್ಚುಗೆಯಾಗುವ ಖಾದ್ಯ ಯಾವುದು?
ಕೇವಲ 2 ವಸ್ತುವನ್ನು ಬಳಸಿ ಮಾಡುವ ಈ ಚಟ್ನಿ ಊಟ, ತಿಂಡಿಗೂ ಅಚ್ಚು ಮೆಚ್ಚು, ಈರುಳ್ಳಿ ಹಾಗೂ ಟೊಮೆಟೋ ಬಳಸಿ ಈ ಚಟ್ನಿ ಮಾಡಿದರೆ ಎಲ್ಲ ಖಾದ್ಯಕ್ಕೂ ಸೈ. ಬಾಯಿ ರುಚಿಗೆ ಹೇಳಿ ಮಾಡಿಸಿದ ಖಾದ್ಯ ಇದು. ಹಾಗಾದ್ರೆ ಈ ಈರುಳ್ಳಿ, ಟೊಮೆಟೋ ಚಟ್ನಿ ಮಾಡುವುದು ಹೇಗೆ?

ಈರುಳ್ಳಿ ಹಾಗೂ ಟೊಮೆಟೋ ಬಳಸಿ ಮಾಡುವ ಈ ಚಟ್ನಿ ಬಹಳ ರುಚಿಯಾಗಿರುತ್ತದೆ. ಅಲ್ಲದೆ ಸುಲಭವಾಗಿ ಬಹಳ ಬೇಗ ಇದನ್ನು ಮಾಡಬಹುದು. ಅಲ್ಲದೆ ಯಾವುದೇ ತಿಂಡಿಯ ಜೊತೆಗೂ ಇದನ್ನೂ ನೀವು ಸವಿಯಬಹುದು. ಹಾಗಾದ್ರೆ ಈ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳೇನು? ಈ ಚಟ್ನಿ ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ-ಈರುಳ್ಳಿ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಈರುಳ್ಳಿ-4
- ಜೀರಿಗೆ - 1 ಟೀಸ್ಪೂನ್
- ಬೆಳ್ಳುಳ್ಳಿ-1
- ಟೊಮೆಟೋ - 4
- ಹುಣಸೆಹಣ್ಣು-20 ಗ್ರಾಂ
- ಮೆಣಸಿನ ಪುಡಿ - 2 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 tbs
- ಕಟಲೆ ಬೇಳೆ - 1/2 ಟೀಸ್ಪೂನ್
- ಉದ್ದಿನಬೇಳೆ - 1/2 ಟೀಸ್ಪೂನ್
- ಸಾಸಿವೆ - 1/4 ಟೀಸ್ಪೂನ್
- ಕರಿಬೇವು
- ಇಂಗು - 1/4 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಟೊಮೆಟೋ-ಈರುಳ್ಳಿ ಚಟ್ನಿ ಮಾಡುವ ವಿಧಾನ
ಒಲೆ ಮೇಲೆ ಒಂದು ಪಾತ್ರೆ ಇ ಟ್ಟು ಅದಕ್ಕೆ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಹಾಕಿ, ಬಳಿಕ ಅದಕ್ಕೆ ಜಿರಿಗೆ, ಬೆಳ್ಳುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಟೊಮೆಟೋ, ಹುಣಸೆ ಹುಳಿ ಹಿಂಡಿಕೊಂಡು ಹಾಕಿಕೊಳ್ಳಿ. ಇದೆಲ್ಲಾ ಚೆನ್ನಾಗಿ ಮೃದುವಾಗಿ ಬೆಯಲು ಬಿಡಿ. ಇದಕ್ಕೆ ಉಪ್ಪು ಹಾಕಿಕೊಂಡಿ ಬೇಯಿಸಿದರೆ ಬೇಗ ಫ್ರೈ ಆಗಲಿದೆ.
ಬಳಿಕ ಇದಕ್ಕೆ ಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಟೊಮೆಟೋ ಗೊಜ್ಜಿನ ರೀತಿ ಆಗಬೇಕು. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ತಿರುಗಿಸಿ ಒಲೆ ಆಫ್ ಮಾಡಿ. ಬಳಿಕ ಇದನ್ನು ತಣ್ಣಗಾಗಲು ಬಿಡಿ.
ಬಳಿಕ ಇದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಸ್ವಲ್ಪ ನೀರು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಈಗ ಇದಕ್ಕೆ ಒಗ್ಗರಣೆ ಮಾಡಿಕೊಳ್ಳಬೇಕು. ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಉದ್ದಿನ ಬೇಳೆ, ಕಡಲೇ ಬೇಳೆ ಹಾಕಿ ಫ್ರೈ ಮಾಡಿ. ಇದಕ್ಕೆ ಸಾಸಿವೆ, ಜೀರಿಗೆ ಹಾಕಿಕೊಂಡು ಫ್ರೈ ಮಾಡಿ.
ಇದಕ್ಕೆ ಇಂಗು, ಒಣ ಮೆಣಸು, ಕರಿಬೇವು ಹಾಕಿ ಒಂದು ನಿಮಿಷ ಬಿಟ್ಟು ಅದನ್ನು ರುಬ್ಬಿಕೊಂಡಿರುವ ಚಟ್ನಿಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈರುಳ್ಳಿ, ಟೊಮೆಟೋ ಚಟ್ನಿ ರೆಡಿಯಾಗುತ್ತದೆ. ಇದು ಊಟ ತಿಂಡಿ ಎಲ್ಲದಕ್ಕೂ ರುಚಿಕರ ಚಟ್ನಿಯಾಗಿದೆ, ಫ್ರಿಡ್ಜ್‌ನಲ್ಲಿಟ್ಟರೆ ವಾರದ ವರೆಗೂ ಇಟ್ಟು ಸವಿಯಬಹುದು. ಬೇಕಾದರೆ ನೀವು ಈ ಚಟ್ನಿಗೆ ಈರುಳ್ಳಿ ಹಾಕದೆಯೂ ಮಾಡಬಹುದು. ಆದ್ದರೆ ಇದು ಟೊಮೆಟೋ ಜಾಸ್ತಿ ಹಾಕಿ ಮಾಡುವ ಟೊಮೆಟೋ ಚಟ್ನಿ ಆಗುತ್ತದೆ.



Click it and Unblock the Notifications