Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ದೋಸೆ-ಇಡ್ಲಿ ಸವಿಯೋಕೆ ಟೊಮೆಟೋ ಕುರ್ಮಾ! ಹೋಟೆಲ್ನಲ್ಲೂ ಇದೇ ರುಚಿ!
ನೀವು ಮನೆಯಲ್ಲಿ ತಿಂಡಿಗೆ ಇಡ್ಲಿ ದೋಸೆ ಮಾಡಿ ಸವಿಯೋದು ಕಾಮನ್. ಆದ್ರೆ ಇಡ್ಲಿ, ದೋಸೆ ಮಾಡಿ ಸವಿಯುವುದು ಎಲ್ಲರ ಮನೆಯ ನಿತ್ಯದ ಕೆಲಸವೂ ಆಗಿರಬಹುದು. ಹಾಗೆ ದೋಸೆ, ಇಡ್ಲಿ ಮಾಡಿದಾಗ ಅದನ್ನು ಸವಿಯಲು ಚಟ್ನಿ, ಸಾಂಬಾರ್ ಅಥವಾ ಪಲ್ಯ ಯಾವುದಾದರೊಂದು ಖಾದ್ಯ ಇರಲೇಬೇಕು. ಹೀಗಿದ್ದಾಗ ಮಾತ್ರವೇ ರುಚಿ ಹೆಚ್ಚಾಗುತ್ತೆ. ಹಾಗೆ ಎಲ್ಲರ ಮನೆಯಲ್ಲೂ ಚಟ್ನಿ, ಸಾಂಬಾರ್ ಮಾಡಿಯೇ ಮಾಡುತ್ತಾರೆ.
ಆದ್ರೆ ಹೋಟೆಲ್ನಲ್ಲಿ ನೀವು ಇಡ್ಲಿ ದೋಸೆ ಕೇಳಿ ಪಡೆದಾಗ ಅಲ್ಲಿ ಚಟ್ನಿಯೊಂದಿಗೆ ಸಾಂಬಾರ್ ಅಥವಾ ಕುರ್ಮಾ ನೀಡುವುದು ನೋಡಿರಬಹುದು. ಈ ರುಚಿ ಇದ್ದರೆ ಸಾಕು ನೀವು ಚಟ್ನಿ ಬಳಸದೆಯೇ ಇಡ್ಲಿ, ದೋಸೆ ಸವಿಯುತ್ತೀರಿ. ಇಡ್ಲಿ, ದೋಸೆಗೆ ಇದಕ್ಕಿಂತ ರುಚಿಕರ ಸೈಡ್ಸ್ ಮತ್ತೊಂದಿಲ್ಲ. ಹಾಗಾದ್ರೆ ಈ ದೋಸೆಗೆ ನೀಡುವ ಕುರ್ಮಾ ಹೇಗೆ ಮಾಡುತ್ತಾರೆ ಗೊತ್ತಾ?

ದೋಸೆ ಸವಿಯಲು ನೀಡುವ ಟೊಮೆಟೋ ಕುರ್ಮಾದ ರುಚಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ. ಮನೆಯಲ್ಲಿ ದೋಸೆ, ಇಡ್ಲಿ ಮಾಡಿದ ದಿನದಂದು ಚಟ್ನಿ ಮಾಡುವ ಬದಲಾಗಿ ಈ ಟೊಮೆಟೋ ಕುರ್ಮಾ ಮಾಡಿ ಸವಿಯಲು ನೀಡಿದರೆ ಎಲ್ಲರು ಬಾಯಿ ಚಪ್ಪರಿಸಿ ಸವಿಯೋದು ಖಚಿತ.
ಹಾಗಾದ್ರೆ ಈ ಟೊಮೆಟೋ ಕುರ್ಮಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತಾದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಹೋಟೆಲ್ ಶೈಲಿಯ ಟೊಮೆಟೋ ಕುರ್ಮಾ ಮಾಡಲು ಬೇಕಾಗುವ ವಸ್ತುಗಳು
- ಟೊಮೆಟೋ
- ಗೋಡಂಬಿ
- ತೆಂಗಿನಕಾಯಿ ತುರಿ
- ಹಸಿ ಮೆಣಸಿನಕಾಯಿ
- ಚಕ್ಕೆ
- ಏಲಕ್ಕಿ - 1
- ಲವಂಗ - 3
- ಗಸಗಸೆ - 1 ಟೀಚಮಚ
- ಸೋಂಪು ಕಾಳು
- ಎಣ್ಣೆ
- ಈರುಳ್ಳಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೊತ್ತಂಬರಿ ಸೊಪ್ಪು
- ಪುದೀನ
- ಮೆಣಸಿನ ಪುಡಿ
- ಧನಿಯಾ ಪುಡಿ
- ಗರಂ ಮಸಾಲ
- ಉಪ್ಪು
ಹೋಟೆಲ್ ಶೈಲಿಯ ಟೊಮೆಟೋ ಕುರ್ಮಾ ಮಾಡುವ ವಿಧಾನವಿದು
ಮೊದಲು ಒಂದು ಮಿಕ್ಸರ್ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಗೋಡಂಬಿ, ಹಸಿ ಮೆಣಸು, ಚಕ್ಕೆ, ಏಲಕ್ಕಿ, ಲವಂಗ, ಗಸೆಗಸೆ, ಸೋಂಪು ಕಾಳು, ಕತ್ತರಿಸಿದ ಟೊಮೆಟೋವನ್ನು ಹಾಕಿಕೊಳ್ಳಿ ಹಾಗೆ ಸ್ವಲ್ಪ ನೀರು ಸಹ ಹಾಕಿಕೊಂಡು ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಸಹ ಹಾಕಿಕೊಂಡು ಗೋಲ್ಡನ್ ಬ್ರೌನ್ ಕಲರ್ಗೆ ಬರುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಿ ಮಿಕ್ಸ್ ಮಾಡಿ.
ಬಳಿಕ ಇದಕ್ಕೆ ಕೊತ್ತಂಬರಿ ಸೊಪ್ಪು, ಪುದಿನ ಸೇರಿಸಿ ಚೆನ್ನಾಗಿ ಹುರಿಯಿರಿ. ಈಗ ಮಿಕ್ಸಿಯಲ್ಲಿ ಮೊದಲು ರುಬ್ಬಿಕೊಂಡಿದ್ದ ಮಸಾಲೆಗಳನ್ನು ಈ ಕುಕ್ಕರ್ ಗೆ ಹಾಕಿ. ಹಾಗೆ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು, ನಿಮಗೆ ಎಷ್ಟು ನೀರು ಬೇಕೋ ಅಷ್ಟು ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ.
ಈಗ ಕುಕ್ಕರ್ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಿ. ನಂತರ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ರುಚಿ ರುಚಿಯಾದ ಟೊಮೆಟೋ ಕುರ್ಮಾ ಸಿದ್ದವಾಗುತ್ತೆ. ಇದು ದೋಸೆ ಹಾಗೂ ಇಡ್ಲಿಯೊಂದಿಗೆ ಅದ್ಭುತ ರುಚಿ ನೀಡಲಿದೆ.



Click it and Unblock the Notifications
