Latest Updates
-
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು!
ಇಡ್ಲಿ ಜೊತೆ ಸವಿಯಲು ಟೊಮೆಟೋ ಕುರ್ಮ..! 2 ಇಡ್ಲಿ ಹೆಚ್ಚು ತಿನ್ನೋದು ಪಕ್ಕ!!
ನೀವು ಮನೆಯಲ್ಲಿ ಇಡ್ಲಿ ಮಾಡಿದ ದಿನ ಅದರ ಜೊತೆಗೆ ಸವಿಯಲು ಯಾವ ಖಾದ್ಯ ಮಾಡುತ್ತೀರಿ. ಅದರಲ್ಲೂ ಇಡ್ಲಿ, ದೋಸೆ ಸವಿಯಲು ವಿಶೇಷವಾಗಿ ಏನಾದರು ಮಾಡಬೇಕಿರುತ್ತೆ. ಇಡ್ಲಿ ಜೊತೆಗೆ ಚಟ್ನಿ ಅಥವಾ ಸಾಂಬಾರ್ ತುಂಬಾನೆ ಫೇಮಸ್. ಹಾಗೆ ಈ ಕಾಂಬಿನೇಷನ್ನಲ್ಲಿ ಇಡ್ಲಿ ಸವಿಯಲು ಬಹಳ ರುಚಿಕರವಾಗಿರುತ್ತೆ. ಸಾಂಬಾರ್ ಜೊತೆಗೆ ಡಿಪ್ ಮಾಡಿಕೊಂಡು ಇಡ್ಲಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ಹಾಗೆ ಇಡ್ಲಿಯ ಜೊತೆಗೆ ಮತ್ತಷ್ಟು ರುಚಿ ನೀಡುವ ಖಾದ್ಯ ಅಂದ್ರೆ ಅದು ಕುರ್ಮ. ಅದರಲ್ಲೂ ಹೋಟೆಲ್ಗಳಲ್ಲಿ ನೀಡುವಂತೆ ನೀವು ಕೂಡ ಟೊಮೆಟೋ ಕುರ್ಮ ಮಾಡಿದ್ರೆ ಇಡ್ಲಿ ಮತ್ತೆರಡು ಹೆಚ್ಚು ಸೇವಿಸುತ್ತೀರಿ. ಈ ಟೊಮೆಟೋ ಕರ್ಮ ಇಡ್ಲಿಗೆ ಬಹಳ ರುಚಿಸುತ್ತದೆ. ಹಾಗೆ ಊಟದ ಜೊತೆಗೂ ಕೂಡ ಇದನ್ನು ಸವಿಯಬಹುದು. ನಿಮಗೆ ಹೋಟಲ್ ರುಚಿಯಲ್ಲಿ ಇಡ್ಲಿ ಕುರ್ಮ ಮಾಡಿ ಸವಿಯಬೇಕು ಎನಿಸಿದರೆ ಈ ರೀತಿ ಟೊಮೆಟೋ ಕುರ್ಮ ಮಾಡಿ ಸವಿದು ನೋಡಿ.

ಹಾಗಾದ್ರೆ ಈ ರುಚಿಕರ ಟೊಮೆಟೋ ಕುರ್ಮ ಮಾಡುವುದು ಹೇಗೆ? ಇಡ್ಲಿ ರುಚಿ ಹೆಚ್ಚಿಸುವಂತಹ ಟೊಮೆಟೋ ಕುರ್ಮ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಟೊಮೆಟೋ ಕುರ್ಮ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಟೊಮೆಟೋ ಕುರ್ಮ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಇಡ್ಲಿಗೆ ಟೊಮೆಟೋ ಕುರ್ಮ ಮಾಡಲು ಬೇಕಾಗುವ ಪದಾರ್ತಗಳು
- ಟೊಮೆಟೋ- 3
- ಎಳ್ಳು
- ಲವಂಗ
- ಚಕ್ಕೆ
- ಧನಿಯಾ ಕಾಳು
- ಕಾಳು
- ಜೀರಿಗೆ
- ತೆಂಗಿನಕಾಯಿ ತುರಿ
- ಹಸಿ ಮೆಣಸು
- ಹುಣಸೆ ಹುಳಿ
- ಈರುಳ್ಳಿ
- ಖಾರದ ಪುಡಿ
- ಉಪ್ಪು
- ಎಣ್ಣೆ
- ಕರಿಬೇವು
- ಅರಶಿಣ
ಇಡ್ಲಿಗೆ ಟೊಮೆಟೋ ಕುರ್ಮ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಳ್ಳು, ಕಡಲೆ ಬೀಜ, ಚಕ್ಕೆ, ಲವಂಗ, ಜೀರಿಗೆ, ಧನಿಯಾ ಕಾಳು ಹಾಕಿಕೊಂಡು ಫ್ರೈ ಮಾಡಿ. ಎಣ್ಣೆ ಹಾಕದೆ ಮೊದಲು ಹುರಿದುಕೊಳ್ಳಿ. ನಂತರ ಈ ಎಲ್ಲಾ ವಸ್ತುಗಳನ್ನು ತೆಗೆದಿಟ್ಟು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಹಸಿ ಮೆಣಸು, ಹುಣಸೆ ಹುಳಿ ಹಾಕಿ ರುಬ್ಬಿಕೊಳ್ಳಬೇಕು. ಚಟ್ನಿ ಆಕಾರಕ್ಕೆ ಇದನ್ನು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ಈಗ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಈರುಳ್ಳಿ, ಜೀರಿಗೆ, ಕರಿಬೇವು ಫ್ರೈ ಮಾಡಿಕೊಳ್ಳಿ. 1 ನಿಮಿಷ ಬಳಿಕ ಸಣ್ಣದಾಗಿ ಹೆಚ್ಚಿರುವ ಟೊಮೆಟೋ ಅನ್ನೂ ಕೂಡ ಇದಕ್ಕೆ ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಬೇಯಲು ಬಿಡಿ. 2 ನಿಮಿಷ ಬೇಯಿಸಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಅನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ಬಳಿಕ ಖಾರದ ಪುಡಿ, ಅರಶಿಣ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ ಹಾಗೆ ಸ್ವಲ್ಪ ನೀರು ಕೂಡ ಹಾಕಿಕೊಳ್ಳಿ. ನಂತರ ಬೇಯಲು ಮೂರು ನಿಮಿಷ ಬಿಟ್ಟುಬಿಡಿ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯ ಟೊಮೆಟೋ ಕುರ್ಮ ರೆಡಿಯಾಗುತ್ತದೆ. ನೀವೇ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications
