Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಬಾಯಿ ರುಚಿಗೆ ಮಾಡಿ ಅದ್ಭುತ ರುಚಿಯ ಟೊಮೆಟೋ ಬೆಳ್ಳುಳ್ಳಿ ರಸಂ..!
ಊಟಕ್ಕೆ ಉಪ್ಪಿನಕಾಯಿ ಹೇಗೆ ರುಚಿ ಹೆಚ್ಚಿಸುತ್ತೋ ಅದೆ ರೀತಿ ರಸಂ ಕೂಡ ಮುಖ್ಯ. ಅದ್ಭುತ ರುಚಿಯ ರಸಂ ಇಡೀ ಊಟದ ಮಜಾವನ್ನೇ ಹೆಚ್ಚಿಸುತ್ತೆ. ಅದರಲ್ಲೂ ರಸಂ ಊಟದ ಕೊನೆಯಲ್ಲಿ ಸವಿದರೆ ಇಡೀ ಊಟದ ರುಚಿ ದುಪ್ಪಟ್ಟಾಗಿಸುತ್ತೆ. ಕೆಲವರು ನಿತ್ಯ ರಸಂ ಸವಿಯುತ್ತಾರೆ. ಹೋಟೆಲ್ನಲ್ಲಿ ನೀಡುವ ರಸಂ, ಹಾಗೆ ಮದುವೆ ಮನೆಯ ರಸಂ ರುಚಿಯಲ್ಲಿ ಒಂದು ಕೈ ಮೇಲಿರುತ್ತೆ.
ರಸಂವನ್ನು ಹತ್ತಾರು ಬಗೆಯಲ್ಲಿ ಮಾಡಲಾಗುತ್ತೆ. ಒಂದು ಟೊಮೆಟೋ ಇದ್ರೆ ರುಚಿ ರುಚಿಯ ರಸಂ ಮಾಡುತ್ತೇವೆ. ಆದ್ರೆ ರಸಂ ರುಚಿಕರವಾಗಬೇಕಾದರೆ ಅದಕ್ಕೆ ಅಗತ್ಯವಾಗಿ ಒಂದಿಷ್ಟು ಪದಾರ್ಥಗಳ ಹಾಕಬೇಕಾಗುತ್ತದೆ. ಇಡೀ ಮನೆ ಘಮ ಘಮಿಸುವ ರಸಂ ಮಾಡಿದರೆ ಊಟಕ್ಕೆ ಬಹಳ ಚೆನ್ನಾಗಿರುತ್ತೆ. ನಾವಿಂದು ಈ ಟೊಮೆಟೋ, ಬೆಳ್ಳುಳ್ಳಿ ರಸಂ ಕುರಿತಂತೆ ತಿಳಿಯೋಣ.

ಬೆಳ್ಳುಳ್ಳಿ ಹಾಗೂ ಟೊಮೆಟೋ ರಸಂ ಮಾಡಿದರೆ ಊಟವನ್ನ ಒಂದು ಚೂರು ಬಿಡದೆ ಸವಿಯುತ್ತೀರಿ. ಇದರ ಸುವಾಸನೆಗೆ ನೀವು ಮಾರು ಹೋಗುತ್ತೀರಿ. ಹೋಟೆಲ್ನಲ್ಲಿ ಮಾಡುವಂತಹ ವಿಶೇಷ ರುಚಿಕರ ರಸಂ ಅನ್ನು ನಾವು ಕೂಡ ಮನೆಯಲ್ಲಿ ಮಾಡಿ ನೋಡೊಣ.
ಈ ಬೆಳ್ಳುಳ್ಳಿ, ಟೊಮೆಟೋ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ-ಟೊಮೆಟೋ ರಸಂ ಮಾಡಲು ಬೇಕಾಗುವ ಪದಾರ್ಥಗಳು
- ಟೊಮೆಟೋ - 4
- ಹಸಿ ಮೆಣಸಿನಕಾಯಿ 2
- ಬೆಳ್ಳುಳ್ಳಿ
- ಹುಣಸೆಹಣ್ಣು
- ಅರಿಶಿನ
- ಕೊತ್ತಂಬರಿ ಕಾಳು
- ಜೀರಿಗೆ
- ಕಾಳು ಮೆಣಸು
- ಒಣ ಮೆಣಸಿನಕಾಯಿ
- ತೊಗರಿಬೇಳೆ
- ಸಾಸಿವೆ
- ಕರಿಬೇವು
- ಇಂಗು
- ಉಪ್ಪು
ಬೆಳ್ಳುಳ್ಳಿ-ಟೊಮೆಟೋ ರಸಂ ಮಾಡುವುದು ಹೇಗೆ?
ಮೊದಲು ನಾಲ್ಕು ಟೊಮೆಟೋ ತೆಗೆದುಕೊಂಡು ತೊಳೆದು ಮೇಲೆ ಸ್ವಲ್ಪ ಕತ್ತರಿಸಬೇಕು. ಅಂದರೆ ಸೀಳಿಕೊಳ್ಳಬೇಕು. ಇದನ್ನು ಒಂದು ಕುಕ್ಕರ್ಗೆ ಹಾಕಿ ಅದಕ್ಕೆ 2 ಹಸಿ ಮೆಣಸು, ಮುಕ್ಕಾಲು ಸ್ಪೂನ್ ಜಜ್ಜಿರುವ ಬೆಳ್ಳುಳ್ಳಿ. ಹುಣಸೆ ಹುಳಿ, ಅರಶಿನ, ಉಪ್ಪು ಹಾಗೂ 1 ಲೀಟರ್ ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ ಮೂರು ಸೀಟಿ ಹೊಡೆಯಲು ಬಿಡಬೇಕು.
ಈಗ ಪಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕೊತ್ತಂಬರಿ ಕಾಳು, ಜೀರಿಗೆ, ಕಾಳು ಮೆಣಸು, ಒಣ ಮೆಣಸು ಹಾಕಿಕೊಂಡು ಹುರಿದುಕೊಳ್ಳಿ. ಹುರಿದ ಈ ವಸ್ತುಗಳ್ನು ಎತ್ತಿಟ್ಟುಕೊಳ್ಳಿ. ಈಗ ಇದೇ ಬಾಣಲೆಗೆ ತೊಗರಿ ಬೇಳೆ ಹಾಕಿ ಫ್ರೈ ಮಾಡಿ. ನಂತರ ಇದನ್ನು ಕೂಡ ತೆಗೆದಿಟ್ಟುಕೊಳ್ಳಿ. ಈಗ ಮಿಕ್ಸಿಗೆ ಈ ಎಲ್ಲಾ ವಸ್ತುಗಳನ್ನು ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಈಗ ಬೆಳ್ಳುಳ್ಳಿ ಹಾಕಿಕೊಂಡು ಮತ್ತೆ ರುಬ್ಬಿಕೊಳ್ಳಿ. ಈ ಪುಡಿಯನ್ನು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಕುಕ್ಕರ್ ಮುಚ್ಚಳ ತೆಗೆದು ನೀರು ಒಂದು ಪಾತ್ರೆಗೆ ಸುರಿದುಕೊಂಡು ಬೆಂದಿರುವ ಟೊಮೆಟೋ, ಹಸಿ ಮೆಣಸನ್ನು ಪುಡಿ ಮಾಡಿಕೊಳ್ಳಿ. ರಸ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಮೊದಲು ತೆಗೆದಿಟ್ಟಿದ್ದ ನೀರನ್ನು ಮರಳಿ ಹಾಕಿಕೊಳ್ಳಿ. ಹಾಗೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡಿದ್ದ ಮಸಾಲೆಯನ್ನು ಸಹ ಹಾಕಿಕೊಳ್ಳಿ.
ಈಗ ಸ್ವಲ್ಪ ಉಪ್ಪು, ಒಂದು ಚಿಟಿಕೆ ಇಂಗು ಸಹ ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ಕಲಸಿಕೊಂಡು ಸ್ವಲ್ಪ ಬೆಲ್ಲ ಸಹ ಹಾಕಿಕೊಳ್ಳಬೇಕು. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಕುದಿಯಲು ಬಿಡಿ. ಸುಮಾರು 5 ನಿಮಿಷ ಕುದಿಯಲು ಬಿಟ್ಟು ಒಗ್ಗರಣೆ ಮಾಡಿಕೊಳ್ಳಿ.
ಒಂದು ಪಾತ್ರೆಗೆ ಎಣ್ಣೆ, ಸಾಸಿವೆ, ಜೀರಿಗೆ, ಒಣ ಮೆಣಸು, ಬೆಳ್ಳುಳ್ಳಿ, ಕರಿಬೇವು ಫ್ರೈ ಮಾಡಿಕೊಂಡು ಇದನ್ನು ಒಲೆ ಮೇಲೆ ಕುದಿಯುತ್ತಿರುವ ರಸಂಗೆ ಹಾಕಿಕೊಂಡು ತಿರುಗಿಸಿಕೊಳ್ಳಿ. ಇಷ್ಟಾದರೆ ಘಮ ಘಮ ಎನ್ನುವ ಟೊಮೆಟೋ, ಬೆಳ್ಳುಳ್ಳಿ ರಸಮ ರೆಡಿಯಾಗುತ್ತೆ. ಈ ರುಚಿಯಲ್ಲಿ ರಸಂ ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಲು ಮುಂದಾಗುವುದು ಪಕ್ಕಾ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
