Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಕಡಿಮೆ ಸಮಯದಲ್ಲಿ ಟೊಮೆಟೋ ಎಗ್ ಕರಿ ಮಾಡಿ..! ಈ ಟೇಸ್ಟ್ ರೆಸಿಪಿ ಮತ್ತೊಂದಿಲ್ಲ..!
ಮೊಟ್ಟೆಯ ಬಳಸಿ ಎಷ್ಟೆಲ್ಲಾ ರುಚಿಕರವಾದ ಖಾದ್ಯ ನಾವು ಮಾಡುತ್ತೇವೆ. ಹಲವು ರೀತಿಯ ಕಾದ್ಯಗಳು ಬಾಯಿ ರುಚಿ ಹೆಚ್ಚಿಸುತ್ತವೆ. ಹಾಗೆ ನಾವು ಅಂದುಕೊಂಡಿದ್ದಕ್ಕಿಂತಲೂ ರುಚಿಕರವಾಗಿ ಈ ಖಾದ್ಯಗಳ ಮಾಡಬಹುದು. ಎಗ್ ಮಸಾಳೆ, ಎಗ್ ಕರಿ, ಎಗ್ ಫ್ರೈ, ಎಗ್ ಸಾರು, ಎಗ್ ಮಸಾಲ ಫ್ರೈ, ಆಮ್ಲೆಟ್ ಹೀಗೆ ಈ ಸಾಲುಗಳು ಬೆಳಯುತ್ತವೆ.
ಮೊಟ್ಟೆಯ ಬಳಸಿದ ಎಲ್ಲಾ ರೀತಿಯ ಖಾದ್ಯಗಳು ಕೂಡ ಬೊಂಬಾಟ್ ರುಚಿ ನೀಡುತ್ತವೆ. ಹಾಗೆ ನಾವು ಸುಲಭವಾಗಿ ರುಚಿ ರುಚಿಯ ಖಾದ್ಯ ಮಾಡಬೇಕೆಂದರೆ ಮೊಟ್ಟೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಮೊಟ್ಟೆಯ ಖಾದ್ಯ ಈಗ ಎಲ್ಲರು ಸವಿಯಲು ಮುಂದಾಗುತ್ತಾರೆ, ಮಕ್ಕಳಿಗೂ ಕೂಡ ಮೊಟ್ಟೆ ತುಂಬಾನೆ ಒಳ್ಳೆಯದು. ಮೊಟ್ಟೆಯಲ್ಲಿ ಅತ್ಯುತ್ತಮ ಮಟ್ಟದ ಪ್ರೋಟಿನ್ ನಿಮಗೆ ಸಿಗುತ್ತದೆ.

ಇನ್ನು ನಾವಿಂದು ಮೊಟ್ಟೆಯಿಂದ ಮಾಡುವಂತ ಅದ್ಭುತ ರುಚಿಯಲ್ಲಿ ಮೊಟ್ಟೆ ಕರಿ ಮಾಡುವ ಕುರಿತು ತಿಳಿದುಕೊಳ್ಳೋಣ. ತುಂಬಾ ಸರಳವಾಗಿ ನಾವಿಂದು ಟೊಮೆಟೋ ಎಗ್ ಕರಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಟೊಮೆಟೋದೊಂದಿಗೆ ಈ ಎಗ್ ಕರಿ ಬಹಳ ರುಚಿಕರವಾಗಿ ಮಾಡಬಹುದು. ಹಾಗಾದ್ರೆ ಟೊಮಟೋ ಎಗ್ ಕರಿ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ಎಗ್ ಕರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು? ಮಾಡುವ ಸರಿಯಾದ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಟೊಮೆಟೋ ಎಗ್ ಕರಿ ಮಾಡಲು ಬೇಕಾಗುವ ಪದಾರ್ಥಗಳು
- ಮೊಟ್ಟೆಗಳು - 5
- ಮೆಣಸಿನ ಪುಡಿ
- ಅರಿಶಿನ ಪುಡಿ
- ಉಪ್ಪು
- ಬಿರಿಯಾನಿ ಎಲೆ
- ಜೀರಿಗೆ
- ಹಸಿರು ಮೆಣಸಿನಕಾಯಿ
- ಕರಿಬೇವಿನ ಎಲೆಗಳು
- ಈರುಳ್ಳಿ - 2
- ಟೊಮೆಟೊ - 2
- ಧನಿಯಾ ಪುಡಿ
- ಕಾಳುಮೆಣಸಿನ ಪುಡಿ
- ಗರಂ ಮಸಾಲಾ
- ಕೊತ್ತಂಬರಿ ಸೊಪ್ಪು
- ಎಣ್ಣೆ
ಟೊಮೆಟೋ ಎಗ್ ಕರಿ ಮಾಡುವುದು ಹೇಗೆ?
ಮೊದಲು ಮೊಟ್ಟೆಯನ್ನು ಬೇಯಿಸಿಕೊಳ್ಳಬೇಕು. ಹಾಗೆ ಈ ಮೊಟ್ಟೆಯನ್ನು ಚಾಕುವಿನಲ್ಲಿ ಮಧ್ಯದಲ್ಲಿ ಸೀಳಿಕೊಳ್ಳಬೇಕು. ನಾಲ್ಕು ಭಾಗ ಸೀಳಿಕೊಳ್ಳಿ, ಆದರೆ ಕತ್ತರಿಸಿಕೊಳ್ಳಬೇಡಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಖಾರದ ಪುಡಿ, ಅರಶಿಣ, ಉಪ್ಪು ಸೇರಿಸಿ ಮೊಟ್ಟೆಯನ್ಉ ಮೊದಲು ಫ್ರೈ ಮಾಡಿಕೊಳ್ಳಬೇಕು. 2 ನಿಮಿಷ ಫ್ರೈ ಮಾಡಿಕೊಳ್ಳಿ.
ಬಳಿಕ ಮೊಟ್ಟೆಗಳನ್ನು ತೆಗೆದು ಮತ್ತೊಂಧು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಪಾತ್ರೆಗೆ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಬಿರಿಯಾನಿ ಎಲೆ, ಜೀರಿಗೆ ಕರಿಬೇವು, ಹಸಿ ಮೆಣಸು, ಕತ್ತರಿಸಿದ ಈರುಳ್ಳಿ ಹಾಕಿ 3ರಿಂದ 4 ನಿಮಿಷ ಫ್ರೈ ಮಾಡಿ. ನಂತರ ಟೊಮೆಟೋ ಹಾಗೂ ಉಪ್ಪು ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಬೇಯಿಸಿ.
ನಂತರ ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಮೆಣಸಿನ ಪುಡಿ ಹಾಕಿಕೊಂಡಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ನೀರು ಹಾಕಿಕೊಂಡು ಕುದಿಯಲು ಬಿಡಿ. ಸಣ್ಣಗೆ ಕುದಿಯಲು ಆರಂಭಿಸಿದಾಗ ಬೇಯಿಸಿರುವ ಮೊಟ್ಟೆಯನ್ನು ಈ ಮಸಾಲೆಗೆ ಹಾಕಿ. ಹಾಗೆ 5 ನಿಮಿಷ ಕುದಿಯಲು ಬಿಡಿ. 5 ನಿಮಿಷದ ಬಳಿಕ ನೋಡಿದರೆ ಮೊಟ್ಟೆ ಕರಿ ಸಿದ್ಧವಾಗಿರುತ್ತದೆ. ಆದ್ರೆ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಇಳಿಸಿಕೊಳ್ಳಿ.
ಇಷ್ಟಾದರೆ ಟೊಮೆಟೋ ಎಗ್ ಕರಿ ಸಿದ್ಧವಾಗುತ್ತದೆ. ಇದನ್ನು ಊಟಕ್ಕೆ, ಚಪಾತಿಗೆ, ದೋಸಗೆ ಇದು ಸಖತ್ ಟೇಸ್ಡ್ ನೀಡಲಿದೆ. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications