Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
ಮನೆಯಲ್ಲಿ ಊಟಕ್ಕೆ ಯಾವ ಅಡುಗೆ ಮಾಡಬೇಕು ಅನ್ನೋದೆ ಬಹುದೊಡ್ಡ ಸವಾಲಿನ ಪ್ರಶ್ನೆಯಾಗಿರುತ್ತದೆ. ಯಾಕಂದ್ರೆ ನಿತ್ಯ ಒಂದೇ ರೀತಿ ಅಡುಗೆ ಮಾಡಿದರೆ ಅದು ರುಚಿ ನೀಡುವುದಿಲ್ಲ. ದಿನಾಲು ಒಂದೊಂದು ರೀತಿಯ ಅಡುಗೆ ಸೇವಿಸಬೇಕು ಅನ್ನೋದು ಎಲ್ಲರ ಆಸೆಯೂ ಆಗಿರುತ್ತೆ. ಇನ್ನು ಅನ್ನದ ಜೊತೆಗೆ ಯಾವ ಸಾಂಬಾರ್ ಮಾಡಬೇಕು, ಯಾವ ಪಲ್ಯ ಮಾಡಬೇಕು ಯಾವ ಸಾಂಬಾರ್‌ಗೆ ಯಾವ ಪಲ್ಯ ರುಚಿಸುತ್ತೆ ಅನ್ನೋದು ಉತ್ತರ ಸಿಗದ ಪ್ರಶ್ನೆಯಾಗಿದೆ.
ಈ ರೀತಿ ಮಧ್ಯಾಹ್ನದ ಅಡುಗೆಗೆ ಇಲ್ಲವೆ ರಾತ್ರಿಯ ಊಟಕ್ಕೆ ಯಾವ ತರಕಾರಿ ಸಾರು ಮಾಡುವುದು? ಕಡಿಮೆ ಸಮಯದಲ್ಲಿ ಯಾವ ಸಾರು ಮಾಡಬಹುದು ಎಂದು ಗೃಹಿಣಿಯರು ಹುಡುಕುತ್ತಿರುತ್ತಾರೆ. ಅಲ್ಲದೆ ತರಕಾರಿ ಇಲ್ಲದಿದ್ದರೆ ಏನು ಮಾಡಬೇಕು ಅನ್ನೋದೆ ನಿತ್ಯ ಕಾಡುವ ಪ್ರಶ್ನೆ. ಆದ್ರೆ ತರಕಾರಿಯೇ ಇಲ್ಲದೆ ಬೇಳೆ ಸಾರನ್ನು ತುಂಬಾ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದು.

ಹೌದು ಮನೆಯಲ್ಲಿ ತರಕಾರಿ ಇಲ್ಲದಿದ್ದರೆ ಅಥವಾ ಹೊಸ ರುಚಿಯ ಸಾರು ಮಾಡಬೇಕು ಎಂದುಕೊಂಡಿದ್ದರೆ ಟೊಮೆಟೋ ಹಾಕಿ ಮಾಡುವ ಬೇಳೆ ಸಾರು ಒಳ್ಳೆಯ ಖಾದ್ಯವಾಗಿದೆ. ಅನ್ನದ ಜೊತೆ ಬೇಳೆ ಸಾರು ಹೇಳಿ ಮಾಡಿಸಿದ ಜೋಡಿ. ಬೇಳೆ ಸಾರು ಮಾಡಲು ಎಷ್ಟು ಸುಲಭವೋ ಅನ್ನದ ಚೊತೆ ಸವಿಯಲು ಸಹ ಅಷ್ಟೇ ರುಚಿ ನೀಡುತ್ತೆ. ಹಾಗಾದ್ರೆ ನಾವಿಂದು ಟೊಮೆಟೋ ಬೇಳೆ ಸಾರು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಬೇಳೆ ಸಾರು ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂದು ವಿವರವಾಗಿ ತಿಳಿದುಕೊಳ್ಳೋಣ.
ಟೊಮೆಟೋ ಬೇಳೆ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಟೊಮೆಟೋ-5
- ತೊಗರಿ ಬೇಳೆ - 100 ಗ್ರಾಂ
- ಈರುಳ್ಳಿ (ಕತ್ತರಿಸಿದ) - 1
- ಹಸಿರು ಮೆಣಸಿನಕಾಯಿ - 3
- ಅರಿಶಿನ ಪುಡಿ - 1/2 ಟೀಸ್ಪೂನ್
- ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 1 tbs
- ಸಾಸಿವೆ - 1/2 ಟೀಸ್ಪೂನ್
- ಜೀರಿಗೆ - 1/2 ಟೀಸ್ಪೂನ್
- ಇಂಗು - 1/2 ಟೀಸ್ಪೂನ್
- ಕೆಂಪು ಮೆಣಸಿನಕಾಯಿ - 4
- ಬೆಳ್ಳುಳ್ಳಿ - 5 ಪೀಸ್
- ಕರಿಬೇವು
- ತುಪ್ಪ - 2 tbs
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಟೊಮೆಟೋ ಬೇಳೆ ಸಾರು ಮಾಡುವ ವಿಧಾನ
ಮೊದಲು 100 ಗ್ರಾಮ್ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿಕೊಳ್ಳಿ. ಇದಕ್ಕೆ ಈರುಳ್ಳಿ, ಹಸಿಮೆಣಸು, ಟೊಮೆಟೋ, ಅರಶಿನ, ಖಾರದ ಪುಡಿ, ಎಣ್ಣೆ, ಕೊತ್ತಂಬರಿ ಹಾಗೂ ಅಳೆತೆಗೆ ತಕ್ಕಷ್ಟು ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಮೂರರಿಂದ ನಾಲ್ಕು ಸೀಟಿ ಹೊಡೆಯಲು ಬಿಡಿ. 4 ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಅದನ್ನು ಪುಡಿ ಪುಡಿ ಆಗುವಂತೆ ಸ್ಮ್ಯಾಶ್ ಮಾಡಿಕೊಳ್ಳಿ.
ಬಳಿಕ ಇದಕ್ಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಬಳಿಕ ಒಂದು ಪಾತ್ರೆಯಲ್ಲಿ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ಎಣ್ಣೆ ಇಟ್ಟು ಎಣ್ಣೆ ಕಾದ ಬಳಿಕ ಅದಕ್ಕೆ ಸಾವಿಗೆ, ಜೀರಿಗೆ, ಇಂಗು, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸು ಹಾಕಿಕೊಂಡು 3 ನಿಮಿಷ ಫ್ರೈ ಮಾಡಿಕೊಳ್ಳಿ. ಇದಾದ ಬಳಿಕ ಒಗ್ಗರಣೆಯನ್ನು ಬೆಳೆ ಸಾರಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಬಳಿಕ ಸಾರನ್ನು ಒಲೆ ಮೇಲೆ ಇಟ್ಟು ನಿಧಾನವಾಗಿ ಕುದಿಸಿ. ಈ ವೇಳೆ ನಿಮಗೆ ಬೇಕಾದರೆ ತುಪ್ಪ ಹಾಕಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ಟೊಮೆಟೋ ಬೇಳೆ ಸಾರು ರೆಡಿಯಾಗಿರುತ್ತೆ. ಇದನ್ನು ಚಪಾಟಿ, ಅನ್ನದ ಜೊತೆ ಸವಿಯಲು ಸಿಕ್ಕಾಪಟ್ಟೆ ರುಚಿಸಲಿದೆ.



Click it and Unblock the Notifications
