Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಾಯಲ್ಲಿ ನೀರು ತರಿಸುವ ಆಂಧ್ರ ಶೈಲಿಯ ಟೊಮೆಟೋ ದಾಲ್!
ಊಟ, ತಿಂಡಿಯಲ್ಲಿ ವೆರೈಟಿ ನೀವು ಬಯಸುವಂತಹ ರುಚಿಗಳು ಸಿಗೋದು ಆಂಧ್ರ ಶೈಲಿಯಲ್ಲಿ ಏಕೆಂದರೆ ಅಲ್ಲಿ ಸಿಗುವಷ್ಟು ವೆರೈಟಿ ತಿಂಡಿ ಊಟ ನಿಮಗೆ ಬೇರೆಲ್ಲು ಸಿಗುವುದಿಲ್ಲ. ಹಾಗೆ ಅಲ್ಲಿನ ರುಚಿ ಸಹ ಬೇರೆ ಎಲ್ಲಿಯೂ ನಿಮಗೆ ಸಿಗುವುದಿಲ್ಲ. ಹೀಗಾಗಿ ಆಂಧ್ರ ಶೈಲಿ ಯ ಊಟ ಅಂದ್ರೆ ಎಲ್ಲಾ ಪಡೆಯಲ್ಲೂ ತುಂಬಾನೆ ಫೇಮಸ್.
ನಾವು ಸಹ ಈ ರೀತಿ ಆಂಧ್ರ ಶೈಲಿ ಊಟದ ಬೋರ್ಡ್ಗಳಿರುವ ಹೋಟೆಲ್ಗಳನ್ನು ನೋಡಿರುತ್ತೇವೆ. ಅಂದ್ರೆ ಅಲ್ಲಿನ ಊಟ ಅಷ್ಟೊಂದು ರುಚಿಕರವಾಗಿರುತ್ತೆ. ಹೀಗಾಗಿ ನಾವಿಂದು ಈ ಆಂಧ್ರ ಶೈಲಿಯಲ್ಲಿ ಟೊಮೆಟೋ ದಾಲ್ ಮಾಡುವ ಕುರಿತು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ನಾವು ಬೇಳೆ ಹಾಗೂ ಟೊಮೆಟೋ ಸೇರಿಸಿ ದಾಲ್ ರೆಡಿ ಮಾಡುತ್ತೇವೆ. ಆದ್ರೆ ಆಂಧ್ರ ಶೈಲಿಯಲ್ಲಿ ಈ ದಾಲ್ ಬಹಳ ರುಚಿಕರವಾಗಿರುತ್ತದೆ.

ದಾಲ್ ಇದ್ದರೆ ಊಟ, ತಿಂಡಿ ಎಲ್ಲದಕ್ಕೂ ರುಚಿ ನೀಡುತ್ತೆ. ಹೀಗಾಗಿ ದಾಲ್ ಪ್ರಿಯರು ಯಾವಾಗಲು ಆಂಧ್ರ ಶೈಲಿಯ ದಾಲ್ ಇಷ್ಟಪಡುತ್ತಾರೆ. ಹಾಗಾದ್ರೆ ನಾವಿಂದು ಈ ಆಂಧ್ರ ಶೈಲಿಯ ದಾಲ್ ಮಾಡುವುದು ಹೇಗೆ? ಇದನ್ನು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಎಂಬುದನ್ನು ತಿಳಿದುಕೊಳ್ಳೋಣ.
ಆಂಧ್ರ ಶೈಲಿಯ ದಾಲ್ ಮಾಡಲು ಬೇಕಾಗುವ ಪದಾರ್ಥಗಳು
- ತೊಗರಿ ಬೇಳೆ - 150 ಗ್ರಾಂ
- ಎಣ್ಣೆ - 1 ಟೀಸ್ಪೂನ್
- ಅರಿಶಿನ ಪುಡಿ
- ಜೀರಿಗೆ - 1 tbs
- ಬೆಳ್ಳುಳ್ಳಿ
- ಮೆಣಸಿನ ಪುಡಿ - 1 tbs
- ಹುಣಸೆ ಹಣ್ಣಿನ ರಸ
- ಉಪ್ಪು
- ತುಪ್ಪ - 2 tbs
- ಸಾಸಿವೆ
- ಒಣ ಮೆಣಸು - 2
- ಕರಿಬೇವು
- ಕೊತ್ತಂಬರಿ ಸೊಪ್ಪು
- ಕರುಬೇವು
- ಈರುಳ್ಳಿ - 2
- ಟೊಮೆಟೊ - 3
- ಹಸಿರು ಮೆಣಸಿನಕಾಯಿ - 3
ಆಂಧ್ರ ಶೈಲಿಯ ಟೊಮೆಟೋ ದಾಲ್ ಮಾಡುವ ವಿಧಾನ
ಒಂದು ಬೌಲ್ಗೆ ತೊಗರಿ ಬೇಳೆ ಹಾಕಿಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ಇಲ್ಲವೆ ಅರ್ಧ ಗಂಟೆ ನೆನೆಸಿಟ್ಟರೆ ಒಳ್ಳೆಯದು. ಬಳಿಕ ಈ ಬೇಳೆಯನ್ನು ಚೆನ್ನಾಗಿ ಬೇಯಿಸಬೇಕು. ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಬೇಳೆಯನ್ನು ಬೇಯಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಎಣ್ಣೆ ಹಾಗೂ ಅರಶಿನ ಹಾಕಿಕೊಂಡು ಬೇಯಿಸಿಕೊಳ್ಳಿ.
5 ನಿಮಿಷದ ಬಳಿಕ ಇದಕ್ಕೆ ಈರುಳ್ಳಿ ಹಾಗೂ ಟೊಮೆಟೋವನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಹಸಿ ಮೆಣಸು ಸಹ ಹಾಕಿಕೊಂಡು ಬೇಯಿಸಿಕೊಳ್ಳಿ. ಒಲೆ ಮೇಲೆ ಇದು ಬೇಯುವಾಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಖಾರದ ಪುಡಿ, ಜೀರಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. 2 ಸುತ್ತು ಸುತ್ತಿಸಿಕೊಂಡರೆ ಸಾಕಾಗುತ್ತದೆ.
ಒಲೆ ಮೇಲೆ ಇಟ್ಟ ಬೇಳೆಗೆ ರುಬ್ಬಿಕೊಂಡ ಮಸಾಲೆ ಹಾಕಿಕೊಳ್ಳಿ,. ಬಳಿಕ ಇದಕ್ಕೆ ಉಪ್ಪು ಹಾಕಿಕೊಂಡಿ ಬೇಯಲು ಬಿಡಿ. ಈ ದಾಲ್ ಕುದಿಯಲು ಬಿಡಿ. ಬಳಿಕ ಇದಕ್ಕೆ ಹುಣಸೆ ಹುಳಿ ಹಾಕಿಕೊಂಡು ಒಂದು ಕುದಿ ಬರಲು ಬಿಡಿ. ಬಳಿಕ ಒಲೆ ಆಫ್ ಮಾಡಿ ಬೇಳೆ ಬೆಂದಿದೆಯೇ ನೋಡಿಕೊಳ್ಳಿ. ನಿಮಗೆ ಎಷ್ಟು ನೀರು ಬೇಕೋ ಅಷ್ಟು ಹಾಕಿಕೊಳ್ಳಬಹುದು.
ಈಗ ಒಗ್ಗರಣೆ ಮಾಡಿಕೊಳ್ಳಿ, ಸಣ್ಣ ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿ, ಬಳಿಕ ಇದಕ್ಕೆ ಸಾಸಿವೆ, ಮೆಣಸು, ಕರಿಬೇವು, ಬೆಳ್ಳುಳ್ಳಿ ಹಾಕಿಕೊಂಡು ಕಾಯಿಸಿಕೊಳ್ಳಿ. ಈ ಒಗ್ಗರಣೆಯನ್ನು ದಾಲ್ಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಆಂಧ್ರ ಶೈಲಿಯ ಟೊಮೆಟೋ ದಾಲ್ ರೆಡಿಯಾಗಿರುತ್ತದೆ. ಈ ರುಚಿ ನೋಡಿದ್ರೆ ನೀವು ಮತ್ತೆ ಮತ್ತೆ ಇದನ್ನು ಮಾಡಿ ಸವಿಯುತ್ತೀರಿ.



Click it and Unblock the Notifications
