Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬೊಂಬಾಟ್ ರುಚಿಯ ಟೊಮೆಟೋ ದಾಲ್ ಸಾಂಬಾರ್..! ಸಿಂಪಲ್ ರೆಸಿಪಿ ಇಲ್ಲಿದೆ
ನಾವು ಮನೆಯಲ್ಲಿ ಊಟಕ್ಕೆ ದಾಲ್ ಸಾಂಬಾರ್ ಮಾಡುತ್ತೇವೆ. ಆದರೆ ಸಮಯವೇ ಇಲ್ಲದಾಗ ಈ ಟೊಮೆಟೋ ದಾಲ್ ಸಾಂಬಾರ್ ಮಾಡಲು ಮುಂದಾಗುತ್ತೇವೆ. ಏಕೆಂದರೆ ಈ ದಾಲ್ ಸಾಂಬಾರ್ ಮಾಡುವುದು ತುಂಬಾನೆ ಸುಲಭ ಜೊತೆಗೆ ಕೆಲವೇ ವಸ್ತುಗಳ ಹಾಕಿ ಇದನ್ನ ಮಾಡಬಹುದು.
ಟೊಮೆಟೋ ದಾಲ್ ಸಾಂಬಾರ್ ರುಚಿಯಲ್ಲಿ ಎತ್ತಿದ ಕೈ ಏಕೆಂದರೆ ನೀವು ಯಾವುದೇ ಟೆಸ್ಟ್ನಲ್ಲಿ ಇದನ್ನು ಮಾಡಿದರೂ ಸೂಪರ್ ಎಂಬ ಕಮೆಂಟ್ ನೀವಾಗಿಯೇ ಮಾಡುತ್ತೀರಿ. ಯಾಕಂದ್ರೆ ಈ ರೆಸಿಪಿಯಲ್ಲಿ ಒಗ್ಗರಣೆ ಬಳಸುವುದರಿಂದ ಒಳ್ಳೆಯ ಸುವಾಸನೆಯ ಜೊತೆಗೆ ಅತ್ತುತ್ತಮ ರುಚಿ ನೀಡುತ್ತದೆ. ಹೀಗಾಗಿ ಅನ್ನದ ಜೊತೆಗೆ ಈ ಟೊಮೆಟೋ ದಾಲ್ ಸಾಂಬಾರ್ ಇನ್ನಿಲ್ಲದ ರುಚಿ ನೀಡುತ್ತದೆ.

ದಾಲ್ ಸಾಂಬಾರ್ ಮಾಡುವುದರಲ್ಲಿ ಹೊಸತೇನು ಇಲ್ಲ. ನೀವು ತೊಗರಿ ಬೇಳೆ ಬಳಸಿ ಹಲವು ಬಾರಿ ಮಾಡಿರುತ್ತೀರಿ. ಸ್ವಲ್ಪ ದಪ್ಪವಾಗಿ ಮಾಡಿಕೊಂಡು ಎರಡು ಹೊತ್ತು ಸಹ ಸೇವಿಸಿರುತ್ತೀರಿ. ಹಾಗಾದರೆ ನಾವಿಂದು ಟೊಮೆಟೋ ದಾಲ್ ಸಾಂಬಾರ್ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಅದರಲ್ಲೂ ಈ ದಾಲ್ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಅದರ ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ದಾಲ್ ಸಾಂಬಾರ್ ಮಾಡಲು ಬೇಕಾಗುವ ವಸ್ತುಗಳು
- ತೊಗರಿ ಬೇಳೆ- ಒಂದು ಮುಷ್ಠಿ
- ಹಸಿ ಮೆಣಸಿನಕಾಯಿ
- ಈರುಳ್ಳಿ-2
- ಟೊಮೆಟೋ-5
- ಖಾರದ ಪುಡಿ
- ಅರಶಿನ
- ಹುಣಸೆ ಹುಳಿ
- ಕೊತ್ತಂಬರಿ ಸೊಪ್ಪು
- ಒಣ ಮೆಣಸು
- ಜೀರಿಗೆ
- ತುಪ್ಪ
- ಸಾವಿವೆ
- ಇಂಗು
- ಬೆಳ್ಳುಳ್ಳಿ
- ಶುಂಠಿ
- ಒಣ ಮೆಣಸು
- ಕರಬೇವಿನ ಸೊಪ್ಪು
ಟೊಮೆಟೋ ದಾಲ್ ಸಾಂಬಾರ್ ಮಾಡುವ ವಿಧಾನ
ಮೊದಲು ತೊಗರಿ ಬೇಳೆ ಚೆನ್ನಾಗಿ ತೊಳೆದು 10 ನಿಮಿಷ ನೆನೆಸಿಡಿ. ಬಳಿಕ ಒಲೆ ಮೇಲೆ ಕುಕ್ಕರ್ ಇಟ್ಟು ತೊಗರಿ ಬೇಳೆ, ಈರುಳ್ಳಿ, ಹಸಿ ಮೆಣಸು, ಟೊಮೆಟೋ (ದೊಡ್ಡದಾಗಿ ಹೆಚ್ಚಿ) ಅರಶಿನ, ಖಾರದಪುಡಿ, ಕೊತ್ತಂಬರಿ ಸೊಪ್ಪು, ಹುಣಸೆ ಹುಳಿ ಒಟ್ಟಿಗೆ ಹಾಕಿ. ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಬಳಿಕ ಮುಚ್ಚಳ ಹಾಕಿ 4 ಸೀಟಿ ಬರುವವರೆಗೂ ಬಿಡಿ. 4 ಸೀಟಿಯ ಬಳಿಕ ಕುಕ್ಕರ್ ಬದಿಗಿಟ್ಟು, ಗ್ಯಾಸ್ ಸಂಪೂರ್ಣ ಹೋಗುವವರೆಗೂ ಕಾಯಿರಿ. ಬಳಿಕ ಕುಕ್ಕರ್ ಮುಚ್ಚಳ ತೆರೆಯಿರಿ. ನಂತರ ಬೇಳೆಯನ್ನು ಸ್ವಲ್ಪ ನುಣ್ಣಗೆ ಪುಡಿ ಮಾಡಿಕೊಳ್ಳಿ, (ಪ್ರೆಸ್ ಮಾಡಿಕೊಳ್ಳಿ) ಈ ವೇಳೆ ರುಚಿಗೆ ಉಪ್ಪು ಹಾಕಿಕೊಳ್ಳಿ.
ಬಳಿಕ ಇದಕ್ಕೆ ಒಗ್ಗರಣೆ ತಯಾರು ಮಾಡಿ. ಒಲೆ ಮೇಲೆ ಪಾತ್ರೆಯಿಟ್ಟು ಎಣ್ಣೆ ಮತ್ತು ತುಪ್ಪ ಹಾಕಿ, ಇದು ಬಿಸಿಯಾದಾಗ ಜೀರಿಗೆ, ಸಾಸಿವೆಯನ್ನು ಹಾಕಿ. ಬಳಿಕ ಇಂಗು, ಬೆಳ್ಳುಳ್ಳಿ, ಒಣ ಮೆಣಸು, ಶುಂಠಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಒದೆರಡು ನಿಮಿಷದ ಬಳಿಕ ಕರಿಬೇವಿನ ಸೊಪ್ಪು ಹಾಕಿ ಒಲೆಯನ್ನು ಆಫ್ ಮಾಡಿ. ಬಳಿಕ ಒಗ್ಗರಣೆಯನ್ನು ಕುಕ್ಕರ್ನಲ್ಲಿರುವ ದಾಲ್ಗೆ ಹಾಕಿ ಒಂದು ನಿಮಿಷ ಮಿಶ್ರಣ ಮಾಡದೆ ಹಾಗೆಯೇ ಬಿಡಿ.
ಇಲ್ಲವೆ ಒಂದು ನಿಮಿಷ ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಬಿಸಿ ಮಾಡಿ. ಒಂದೆರಡು ನಿಮಿಷದ ಬಳಿಕ ಚೆನ್ನಾಗಿ ಮಿಶ್ರಣ ಮಾಡಿ. ಅನ್ನಕ್ಕೆ ಮಾಡುವುದಾದರೆ ಸ್ವಲ್ಪ ತೆಳುವಾಗಿ ಮಾಡಿಕೊಳ್ಳಿ. ಇಷ್ಟು ಮಾಡಿದರೆ ನಿಮ್ಮ ಮುಂದೆ ಟೊಮೆಟೋ ದಾಲ್ ಸಾಂಬಾರ್ ರೆಡಿಯಾಗಿರುತ್ತೆ.
ನೀವು ಇದನ್ನು ಅನ್ನ ಮಾತ್ರವಲ್ಲ ಬೇರೆ ತಿಂಡಿಗಳಿಗೂ ಬಳಸಬಹುದು. ಇಡ್ಲಿ ದೋಸೆ ಜೊತೆಯೂ ಈ ದಾಲ್ ಸಾಂಬಾರ್ ಅನ್ನು ಸವಿಯಬಹುದು.



Click it and Unblock the Notifications