Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬೇಳೆ ಹಾಕದೆಯೇ ಟೊಮೆಟೊ ಸಾರು ಮಾಡಬಹುದು: ಅನ್ನ, ಮುದ್ದೆಗೆ ಒಳ್ಳೆಯ ಕಾಂಬಿನೇಷನ್
Recipes
oi-Reena TK
Posted By: Reena TK
ಟೊಮೆಟೊ ಸಾರು ಬೇಳೆ ಹಾಕದೆ ಕೂಡ ಗಟ್ಟಿ ಸಾರು ಸಾರು ಮಾಡಬಹುದು. ಈ ಸಾರು ಅನ್ನ, ಚಪಾತಿ, ಮುದ್ದೆ ಇವುಗಳ ಜೊತೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ, ಈ ಸಾರು ಆಡುವ ವಿಧಾನ ಸ್ವಲ್ಪ ಭಿನ್ನ, ನೀವು ಟೊಮೆಟೊ ಮೊದಲಿಗೆ ಬೇಯಿಸಿ ಮಾಡುವ ಸಾರಿದು. ಇದನ್ನು ಮಾಡುವ ವಿಧಾನ ಸರಳವಾಗಿದ್ದು ಈ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
(ಬೇಯಿಸಿ ಪೇಸ್ಟ್ ಮಾಡಲು)
ಟೊಮೆಟೊ 5-6
ಸ್ವಲ್ಪ ಹುಣಸೆಹಣ್ಣು
ಸ್ವಲ್ಪ ಬೆಳ್ಳುಳ್ಳಿ
1 ಚಮಚ ಕಾಳು ಮೆಣಸು
ಹಸಿ ಮೆಣಸು
ಸಾರು ಮಾಡಲು
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಜೀರಿಗೆ
ಬೆಳ್ಳುಳ್ಳಿ 3-4ಎಸಳು
ಕರಿಬೇವು
ರುಬ್ಬಿದ ಪೇಸ್ಟ್
ಬೇಯಿಸಿದ ನೀರು
ಸ್ವಲ್ಪ ನೀರು
ಅರಿಶಿಣ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
- ನೀವು ಪಾತ್ರೆಗೆ ಒಂದು ಕಪ್ ನೀರಿಗೆ 5-6 ಟೊಮೆಟೊ (ತೊಳೆದು ಎರಡು ಭಾಗ ಮಾಡಿ) ಹಾಕಿ
- 2-3 ಹಸಿ ಮೆಣಸು ಅದೇ ನೀರಿಗೆ ಹಾಕಿ
- ಒಂದು ನೆಲ್ಲಿಕಾಯಿ ಗಾತ್ರದಷ್ಟು ಹುಣಸೆಹಣ್ಣು ಹಾಕಿ (ಟೊಮೆಟೊ ತುಂಬಾ ಹುಳಿಯಿದ್ದರೆ ಹುಣಸೆಹಣ್ಣು ಕಡಿಮೆ ಹಾಕಿ)
- 5-6 ಎಸಳು ಬೆಳ್ಳುಳ್ಳಿ ಸೇರಿಸಿ
- 1 ಚಮಚ ಕಾಳು ಮೆಣಸು
- 1 ಚಮಚ ಜೀರಿಗೆ ಹಾಕಿ
- ಈಗ ನೀವು ಸ್ವಲ್ಪಸೇರಿಸಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ
- ಟೊಮೆಟೊ ಮೆತ್ತಗಾಗುವರೆಗೆ ಬೇಯಿಸಿ
- ಟೊಮೆಟೊ ಚೆನ್ನಾಗಿ ಬೆಂದ ಮೇಲೆ ಸ್ಟೌವ್ ಆಫ್ ಮಾಡಿ ತಣ್ಣಗಾಗಲು ಬಿಡಿ
- ನಂತರ ಬೇಯಿಸಿದ ನೀರನ್ನು ಪ್ರತ್ಯೇಕ ಪಾತ್ರೆಗೆ ಸೋಸಿ ಇಡಿ
- ಈಗ ನೀವು ಟೊಮೆಟೊಮೇಲಿರುವ ಸಿಪ್ಪೆ ತೆಗೆಯಿರಿ, ಚೆನ್ನಾಗಿ ಬೆಂದಿರುವುದರಿಂದ ಸಿಪ್ಪೆ ಸುಲಭದಲ್ಲಿ ತೆಗೆಯಬಹುದು.
- ಈಗ ಬೇಯಿಸಿ ಟೊಮೆಟೊ, ಹಸಿ ಮೆಣಸು ,ಬೆಳ್ಳುಳ್ಳಿಗೆ ನೀವು 1/4 ಕಪ್ ತೆಂಗಿನ ತುರಿ ಕೂಡ ಸೇರಿಸಿ ನುಣ್ಣನೆ ರುಬ್ಬಿಕೊಳ್ಳಿ.
- ಈಗ ನೀವು ಸಾರಿನ ಪಾತ್ರೆಗೆ ಒಂದು ಚಮಚ ಎಣ್ಣೆ ಹಾಕಿ
- ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ
- ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ 1/2 ಚಮಚ ಜೀರಿಗೆ ಹಾಕಿ, 3-4 ಎಸಳು ಬೆಳ್ಳುಳ್ಳಿ, 2 ಒಣ ಮೆಣಸು ಮುರಿದು ಹಾಕಿ, ನಂತರ ಸ್ವಲ್ಪ ಕರಿ ಬೇವು ಹಾಕಿ, ಈರುಳ್ಳಿ ಬೇಕಿದ್ದರೆ ಒಂದು ಈರುಳ್ಳಿ ಹಾಕಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ
- ನಂತರ ರುಬ್ಬಿದ ಪೇಸ್ಟ್ ಹಾಕಿ, ಬೇಯಿಸುವಾಗ ಇಟ್ಟ ನೀರು ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕುದಿಸಿದರೆ ಟೊಮೆಟೊ ಸಾರು ರೆಡಿ.
- ಇದಕ್ಕೆ ಬೇಕಿದ್ದರೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಉರಿಯಿಂದ ಇಳಿಸಿದರೆ ರುಚಿಯಾದ ಸಾರು ರೆಡಿ.
ನೀವು ಟೊಮೆಟೊ ಚಿಕ್ಕ ಟೊಮೆಟೊ ಅಥವಾ ಹುಳಿ ಟೊಮೆಟೊ, ಜಾಮೂನು ಟೊಮೆಟೊ ಬಳಸಬಹುದು, ಆದರೆ ಹಸಿ ಟೊಮೆಟೊ ಬಳಸಬೇಡಿ, ಹಣ್ಣಾದ ಟೊಮೆಟೊ ಬಳಸಿ.
Comments
[ of 5 - Users]
Story first published: Wednesday, January 29, 2025, 21:19 [IST]
Other articles published on Jan 29, 2025



Click it and Unblock the Notifications