Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಬೇಳೆ ಹಾಕದೆ ಈ ಟೊಮೆಟೊ ಸಾರು ಹೀಗೆ ಮಾಡಿ ನೋಡಿ, ಅನ್ನದ ಜೊತೆ ತುಂಬಾ ಸೂಪರ್ ಆಗಿರುತ್ತೆ
ನೀವು ಟೊಮೆಟೊ ರಸವನ್ನು ಸಿಂಪಲ್ ಆಗಿ ಮಾಡಬಹುದು, ಆದರೆ ಸಿಂಪಲ್ ಟೊಮೆಟೊ ರಸವನ್ನು ಇನ್ನೂ ಟೇಸ್ಟ್ ಆಗಿ ಮಾಡಬಹುದು. ಈ ಟೊಮೆಟೊ ರಸವನ್ನು ಸ್ವಲ್ಪ ತೆಂಗಿನ ತುರಿ ಸೇರಿಸಿ ಮಾಡುವ ರೆಸಿಪಿಯಾಗಿದೆ. ಇದನ್ನು ಮಾಡಲು ಬೇಳೆ ಹಾಕಿ ಹಾಕಬೇಕಾಗಿಲ್ಲ, ಹಾಗೆಯೇ ಮಾಡಬಹುದು, ಈ ಸಾರು ಅನ್ನದ ಜೊತೆ ತಿನ್ನಲು ತುಂಬಾ ಚೆನ್ನಾಗಿರಲಿದೆ. ಬನ್ನಿ ಈ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
2 ಚಮಚ ಕೊತ್ತಂಬರಿ ಬೀಜ
2 ಚಮಚ ತೆಂಗಿನ ತುರಿ
1 ಚಮಚ ಎಣ್ಣೆ
1/2 ಚಮಚ ಸಾಸಿವೆ
1/2 ಚಮಚ ಜೀರಿಗೆ
1/2 ಚಮಚ ಉದ್ದಿನ ಬೇಳೆ
2 ಒಣ ಮೆಣಸು
ಸ್ವಲ್ಪ ಕರಿಬೇವು
ಇಂಗು
1/2 ಚಮಚ ಅರಿಶಿಣ ಪುಡಿ
3-4 ಟೊಮೆಟೊ
4 ಕಪ್ ನೀರು
1.5 ಚಮಚ ರಸಂ ಪುಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
- ಕೊತ್ತಂಬರಿ ಬೀಜ ರೋಸ್ಟ್ ಮಾಡಿ, ನಂತರ ತಣ್ಣಗಾಗಲು ಒಂದು ತಟ್ಟೆಯಲ್ಲಿ ಇಡಿ.
- ಅದೇ ಸಮಯದಲ್ಲಿ 4 ಕಪ್ ನೀರನ್ನು ಹಾಕಿ ಕುದಿಸಿ
- ಕೊತ್ತಂಬರಿ ಬೀಜ, ಸ್ವಲ್ಪ ತೆಂಗಿನ ತುರಿ ಹಾಕಿ ಗ್ರೈಂಡ್ ಮಾಡಿ.
- ಪಾತ್ರೆ ಬಿಸಿ ಮಾಡಿ 1 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಜೀರಿಗೆ ಹಾಕ, ನಂತರ ಸ್ವಲ್ಪ ಉದ್ದಿನ ಬೇಳೆ ಹಾಕಿ, ಒಣ ಮೆಣಸು , ಹಸಿ ಮೆಣಸು ಹಾಕಿ ಫ್ರೈ ಮಾಡಿ
- ನಂತರ ಸ್ವಲ್ಪ ಇಂಗು ಹಾಕಿ, ಕರಿಬೇವು ಹಾಕಿ, ನಂತರ ಕತ್ತರಿಸಿದ ಟೊಮೆಟೊ ಹಾಕಿ, ಬಳಿಕ ಅರಿಶಿಣ ಪುಡಿ ಹಾಕಿ
- ಟೊಮೆಟೊ ಮೆತ್ತಗಾಗುವವರೆಗೆ ಪೇಸ್ಟ್ ಮಾಡಿ
- ಈಗ ಬಿಸಿ ನೀರನ್ನು ಹಾಕಿ, ನಂತರ ರಸಂ ಪುಡಿ, ಬೆಲ್ಲದ ಪುಡಿ, ಉಪ್ಪು, ಸ್ವಲ್ಪ ರಸಂ ಪುಡಿ, ಉಪ್ಪು ಸೇರಿಸಿ.
- ನಂತರ ರಸವನ್ನು ಕುದಿಸಿ.
- ಬಳಿಕ ರುಬ್ಬಿದ ತೆಂಗಿನ ತುರಿ ಮತ್ತು ಕೊತ್ತಂಬರಿ ಬೀಜ ರುಬ್ಬಿದ ಪೇಸ್ಟ್ ಹಾಕಿ
ನಂತರ ಟೊಮೆಟೊ ರಸಂ ಕುದಿ ಬಂದ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ ನಂತರ ಈ ರಸಂ ಟೇಸ್ಟ್ ಮಾಡಿ ನೋಡಿ ವಾವ್! ಎಂದು ಹೇಳುವಿರಿ.
ಸಲಹೆ: ಈ ಟೊಮೆಟೊ ಸಾರಿಗೆ ನೀವು ಹುಳಿ ಟೊಮೆಟೊ ಬದಲಿಗೆ ಜಾಮೂನು ಟೊಮೆಟೊ ಬಳಸಿ, ಆದರೆ ಹಣ್ಣಾದ ಟೊಮೆಟೊ ಬಳಸಿ, ಹುಳಿ ಟೊಮೆಟೊತೆಂಗಿನ ಕಾಯಿ ಹಾಕಿ ಮಾಡುವುದರಿಂದ ಹುಳಿ ಹುಳಿ ಅನಿಸುತ್ತೆ. ಜಾಮೂನು ಟೊಮೆಟೊ ಹಾಕಿ ಮಾಡಿದರೆ ಹುಳಿ ರುಚಿ ಹದವಾಗಿರುತ್ತದೆ.
ಇನ್ನು ಈ ಸಾರಿಗೆ ಹುಣಸೆ ಹಣ್ಣು ಹಾಕಬೇಡಿ.
ಇತರ ಸಲಹೆ: ನೀವು ಕೊತ್ತಂಬರಿ ಪುಡಿ ಬಳಸಬಹುದೇ ಎಂದು ಕೇಳಬಹುದು, ಆದರೆ ಕೊತ್ತಂಬರಿ ಬೀಜ ಹುರಿದು ನಂತರ ಗ್ರೈಂಡ್ ಮಾಡಿ ಸೇರಿಸಿದರೆ ಆ ಸಾರಿನ ಸ್ವಾದವೇ ಬೇರೆಯಾಗಿರುತ್ತದೆ.
ಕಲರ್ಗೆ ಬೇಕಾದರೆ ಕಾಶ್ಮೀರಿ ಮೆಣಸಿನ ಪುಡಿ ಸೇರಿಸಬಹುದು.



Click it and Unblock the Notifications
