Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
20 ನಿಮಿಷದಲ್ಲಿ ಮಾಡಿ ಟೊಮೆಟೋ ಬಿರಿಯಾನಿ: ಮಾಡೋದು ಹೇಗೆ ಗೊತ್ತಾ?
ಬಿರಿಯಾನಿ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರಲಿದೆ. ಬಿರಿಯಾನಿಗಳಲ್ಲಿ ಹಲವು ರೀತಿಗಳಿವೆ, ವೆಜ್ನಲ್ಲಿ ನಾನ್ವೆಜ್ನಲ್ಲಿ ಹಲವು ರೀತಿಯ ಖಾದ್ಯಗಳ ಮಾಡಬಹುದು. ಹಾಗೆ ಈ ರೀತಿಯ ಬಿರಿಯಾನಿಗಳನ್ನು ಹೋಟೆಲ್, ರೆಸ್ಟೋರೆಂಟ್ನಲ್ಲಿ ಮಾತ್ರವಲ್ಲ ಮನೆಯಲ್ಲಿಯೂ ನಾವು ಮಾಡಿ ಸವಿಯುತ್ತೇವೆ. ವೆಜ್ ಬಿರಿಯಾನಿಯಲ್ಲಿ ಹಲವು ರೀತಿಯ ರುಚಿಯಲ್ಲಿ ನಾವು ಮಾಡಿ ಸವಿಯಬಹುದು.
ವೆಜ್ ಬಿರಿಯಾನಿಗಳಲ್ಲಿ ನಾವಿಂದು ಟೊಮೆಟೋ ಬಿರಿಯಾನಿ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಟೊಮೆಟೋ ಬಾತ್ ರುಚಿ ನೋಡಿರುವ ಮಂದಿ ಈ ಟೊಮೆಟೋ ಬಿರಿಯಾನಿ ಸವಿಯಲು ಬಹಳ ಇಷ್ಟಪಡುತ್ತಾರೆ. ಮಸಾಲೆ ಭರಿತ ಈ ಟೊಮೆಟೋ ಬಿರಿಯಾನಿ ಮಾಡಿದ್ರೆ ಮನೆ ಮಂದಿಗೆಲ್ಲಾ ಸವಿಯುತ್ತಾರೆ.

ಹಾಗಾದ್ರೆ ನಾವಿಂದು ಸುಲಭವಾಗಿ ರುಚಿ ರುಚಿಯ ಟೊಮೆಟೋ ಬಿರಿಯಾನಿ ಮಾಡಿ ಸವಿಯುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ಬಿರಿಯಾನಿ ಮಾಡಲು ಬೇಕಾಗುವ ಪದಾರ್ಥಗಳು ಬೇಕು?
- ಟೊಮೆಟೋ
- ಈರುಳ್ಳಿ
- ಅಕ್ಕಿ
- ಬೆಳ್ಳುಳ್ಳಿ - 1
- ಶುಂಠಿ - 1 ಇಂಚು
- ಕೊತ್ತಂಬರಿ ಸೊಪ್ಪು
- ಪುದೀನ ಸೊಪ್ಪು
- ಹಸಿ ಮೆಣಸಿನಕಾಯಿ
- ಕರಿಬೇವು
- ಲವಂಗ
- ಏಲಕ್ಕಿ
- ದಾಲ್ಚಿನ್ನಿ
- ಚಕ್ರಮೊಗ್ಗು
- ಜೀರಿಗೆ- 1/4 ಟೀಸ್ಪೂನ್
- ಅರಿಶಿನ ಪುಡಿ
- ಒಣ ಮೆಣಸು
- ಖಾರದ ಪುಡಿ
- ಬಿರಿಯಾನಿ ಪುಡಿ
- ಮೊಸರು
- ಕಸುರಿ ಮೇಥಿ
- ಅಡುಗೆ ಎಣ್ಣೆ
- ಉಪ್ಪು
ಟೊಮೆಟೋ ಬಿರಿಯಾನಿ ಮಾಡುವುದು ಹೇಗೆ?
ಮೊದಲು ಒಂದು ಮಿಕ್ಸಿ ಜಾರ್ನಲ್ಲಿ ಮಸಾಲೆ ರೆಡಿ ಮಾಡಿಕೊಳ್ಳಿ. ಇದಕ್ಕಾಗಿ ಒಂದು ಟೊಮೆಟೋ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹಸಿ ಮೆಣಸು, ಕೊತ್ತಂಬರಿ, ಪುದಿನ ಹಾಕಿಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಈ ಪೇಸ್ಟ್ ಅನ್ನು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಬಾಣಲೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಪಲಾವ ಎಲೆ, ಏಲಕ್ಕಿ, ಲವಗ, ಚಕ್ರಮೊಗ್ಗು, ಚಕ್ಕೆ, ಜೀರಿಗೆ, ಕಸೂರಿ ಮೇತಿ, ಶಾಹಿ ಜೀರಾ ಕೂಡ ಹಾಕಿ ಬಿಸಿ ಮಾಡಿ. ಈಗ ಸ್ಲೈಸ್ ಮಾಡಿದ ಒಂದು ಈರುಳ್ಳಿ ಕೂಡ ಹಾಕಿಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡಿದ್ದ ಮಸಾಲೆಯನ್ನು ಸಹ ಹಾಕಿಕೊಳ್ಳಬೇಕು. ನಂತರ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಳ್ಳಿ. ಹಾಗೆ ಈಗ 2 ನಿಮಿಷ ಬೇಯಿಸಿದ ಬಳಿಕ ಇದಕ್ಕೆ ಅರಶಿಣ, ಖಾರದ ಪುಡಿ, ಬಿರಿಯಾನಿ ಪುಡಿ, ಕಾಲು ಕಪ್ ಮೊಸರು ಹಾಕಿಕೊಂಡು ಹಾಕಿ, ಬಳಿಕ ದೊಡ್ಡದಾಗಿ ಹೆಚ್ಚಿಕೊಂಡಿರುವ 2 ಟೊಮೆಟೋವನ್ನು ಕೂಡ ಇದಕ್ಕೆ ಹಾಕಿಕೊಳ್ಳಿ. ಚೆನ್ನಾಗಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಅಳತೆ ಗ್ಲಾಸ್ನಲ್ಲಿ ಅಕ್ಕಿ ಅಳತೆಗೆ ಎರಡರಷ್ಟು ನೀರು ಹಾಕಿಕೊಳ್ಳಿ.
ಈಗ ಮುಚ್ಚಳ ಮುಚ್ಚಿ 5 ನಿಮಿಷ ಕುದಿಯಲು ಬಿಡಿ. ಈ ಸಮಯದಲ್ಲಿ ಅಕ್ಕಿಯನ್ನು ತೊಳೆದು ನೆನೆಸಿಟ್ಟುಕೊಳ್ಳಿ. ಈಗ 5 ನಿಮಿಷದ ಬಳಿಕ ಅಕ್ಕಿಯನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ ಮತ್ತೆ ಮುಚ್ಚಳ ಮುಚ್ಚಿ 5 ನಿಮಿಷ ಬಿಡಿ. ಬಳಿಕ ನೀರು ಡ್ರೈ ಆಗುತ್ತಿದೆ ಎನ್ನುವಾಗ ಉರಿ ಸಣ್ಣಗೆ ಮಾಡಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 15 ನಿಮಿಷ ಬಿಡಿ.
ನಂತರ ಮುಚ್ಚಳ ತೆರೆದು ರೈಸ್ ರೆಡಿಯಾಗಿದೆಯೇ ನೋಡಿಕೊಂಡು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಈ ಟೊಮೆಟೋ ಬಿರಿಯಾನಿ ರೆಡಿಯಾಗುತ್ತದೆ.



Click it and Unblock the Notifications
