Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನವಣೆ-ಟೊಮೆಟೋ ದೋಸೆ ಒಮ್ಮೆ ಮಾಡಿದ್ರೆ ನಿತ್ಯ ಇದೇ ಬೇಕು ಅನ್ನೋದು ಖಚಿತ!
ನೀವು ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುವುದು ಸಾಮಾನ್ಯ. ಅದ್ರಲ್ಲೂ ಹಲವು ರೀತಿಯ ಖಾದ್ಯಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತೆ. ನಿತ್ಯ ಒಂದೇ ರೀತಿಯ ತಿಂಡಿಗಳ ಮಾಡಿ ಸವಿಯುವುದು ಎಲ್ಲರಿಗೂ ಬೇಸರ ತರಿಸಲಿದೆ. ಆದ್ರೆ ನೀವು ವಿಶೇಷ ರುಚಿ ಖಾದ್ಯಗಳ ಮಾಡಿ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಅವರಿಗಾಗಿ ವಿಶೇಷ ರುಚಿಯ ಖಾದ್ಯಗಳ ಮಾಡಿ ನೀಡೋದು ಅಂದ್ರೆ ನಿಮಗೂ ಇಷ್ಟವಾಗಬಹುದು.
ಇಂತಹ ವಿಶೇಷ ಖಾದ್ಯಗಳಲ್ಲಿ ನಾವಿಂದು ಟೊಮೆಟೋ ಹಾಗೂ ನವಣೆಯನ್ನು ಬಳಸಿ ಮಾಡುವಂತಹ ರುಚಿ ರುಚಿಯ ದೋಸೆ ಕುರಿತಾಗಿ ತಿಳಿದುಕೊಳ್ಳೋಣ. ನೀವು ಬೆಳಗ್ಗೆ ತಿಂಡಿಗೆ ಉದ್ದಿನ ದೋಸೆ, ನೀರು ದೋಸೆ, ರವೆ ದೋಸೆ ಸೇರಿದಂತೆ ವಿವಿಧ ಹಿಟ್ಟುಗಳ ಬಳಸಿ ದೋಸೆ ಮಾಡಿರುತ್ತೀರಿ. ಆದ್ರೆ ಈ ಟೊಮೆಟೋ ಹಾಗೂ ನವಣೆ ಬಳಸಿ ಮಾಡುವ ಈ ದೋಸೆ ಎಂದಾದ್ರು ಸವಿದಿದ್ದೀರಾ?

ಟೊಮೆಟೋ ಹಾಗೂ ನವಣೆಯನ್ನು ಬಳಸಿ ಮಾಡುವ ಈ ದೋಸೆ ರುಚಿ ದುಪ್ಟಟ್ಟಾಗಿರಲಿದೆ. ಹಾಗೆ ಎಲ್ಲರು ಇಷ್ಟಪಟ್ಟು ಸವಿಯೋದು ಖಚಿತ. ಹಾಗಾದ್ರೆ ಸಾಮಾನ್ಯ ದೋಸೆ ಅಲ್ಲದೆ ಈ ರೀತಿ ಟೊಮೆಟೋ ಬಳಸಿ ಮಾಡುವ ದೋಸೆ ಬಹಳ ರುಚಿ ನೀಡಲಿದೆ. ಹಾಗಾದ್ರೆ ಮನೆಯಲ್ಲೇ ಈ ರೀತಿ ದೋಸೆ ಮಾಡಿ ಸವಿಯುವ ಕುರಿತಾಗಿ ನಾವಿಲ್ಲಿ ತಿಳಿಯೋಣ.
ನವಣೆ, ಟೊಮೆಟೋ ದೋಸೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ನವಣೆ, ಟೊಮೆಟೋ ದೋಸೆಗೆ ಬೇಕಾಗುವ ವಸ್ತುಗಳು
ಟೊಮೆಟೋ
ನವಣೆ
ಉಪ್ಪು
ಎಣ್ಣೆ
ಇಂಗು
ಉದ್ದಿನ ಬೇಳೆ
ಒಣ ಮೆಣಸು
ನವಣೆ, ಟೊಮೆಟೋ ದೋಸೆ ಮಾಡುವುದು ಹೇಗೆ?
ಮೊದಲು ಒಂದು ಕಪ್ ಅಳತೆಯ ನವಣೆಯನ್ನು ನೆನೆಸಿಡಬೇಕು. ಹಾಗೆ ಕಾಲು ಕಪ್ ಉದ್ದಿನ ಬೇಳೆ ಸಹ ತೊಳೆದು ನೆನೆಸಿಡಬೇಕು. ಈ ಎರಡು ವಸ್ತುವನ್ನು ಒಟ್ಟಿಗೆ ನೆನೆಸಿಡಬಹುದು. ಇದನ್ನು 3ರಿಂದ 4 ಗಂಟೆ ಸಮಯ ನೆನೆಸಿಡಬೇಕು. ಈಗ ಟೊಮೆಟೋ ಹಣ್ಣುಗಳನ್ನು ಕತ್ತರಿಸಿಕೊಂಡು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನೆನೆಸಿದ ನವಣೆ ಉದ್ದಿನ ಬೇಳೆ ಕೂಡ ಹಾಕಿಕೊಂಡು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ಇದಕ್ಕೆ ಬ್ಯಾಡಗಿ ಮೆಣಸು ಕೂಡ ಹಾಕಿ ರುಬ್ಬಿಕೊಳ್ಳಬೇಕು. ಹಾಗೆ ಜೀರಿಗೆ ಸಹ ಹಾಕಿಕೊಂಡು ನುಣ್ಣಗೆ ರುಬ್ಬಿ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಹಾಗೆ ಇದಕ್ಕೆ ಇಂಗು, ಪುಡಿ ಉಪ್ಪು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಗಟ್ಟಿಯಾದರೆ ನೀರು ಹಾಕಿಕೊಳ್ಳಿ. ಈಗ ಹಿಟ್ಟು ಹದ ಮಾಡಿದ ಬಳಿಕ ಒಲೆ ಮೇಲೆ ಒಂದು ಕಾವಲಿ ಇಟ್ಟುಕೊಂಡು ಬಿಸಿ ಮಾಡಿಕೊಳ್ಳಿ.
ಬಿಸಿಯಾದ ಕಾವಲಿಗೆ ಎಣ್ಣೆ ಬದಲಿಗೆ ನೀರು ಹಾಕಿ ಒಮ್ಮೆ ಒರೆಸಿಕೊಳ್ಳಿ. ಅನಂತರ ಹಿಟ್ಟನ್ನು ಮಧ್ಯದಲ್ಲಿ ಹಾಕಿ ಆದಷ್ಟು ತೆಳುವಾಗಿ ಮಾಡಿ. ದಪ್ಪವೂ ಮಾಡಿಕೊಳ್ಳಬಹುದು. ಹಾಗೆ ಇದನ್ನು ಎರಡೂ ಕಡೆ ರೋಸ್ಟ್ ಮಾಡಿಕೊಳ್ಳಬಹುದು. ಈ ದೋಸೆಯೊಂದಿಗೆ ಯಾವುದಾದರು ಚಟ್ನಿ ಇದ್ದರೆ ರುಚಿ ದುಪ್ಪಟ್ಟಾಗೋದು ಖಚಿತ. ನೀವು ಕೂಡ ಮನೆಯಲ್ಲಿ ಈ ದೋಸೆ ಹಾಗೂ ಚಟ್ನಿ ಮಾಡಿ ಸವಿದು ನೋಡಿ.



Click it and Unblock the Notifications
