Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಚಪಾತಿ, ದೋಸೆಗೆ ಟೊಮೆಟೋ ಆಲೂ ಕರಿ ಮಾಡಿ..! ಈ ರುಚಿ ಟೇಸ್ಟ್ ಮಾಡಿ!
ಚಪಾತಿ, ಊಟ, ತಿಂಡಿಗೆ ಒಂದು ಅದ್ಭುತ ರುಚಿಯ ಯಾವುದಾದ್ರು ಸೈಡ್ಸ್ ಅಥವಾ ಒಂದು ಗ್ರೇವಿ, ಕರಿ ಇದ್ದರೆ ಬೊಂಬಾಟ್ ರುಚಿ ನೀಡಲಿದೆ. ಹೀಗಾಗಿ ನಾವೂ ಊಟ ತಿಂಡಿಯಲ್ಲಿ ಯಾವುದಾದರು ವಿಶೇಷ ಖಾದ್ಯ ಇದ್ದರೆ ಚೆನ್ನಾಗಿ ಊಟ ತಿಂಡಿ ಮಾಡುತ್ತೇವೆ. ಹಾಗೆ ನಾವು ಚಪಾತಿಗೆ ಒಳ್ಳೆಯ ಕಾಂಬಿನೇಷನ್ ಎಂದು ಹಲವು ರೀತಿಯ ಖಾದ್ಯ ಮಾಡುತ್ತೇವೆ.
ದೋಸೆ, ಚಪಾತಿಗೆ ನಾವು ಆಲೂಗಡ್ಡೆಯ ಪಲ್ಯ, ಹಾಗೆ ಟೊಮೆಟೋ ಕರಿಗಳ ಮಾಡುವುದು ನೋಡಿದ್ದೇವೆ. ಆದ್ರೆ ಈಗ ನಾವಿಂದು ಟೊಮೆಟೋ ಆಲೂಗಡ್ಡೆ ಹಾಕಿ ಮಾಡುವಂತಹ ರುಚಿ ರುಚಿಯ ಕರಿ ಮಾಡುವುದನ್ನು ತಿಳಿದುಕೊಳ್ಳೋಣ. ಚಪಾತಿಗೆ, ದೋಸೆಗೆ, ಇಡ್ಲಿಗೆ, ಅನ್ನಕ್ಕೆ ಹೀಗೆ ಎಲ್ಲಾ ಖಾದ್ಯಕ್ಕೂ ಇದು ಬೊಂಬಾಟ್ ರುಚಿ ನೀಡಲಿದೆ.

ನೀವು ಕೂಡ ಬೆಳಗ್ಗೆ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಚಪಾತಿ ಮಾಡಿದ್ದರೆ ಅದಕ್ಕೆ ಈ ಟೊಮೆಟೋ ಆಲೂಗಡ್ಡೆಯ ಕರಿ ಮಾಡಿ ನೋಡಿ. ಈ ರುಚಿ ಒಮ್ಮೆ ನೀವು ಸವಿದರೆ ಮತ್ತೆ ಯಾವಾಗಲು ಇದೇ ಖಾದ್ಯ ಸವಿಯಲು ಮುಂದಾಗುತ್ತೀರಿ. ಹಾಗಾದ್ರೆ ಈ ಆಲೂಗಡ್ಡೆ, ಟೊಮೆಟೋ ಕರಿ ಮಾಡುವುದು ಹೇಗೆ? ಈ ಕರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟಯ ಸಮಯ ಬೇಕಾಗುತ್ತದೆ? ಮಾಡುವ ವಿಧಾನ ಯಾವ ಎಂಬ ಪ್ರಶ್ನೆಗೆ ಉತ್ತರ ಇಲ್ಲಿ ನೀಡಲಾಗಿದೆ.
ಆಲೂ ಟೊಮೆಟೋ ಕರಿ ಮಾಡಲು ಬೇಕಾಗುವ ಪದಾರ್ಥಗಳು ಯಾವುದು?
- ಆಲೂಗಡ್ಡೆ - 3
- ಟೊಮೆಟೋ -2
- ಶುಂಠಿ
- ಪಲಾವ್ ಎಲೆ
- ಅರಶಿಣ
- ಏಲಕ್ಕಿ
- ಕರಿಬೇವು
- ಧನಿಯಾ
- ಖಾರದ ಪುಡಿ
- ಗರಂ ಮಸಾಲೆ
- ಉಪ್ಪು
- ಎಣ್ಣೆ
ಆಲೂ ಟೊಮೆಟೋ ಕರಿ ಮಾಡುವ ವಿಧಾನ ಹೇಗೆ?
ಮೊದಲು ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ 2 ಸ್ಪೂನ್ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಪಲಾವ್ ಎಲೆ, ಚಕ್ಕೆ ಹಾಕಬೇಕು. ನಂತರ ಏಲಕ್ಕಿ, ಕರಿಬೇವು, ಸಣ್ಣದಾಗಿ ಕತ್ತರಿಸಿದ 2 ಈರುಳ್ಳಿಯನ್ನು ಹಾಕಿ ಇದಕ್ಕೆ ಶುಂಠಿ, ಅಥವಾ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿಣ, ಟೊಮೆಟೋ ಹಾಕಿಕೊಂಡು 3 ನಿಮಿಷ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿ. ಇದಕ್ಕೆ ಉಪ್ಪು ಹಾಕಿದರೆ ಬೇಗನೆ ಟೊಮೆಟೋ ಫ್ರೈ ಆಗುತ್ತದೆ. ಟೊಮೆಟೋ ಮೆತ್ತಗಾದ ಬಳಿಕ ಸ್ವಲ್ಪ ನೀರು ಹಾಕಿಕೊಳ್ಳಿ. ಒಂದು ಮೀಡಿಯಂ ಗ್ಲಾಸ್ನಲ್ಲಿ ಒಂದು ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ ಕುದಿಯಲು ಬಿಡಬೇಕು. ಸುಮಾರು 3 ನಿಮಿಷ ಕುದಿಬಂದರೆ ಸಾಕಾಗುತ್ತದೆ.
ಈಗ ಮೂರು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದಿಟ್ಟುಕೊಂಡು ಪುಡಿ ಮಾಡಿಕೊಳ್ಳಿ. ಪುಡಿಯಾದ ಈ ಆಲೂಗಡ್ಡೆಯನ್ನು ಒಲೆ ಮೇಲಿರುವ ಒಂದು ಪಾತ್ರೆಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಕುದಿಯಲು ಬಿಡಿ. ಮುಚ್ಚಳ ಮುಚ್ಚಿ 3 ನಿಮಿಷ ಬೇಯಲು ಬಿಟ್ಟರೆ ಸಾಕಾಗುತ್ತದೆ. ಆಲೂಗಡ್ಡೆ ಮೊದಲೇ ಬೇಯಿಸಿರುವುದರಿಂದ ಹೆಚ್ಚು ಹೊತ್ತು ಬೇಯಿಸಿರುವುದು ಬೇಡ. ಹಾಗೆ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿ ಇಳಿಸಿಕೊಳ್ಳಿ. ಇಷ್ಟಾದರೆ ನೀವು ರುಚಿ ರುಚಿಯ ಈ ಟೊಮೆಟೋ ಆಲೂಗಡ್ಡೆ ಕರಿಯನ್ನು ಸವಿಯಬಹುದು. ನೀವು ಕೂಡ ಒಮ್ಮೆ ಈ ರೀತಿಯ ಕರಿಯನ್ನು ಸವಿದು ನೋಡಿ.



Click it and Unblock the Notifications