Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮದುವೆ ಮನೆಯ ರುಚಿ ರುಚಿಯ ತೊಂಡೆಕಾಯಿ ಸುಕ್ಕ ಮನೆಯಲ್ಲೇ ಮಾಡಿ! ಇಲ್ಲಿದೆ ಸುಲಭದ ರೆಸಿಪಿ
ನೀವು ನಿತ್ಯ ಮಧ್ಯಾಹ್ನದ ಊಟದ ಸಮಯದಲ್ಲಿ ರುಚಿ ರುಚಿಯಾದ ಪಲ್ಯ ಮಾಡಿ ಸವಿಯೋದಕ್ಕೆ ಇಷ್ಟಪಡುತ್ತೀರಿ. ಊಟದೊಂದಿಗೆ ಈ ರೀತಿ ಯಾವುದಾದರು ಸೈಡ್ಸ್ ಇದ್ದರೆ ರುಚಿ ದುಪ್ಪಟ್ಟಾಗುತ್ತೆ. ಅದ್ರಲ್ಲೂ ತೊಂಡೆಕಾಯಿಯಿಂದ ಮಾಡುವಂತಹ ರುಚಿ ರುಚಿಯ ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ. ತೊಂಡೆಕಾಯಿ ಸಾಂಬಾರ್, ತೊಂಡೆಕಾಯಿ ರೋಸ್ಟ್, ತೊಂಡೆಕಾಯಿ ಪಲ್ಯ ಅಂದ್ರೆ ಬಾಯಲ್ಲಿ ನೀರು ಬರುತ್ತೆ.
ತೊಂಡೆಕಾಯಿ ಬಳಸಿ ಮಾಡುವ ಪಲ್ಯದಲ್ಲಿ ಹಲವು ಬಗೆಗಳಿವೆ. ಸಾಮಾನ್ಯವಾಗಿ ತೊಂಡೆಕಾಯಿ ಹುರಿದು ಕಾಯಿ ಹಾಕಿ ಮಾಡುವ ಪಲ್ಯ ರುಚಿ ರುಚಿಯಾಗಿರಲಿದೆ. ಹಾಗೆ ನಾವಿಂದು ರುಚಿಯಾಗಿ ಮದುವೆ ಮನೆಯಲ್ಲಿ ಕಾಳು ಸೇರಿಸಿ ಮಾಡುವ ಪಲ್ಯ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಖಚಿತ. ಕಾಬೂಲ್ ಕಡ್ಲೆ ಅಥವಾ ಚನ್ನಾ ಬಳಸಿ ಮಾಡುವ ಈ ರುಚಿಕರ ಪಲ್ಯ ಅಂದ್ರೆ ಎಲ್ಲರು ಇಷ್ಟಪಡುತ್ತಾರೆ.

ಆದ್ರೆ ಮದುವೆ ಮನೆಯಲ್ಲಿ ರುಚಿ ರುಚಿಯಲ್ಲಿ ನೀಡುವ ಕಾಳು ಪಲ್ಯ ಮನೆಯಲ್ಲಿಯೇ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಹಾಗಾದ್ರೆ ಮದುವೆ ಮನೆಯಲ್ಲಿ ಮಾಡಿ ಸವಿಯುವ ಈ ಪಲ್ಯವನ್ನು ಮನೆಯಲ್ಲೇ ಮಾಡಿ ಸವಿಯುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಅದ್ರಲ್ಲೂ ಎಲ್ಲರು ಊಟದ ಸಮಯದಲ್ಲಿ ಸವಿಯಲು ಈ ರುಚಿಯ ಪಲ್ಯವನ್ನು ಮಾಡಿ ನೋಡಿ.
ಮದುವೆ ಮನೆ ರುಚಿಯ ತೊಂಡೆಕಾಯಿ ಪಲ್ಯ ಮಾಡುವುದು ಹೇಗೆ? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮದುವೆ ಮನೆ ರುಚಿಯ ತೊಂಡೆಕಾಯಿ ಪಲ್ಯ ಅಥವಾ ಸುಕ್ಕ ಮಾಡಲು ಬೇಕಾಗುವ ವಸ್ತುಗಳು
- ತೊಂಡೆಕಾಯಿ
- ಚನ್ನಾ ಕಾಳು
- ತೆಂಗಿನಕಾಯಿ ತುರಿ
- ಖಾರದ ಪುಡಿ
- ಅರಶಿಣ
- ಉಪ್ಪು
- ಕರಿಬೇವು
- ಎಣ್ಣೆ
- ಸಾಸಿವೆ
- ಜೀರಿಗೆ
- ಬೆಳ್ಳುಳ್ಳಿ
- ಈರುಳ್ಳಿ
ಮದುವೆ ಮನೆ ರುಚಿಯ ತೊಂಡೆಕಾಯಿ ಪಲ್ಯ ಮಾಡುವ ವಿಧಾನವೇನು?
ಮೊದಲಿಗೆ ತೊಂಡೆಕಾಯಿಯನ್ನು ತೊಳೆದುಕೊಂಡು ಉದ್ದವಾಗಿ ಕತ್ತರಿಸಿಕೊಳ್ಳಿ. ಈ ತೊಂಡೆಕಾಯಿಯನ್ನು ಒಂದು ಪಾತ್ರೆಗೆ ಹಾಕಿ ನೀರು ಹಾಗೂ ಉಪ್ಪು ಹಾಕಿ ಬೇಯಲು ಬಿಡಿ. ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. ಹಾಗೆ ಇನ್ನೊಂದು ಕಡೆ ಪಾತ್ರೆಗೆ ಕಡಲೆಯನ್ನು ಸಹ ಹಾಕಿ ಬೇಯಿಸಬೇಕು. ಇದನ್ನು ಕುಕ್ಕರ್‌ನಲ್ಲಿ ಉಪ್ಪು ಹಾಕಿ 3 ಸೀಟಿ ಹೊಡೆಸಿಕೊಂಡರು ಆಗುತ್ತದೆ.
ಈಗ ಮತ್ತೊಂದು ಬಾಣಲೆಯಲ್ಲಿ ಒಣ ಮೆಣಸು ಫ್ರೈ ಮಾಡಿ. ಇದಕ್ಕೆ ಕೊತ್ತಂಬರಿ ಕಾಳು, ಜೀರಿಗೆ, ಸಾಸಿವೆ ಸೇರಿಸಿ ಬಿಸಿ ಮಾಡಿ. ಕೊನೆಯಲ್ಲಿ ಮೆಂತ್ಯ ಕಾಳುಗಳ ಹಾಕಿ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ಅನಂತರ ಈ ಎಲ್ಲಾ ಪದಾರ್ಥಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿ ಪುಡಿ ಮಾಡಿಕೊಳ್ಳಿ. ಅನಂತರ ಚಿಟಿಕೆ ಅರಶಿಣ, ತುರಿದ ತೆಂಗಿನಕಾಯಿಯನ್ನು ಸಹ ರುಬ್ಬಿದ ಈ ಪುಡಿಯೊಂದಿಗೆ ಮತ್ತೆ 2 ಸುತ್ತು ರುಬ್ಬಿಕೊಳ್ಳಿ.
ತರಿತರಿಯಾದ ಈ ಮಸಾಲೆಯನ್ನು ತೆಗೆದು ಇಟ್ಟುಕೊಳ್ಳಿ. ಈಗ ಬೆಂದಿರುವ ತೊಂಡೆಕಾಯಿ ಹಾಗೂ ಕಡಲೆಯನ್ನು ಒಂದು ಕಡೆ ಇಟ್ಟಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಅನಂತರ ಇದಕ್ಕೆ ಸಾಸಿವೆ, ಉದ್ದಿನ ಬೇಳೆ, ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ಈಗ ಇದಕ್ಕೆ ರುಬ್ಬಿಕೊಂಡಿದ್ದ ಮಸಾಲೆಗಳನ್ನ ಹಾಕಿ ಫ್ರೈ ಆಗಲು ಬಿಡಿ. ಚೆನ್ನಾಗಿ ಕರಿಯಬೇಕು.
ಈಗ ಇದಕ್ಕೆ ಬೇಯಿಸಿಕೊಂಡಿದ್ದ ತೊಂಡೆಕಾಯಿ ಹಾಗೂ ಕಡಲೆಯನ್ನು ಸಹ ಇದಕ್ಕೆ ಹಾಕಿಕೊಂಡು ಮಿಶ್ರಣ ಮಾಡಿ. ಡ್ರೈ ಆಗಿದ್ದರೆ ಅಥವಾ ತಳ ಹಿಡಿಯದಂತೆ ಮಾಡಲು ಚೂರು ನೀರು ಹಾಕಿ. ಚೆನ್ನಾಗಿ ಮಿಕ್ಸ್ ಮಾಡುತ್ತಾ ಬೇಯಲು ಬಿಡಿ. ಹಾಗೆ ರುಚಿ ನೋಡಿ ಉಪ್ಪು ಬೇಕಿದ್ದರೆ ಹಾಕಿಕೊಳ್ಳಿ.



Click it and Unblock the Notifications
