Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಲಸಿನ ಹಣ್ಣಿನ ಈ ಹೋಳಿಗೆ ಮಾಡಿ ನೋಡಿ..! ಬಾಯಲ್ಲಿ ನೀರು ತರಿಸುವ ಖಾದ್ಯ!
ಹಲಸಿನ ಹಣ್ಣಿನ ಸೀಸನ್ ಆರಂಭಗೊಂಡಿದೆ. ನೀವು ಯಾವುದೇ ಹಣ್ಣಿನ ಮಾರುಕಟ್ಟೆಗೆ ತೆರಳಿದ್ರೂ ಅಲ್ಲಿ ಹಲಸಿ ಹಣ್ಣಿನ ಸುವಾಸನೆ ನಿಮ್ಮ ಮೂಗಿಗೆ ಬಡಿಯಲಿದೆ. ಹಾಗೆ ಹಳ್ಳಿಗಳಲ್ಲಂತು ಮನೆ ಮನೆಯಲ್ಲೂ ಹಲಸಿನ ಮರ ನೋಡಬಹುದು ಒಂದೊಂದು ಮರದಲ್ಲೂ ಹತ್ತಾರು ಹಣ್ಣುಗಳಿರಲಿವೆ, ಹಾಗೆ ಈ ಹಣ್ಣಗಳನ್ನು ಸವಿಯುವ ಜೊತೆಗೆ ಅದರಿಂದ ಮಾಡುವ ಖಾದ್ಯಗಳು ಸಹ ಅದ್ಭುತ. ಎಲ್ಲರ ಬಾಯಲ್ಲೂ ನೀರು ತರಿಸುವಂತಹದ್ದಾಗಿರಲಿದೆ.
ಅದರಲ್ಲೂ ಹಲಸಿನ ದೋಸೆ, ಇಡ್ಲಿ, ಸೇರಿದಂತೆ ಸಿಹಿ ಸಿಹಿಯಾದ ಹಲವು ಖಾದ್ಯಗಳನ್ನು ಸವಿಯಲು ಮಾಡುತ್ತಾರೆ. ಮಕ್ಕಳಿಗಂತು ಇದು ಬಹಳ ಇಷ್ಟದ ತಿಂಡಿ. ಹಾಗೆ ಹಲಸಿನ ಹಣ್ಣಿನಿಂದ ಮಾಡುವ ಪ್ರತಿಯೊಂದು ಖಾದ್ಯವೂ ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು ಹಲಸಿನ ಹಣ್ಣಿನಿಂದ ಮಾಡುವಂತಹ ಹೋಳಿಗೆ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.

ಹೋಳಿಗೆ ಖಾದ್ಯ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಬೇಳೆ ಹೋಳಿಗೆ, ಕಾಯಿ ಹೋಳಿಗೆ ಹೀಗೆ ರುಚಿ ರುಚಿ ಹೋಳಿಗೆ ಸವಿದಿರುತ್ತೀರಿ. ನಾವಿಂದು ಮನೆಯಲ್ಲಿ ಹಲಸಿನ ಹಣ್ಣಿನಿಂದ ಮಾಡುವಂತಹ ರುಚಿ ರುಚಿಯ ಹೋಳಿಗೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಹೋಳಿಗೆ ರುಚಿ ರುಚಿಯಾಗಿ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.
ಹಲಸಿನ ಹಣ್ಣಿನ ಈ ಹೋಳಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಲಸಿನ ಹಣ್ಣಿನ ಹೋಳಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹಲಸಿನ ಹಣ್ಣು
- ಚಿರೋಟಿ ರವೆ
- ಮೈದಾ ಹಿಟ್ಟು
- ಅರಶಿಣ
- ತುಪ್ಪ
- ಬೆಲ್ಲದ ಪುಡಿ
- ಎಣ್ಣೆ
- ತೆಂಗಿನ ಕಾಯಿ ತುರಿ
ಹಲಸಿನ ಹಣ್ಣಿನ ಹೋಳಿಗೆ ಮಾಡುವುದು ಹೇಗೆ?
ಮೊದಲಿಗೆ ಅರ್ಧ ಕಪ್ ಚಿರೋಟಿ ರವೆ, ಅಷ್ಟೇ ಪ್ರಮಾಣದ ಮೈದಾ ಹಿಟ್ಟು ತೆಗೆದುಕೊಳ್ಳಬೇಕು. ಇದಕ್ಕೆ ಅರಶಿಣ ಪುಡಿ, ಹಾಗೆ ಎಣ್ಣೆ ಅಥವಾ ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಚಪಾತಿ ಹಿಟ್ಟಿನ ಹದ ಬರುವಂತೆ ನಿಧಾನವಾಗಿ ಕಲಸಿಕೊಳ್ಳಬೇಕು. ಈ ಹಿಟ್ಟು ಮೃದುವಾಗಬೇಕು, ನಂತರ ಎಣ್ಣೆ ಹಚ್ಚಿ 2 ಗಂಟೆಗಳ ಕಾಲ ಹಾಗೆಯೇ ಬಿಡಿ.
ಈಗ ಇನ್ನೊಂದು ಮೈದಾ ಹಿಟ್ಟಿನ ಅಳತೆಯಷ್ಟೇ ಬೆಲ್ಲದ ಪುಡಿ ತೆಗೆದಿಕೊಂಡು ಸ್ವಲ್ಪ ನೀರು ಹಾಕಿಕೊಂಡು ಕರಗಲು ಬಿಡಬೇಕು. ಈಗ ಇನ್ನೊಂದು ಕಡೆ ಬಾಣಲೆ ಒಲೆ ಮೇಲೆ ಇಟ್ಟು ಚಿರೋಟಿ ರವೆಯನ್ನು ಹುರಿದುಕೊಳ್ಳಬೇಕು. ಈಗ ಕರಗಿದ ಬೆಲ್ಲವನ್ನು ಜರಡಿ ಹಿಡಿದು ಇಟ್ಟುಕೊಳ್ಳಿ. ಅದನ್ನು ಒಂದು ದಪ್ಪ ಬಾಣಲೆಗೆ ಹಾಕಿ ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕುದಿಯಲು ಬಿಡಿ.

ಈಗ ತೆಂಗಿನಕಾಯಿ ತುರಿಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಸ್ವಲ್ಪ ರುಬ್ಬಿದ ಬಳಿಕ ಈ ಕಾಯಿಯನ್ನು ಕುದಿಯುತ್ತಿರುವ ಈ ಬೆಲ್ಲದ ಪಾಕಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಹಾಗೆ ಗಟ್ಟಿಯಾಗಲು ಬಿಡಿ. ಈಗ ಬಿಡಿಸಿಕೊಂಡಿರುವ ಹಲಸಿನ ಹಣ್ಣನ್ನು ಕೂಡ ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಹೀಗೆ ರುಬ್ಬಿದ ಈ ಪೇಸ್ಟ್ ಅನ್ನು ಬೆಲ್ಲ, ಕಾಯಿಯ ಪಾಕಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಹುರಿದುಕೊಂಡ ಚಿರೋಟಿ ರವೆ ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈ ಹೂರ್ಣ ಗಟ್ಟಿಯಾಗಬೇಕು ಅಲ್ಲಿಯವರೆಗೂ ಮಿಕ್ಸ್ ಮಾಡಿ, ಆಗಾಗ ತುಪ್ಪ ಸೇರಿಸಿಕೊಳ್ಳಿ. ಉಂಡೆ ಕಟ್ಟುವ ಹದಕ್ಕೆ ಈ ಹೂರ್ಣ ಬಂದಾಗ ತಣ್ಣಗಾಗಲು ಬಿಡಿ. ಈಗ ಹೋಳಿಗೆ ಕಣಕವನ್ನು ಮತ್ತೆ ಮಿಕ್ಸ್ ಮಾಡಿಕೊಂಡು ಪ್ಲಾಸ್ಟಿಕ್, ಬಾಳೆ ಎಲೆಯಾದರು ನಡೆಯಲಿದೆ. ಅದರ ಮೇಲೆ ಎಣ್ಣೆ ಹಾಕಿ ಹಿಟ್ಟು ತಟ್ಟಿಕೊಳ್ಳಿ. ಅನಂತರ ಈ ಹೂರ್ಣವನ್ನು ಮಧ್ಯದಲ್ಲಿ ಇಟ್ಟು ಹೋಳಿಗೆ ತಟ್ಟಿಕೊಂಡು ಕಾವಲಿ ಮೇಲೆ ಹಾಕಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಹಲಸಿನ ಹಣ್ಣಿನ ಹೋಳಿಗೆ ಸಿದ್ದವಾಗಲಿದೆ.



Click it and Unblock the Notifications
