Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ವಾವ್.. ಸ್ಪಂಜಿನಂತಹ ಸಾಫ್ಟ್ ದೋಸೆ! 100% ಹೋಟೆಲ್ ಸ್ಟೈಲ್.. ರುಚಿಯೂ ಸೂಪರ್
ದಕ್ಷಿಣ ಭಾರತದಲ್ಲಿ ದೋಸೆಗೆ ಮೊದಲ ಸ್ಥಾನ. ಬೆಳಗ್ಗಿನ ಟಿಫನ್ಗೂ ಸೈ, ಮಧ್ಯಹ್ನದ ಲಂಚ್ಗೂ ಸರಿ ಹೊಂದುತ್ತದೆ. ಹೌದು, ದೋಸೆ ಒಂದು ರುಚಿಕರವಾದ ಮತ್ತು ಆರೋಗ್ಯಕರ ಆಹಾರ. ನೀವು ಸಾದಾ ದೋಸೆ ಮತ್ತು ಮಸಾಲೆ ದೋಸೆಯನ್ನು ತಿಂದಿರಬೇಕು. ಆದರೆ, ನೀವು ಎಂದಾದರೂ ಈ ರೀತಿಯ ಸೆಟ್ ದೋಸೆ (Set Dosa) ರುಚಿ ನೋಡಿದ್ದೀರಾ? ಈ ದೋಸೆ ಮೃದು ಮತ್ತು ಸ್ಪಂಜಿನಂತೆ ಇರುತ್ತದೆ. ಸೆಟ್ ದೋಸೆ ಬೇಯುವಾಗ ಅದರೆ ಮೇಲೆ ಬೆಣ್ಣೆ ಹಾಕಿದರೆ ಮತ್ತಷ್ಟು ರುಚಿಯಾಗಿರುತ್ತದೆ. ಆದರೆ, ನೀವು ಸ್ಪಂಜಿನಂತಹ ಸಾಫ್ಟ್ ದೋಸೆ ಮಾಡುವಾಗ (Set Dosa Recipe) ಕೆಲವು ಟಿಪ್ಸ್ ಫಾಲೋ ಮಾಡಲೇಬೇಕು.
ಮೃದುವಾದ, ಉಬ್ಬಿದ, ಸ್ಪಂಜಿನ ಸೆಟ್ ದೋಸೆಯ ರುಚಿ ಅದ್ಭುತ. ನೀವು ಚಟ್ನಿಯೊಂದಿಗೆ ಈ ದೋಸೆಯನ್ನು ಸವಿಯಬಹುದು. ಅಕ್ಕಿ, ಉದ್ದು, ಮೆಂತ್ಯ ಮತ್ತು ಅವಲಕ್ಕಿ ಸೇರಿಸಿ ರುಚಿಕರ ದೋಸೆ ಮಾಡಬಹುದು. ಬಹುತೇಕ ಜನರು ಸ್ಪಂಜಿನ ಸೆಟ್ ದೋಸೆ ಬಯಸುತ್ತಾರೆ. ಈ ದೋಸೆಯ ಗರಿಗರಿಯಾಗಿ ಮತ್ತು ಮೃದು ಹತ್ತಿಯಂತೆ ಇರುತ್ತೆ. ಈ ಸೆಟ್ ದೋಸೆ ಬೆಳಗ್ಗೆ ಮತ್ತು ಮಧ್ಯಹ್ನದ ಊಟಕ್ಕೂ ಸರಿ ಹೊಂದುತ್ತೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಸೆಟ್ ದೋಸೆಯನ್ನು ನೀಡಬಹುದು. ನೀವು ಸೆಟ್ ದೋಸೆಯನ್ನು (Tasty Set Dosa) ಸುಲಭವಾಗಿ ತಯಾರಿಸಬಹುದು.

ಸೆಟ್ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
* ಅಕ್ಕಿ
* ಉದ್ದಿನ ಬೇಳೆ
* ಅವಲಕ್ಕಿ (ಪೋಹಾ)
* ಮೆಂತ್ಯ ಕಾಳು
* ನೀರು
* ಉಪ್ಪು
* ಅಡುಗೆ ಎಣ್ಣೆ
ಸೆಟ್ ದೋಸೆ ಮಾಡುವ ಸುಲಭ ವಿಧಾನ
ಸೆಟ್ ದೋಸೆ ಮಾಡಲು, ನೀವು ದೋಸೆ ಹಿಟ್ಟನ್ನು ತಯಾರಿಸಬೇಕು. ಹೀಗಾಗಿ ಎರಡು ಕಪ್ ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ನೀರು ಹಾಕಿ ನೆನೆಸಿ. ಇನ್ನೊಂದು ಪಾತ್ರೆಯಲ್ಲಿ ಅರ್ಧ ಕಪ್ ಉದ್ದಿನ ಬೇಳೆ ಮತ್ತು ಮೆಂತ್ಯ ಹಾಕಿ ನಾಲ್ಕು ಗಂಟೆಗಿಂತ ಹೆಚ್ಚು ನೆನೆಸಿ ಇಡಬೇಕು. ಜೊತೆಗೆ 2 ಸ್ಪೂನ್ ಅವಲಕ್ಕಿಯನ್ನು 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ಇದು ಮೊದಲೇ ಮಾಡಬೇಕಾದ ಕೆಲಸ.
ಅಕ್ಕಿ ಮತ್ತು ಬೇಳೆ 6 ರಿಂದ 7 ಗಂಟೆಗಳ ಕಾಲ ನೆನೆಸಿದ ಬಳಿಕ, ಈಗ ಅದನ್ನು ಮಿಕ್ಸರ್ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನೆನಪಿಡಿ, ಹಿಟ್ಟು ತುಂಬಾ ತೆಳುವಾಗಿ ಅಥವಾ ದಪ್ಪವಾಗಿರಬಾರದು. ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಹಿಟ್ಟಿನೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮುಚ್ಚಿ. ಈ ಮಿಶ್ರಣವನ್ನು 8 ರಿಂದ 10 ಗಂಟೆಗಳ ಕಾಲ ಹುದುಗಿಸಲು ಇಡಬೇಕು. ಹಿಟ್ಟು ಚೆನ್ನಾಗಿ ಹುಳಿ ಬರಬೇಕಾದರೆ ಬೆಚ್ಚಗಿರುವ ಸ್ಥಳದಲ್ಲಿ ಇಡಿ. 8 ರಿಂದ 12 ಗಂಟೆಗಳ ಕಾಲ ಹುದುಗಲು (ಹುಳಿ ಬರಲು) ಇಡಬೇಕು. ಹಿಟ್ಟು ಸಿದ್ಧವಾದಾಗ ನೀವು ಅದರಿಂದ ಸೆಟ್ ದೋಸೆ ಮಾಡಬಹುದು.
ಈಗ ಅಡುಗೆ ಒಲೆ ಆನ್ ಮಾಡಿ. ಬಸಿಯಾದಾಗ ಅದರ ಮೇಲೆ ತವಾ ಇಡಿ. ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ಸ್ವಲ್ಪ ಎಣ್ಣೆ ಹಾಕಿ.ಕೊಂಡು, ಸಾಂಬಾರ್ಗೆ ಬಳಸುವ ಚಮಚದಿಂದ ಹಿಟ್ಟನ್ನು ಕಾದ ತವಾದಲ್ಲಿ ಕೊಂಚ ದಪ್ಪವಾಗಿ ದೋಸೆ ಹಾಕಿಕೊಳ್ಳಿ. ದೋಸೆ ಹಿಟ್ಟನ್ನು ದೊಡ್ಡ ಚಮಚದ ಸಹಾಯದಿಂದ ಅದರಲ್ಲಿ ಸುರಿಯಿರಿ. ನಿಧಾನವಾಗಿ ತವಾ ಮೇಲೆ ಹರಡಿ. ಇದನ್ನು ಸಾಮಾನ್ಯ ದೋಸೆಯಂತೆ ಹರಡಬಾರದು. ಈ ದೋಸೆಯನ್ನು ಮಧ್ಯಮ ಉರಿಯಲ್ಲಿ ಬೇಯಿಸಿ. ಈಗ ಒಂದು ಚಮಚ ಎಣ್ಣೆಯನ್ನು ಅಂಚುಗಳ ಮೇಲೆ ಸುರಿಯಿರಿ.
ಈಗ ದೋಸೆಯ ಮೇಲೆ ಮುಚ್ಚಳವನ್ನು ಇಟ್ಟು ಮುಚ್ಚಿ. ಒಂದರಿಂದ ಎರಡು ನಿಮಿಷ ಚೆನ್ನಾಗಿ ಬೇಯಿಸಿ. ಅದು ಸ್ವಲ್ಪ ಊದಿಕೊಳ್ಳುತ್ತದೆ. ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಬೇಕಾಗುತ್ತದೆ. ಇಷ್ಟು ಮಾಡಿದರೆ ಬಿಸಿಬಿಸಿಯಾದ ಸೆಟ್ ದೋಸೆ ಸಿದ್ಧ. ಇದನ್ನು ಚಟ್ನಿಯೊಂದಿಗೆ ತಿನ್ನಬಹುದು. ತೆಂಗಿನಕಾಯಿ ಚಟ್ನಿಯೊಂದಿಗೆ ಸವಿದರೆ, ಅದರ ಮಜವೇ ಬೇರೆ.



Click it and Unblock the Notifications
