Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಅಂಗಡಿಯಲ್ಲಿ ಸಿಗುವ ಈ ಮಸಾಲೆ ಹುರಿಗಡಲೆ ಮನೆಯಲ್ಲಿ ಮಾಡಿ..! ಬಹಳ ಸುಲಭ
ಮನೆಯಲ್ಲಿ ಸಂಜೆ ವೇಳೆ ಯಾವುದಾದರು ಸ್ನ್ಯಾಕ್ಸ್ ಇದ್ದರೆ ಮನೆಯಲ್ಲಿ ಎಲ್ಲರು ಕುಳಿತು ಸವಿಯಲು ಬಹಳ ಖುಷಿತಾಗುತ್ತೆ. ಟೀ ಟೈಮ್‌ನಲ್ಲಿ ಯಾವುದಾದರು ಕರಿದ ತಿಂಡಿ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತೆ, ಟಿವಿ ನೋಡುವಾಗ, ಮನೆಯಲ್ಲಿ ಸಮಯ ಕಳೆಯುವಾಗ ಜೊತೆಗೆ ಏನಾದರು ಇದ್ದಾಗಲೇ ಆ ಸಮಯ ಬೇಗ ಸರಿಯುತ್ತೆ.
ಆದ್ರೆ ನಿತ್ಯವೂ ಬೇಕರಿಯಿಂದ, ಅಂಗಡಿಯಿಂದ ಕರಿದ ತಿಂಡಿಗಳ ತಂದು ಸವಿಯುವುದು ಕಷ್ಟ. ಹೀಗಾಗಿ ನಾವು ಮನೆಯಲ್ಲೇ ಈ ಕರಿದ ತಿಂಡಿ ಮಾಡಿ ಸವಿದರೆ ಉತ್ತಮ. ಇನ್ನು ಸಂಜೆ ಸ್ನ್ಯಾಕ್ಸ್ ಬೇಕೆಂದರೆ ಯಾವುದಾದರು ಕಡಲೆಯನ್ನು ಹುರಿದು ಮಸಾಲೆಯುಕ್ತ ಕಡಲೆಯನ್ನಾಗಿ ಸವಿದರೆ ಅದರ ರುಚಿಯೇ ಬೇರೆ.

ಹಾಗಾದ್ರೆ ನಾವಿಂದು ಮಸಾಲೆಯುಕ್ತ ಹುರಿಗಡಲೆಯನ್ನು ಮನೆಯಲ್ಲೇ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಇದನ್ನು ಇಡಿ ಕಡ್ಲೆ, ಹುರಿ ಗಡಲೆ ಅಂತಲೂ ಕರೆಯುತ್ತಾರೆ. ಇದನ್ನು ಮೊಳಕೆ ಬರಿಸಿ ಸವಿಯುತ್ತಾರೆ, ಅದರಲ್ಲು ತೆಂಗಿನಕಾಯಿ ತುರಿ ಹಾಕಿ ಮಾಡುವ ಹುಸ್ಲಿ ಎಲ್ಲರಿಗೂ ಅಚ್ಚು ಮೆಚ್ಚಿನ ತಿಂಡಿಯಾಗಿರುತ್ತೆ.
ಆದ್ರೆ ನಾವಿಂದು ಈ ಹುರಿಗಡಲೆ ಅಂಗಡಿಯಲ್ಲಿ ಸಿಗುವಂತೆ ಮಸಾಲೆ ಭರಿತವಾಗಿ ಮಾಡುವುದು ಹೇಗೆ ನೋಡೋಣ. ಮನೆಯಲ್ಲಿ ಸಮಯ ಕಳೆಯಲು, ಫ್ರಿ ಟೈಮ್‌ನಲ್ಲಿ ಸವಿಯಲು ಇದು ಒಳ್ಳೆಯ ತಿಂಡಿ, ಹಾಗಾದ್ರೆ ಈ ಮಸಾಲೆ ಭರಿತ ಹುರಿಗಡಲೆ ಮಾಡುವುದು ಹೇಗೆ? ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ನೋಡೋಣ.
ಮಸಾಲೆ ಭರಿತ ಹುರಿಗಡಲೆ ಮಾಡಲು ಬೇಕಾಗುವ ಪದಾರ್ಥಗಳು
- ಹುರಿ ಗಡಲೆ
- ಉಪ್ಪು
- ಅರಶಿಣ ಪುಡಿ
ಮಸಾಲೆ ಭರಿತ ಹುರಿಗಡಲೆ ಮಾಡುವ ವಿಧಾನವೇನು?
ಮೊದಲು ಒಂದು ಸಣ್ಣ ಕಪ್‌ನಲ್ಲಿ ಅರ್ಧ ಚಮಚ ಉಪ್ಪು ಹಾಗು ಅರ್ಧ ಚಮಚ ಅರಶಿಣ ಪುಡಿ ತೆಗೆದುಕೊಂಡು ಅದಕ್ಕೆ 2 ಸ್ಪೂನ್‌ನಲ್ಲಿ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಈ ಉಪ್ಪು ನೀರಿನಲ್ಲಿ ಚೆನ್ನಾಗಿ ಕರಗಬೇಕು? ಈಗ ಒಂದು ತಟ್ಟೆಯಲ್ಲಿ ಹಸಿ ಕಡಲೆಯನ್ನು ಹಾಕಿಕೊಳ್ಳಿ. ಬಳಿಕ ಇದಕ್ಕೆ ಅರಶಿಣ ಪುಡಿ ಮಿಕ್ಸ್ ಮಾಡಿದ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಅರ್ಧ ಬಟ್ಟಲು ಉಪ್ಪು ಹಾಕಿಕೊಳ್ಳಿ. ಪುಡಿ ಉಪ್ಪು ಹಾಕಿ ಸಣ್ಣ ಉರಿ ಇಡಿ. ಬಿಸಿ ಬಿಸಿ ಆದಾಗ ಅದಕ್ಕೆ ರೆಡಿ ಮಾಡಿಕೊಂಡಿರುವ ಕಡಲೆಯನ್ನು ಹಾಕಿ ಹುರಿದುಕೊಳ್ಳಿ. 2 ನಿಮಿಷದಲ್ಲಿ ಈ ಕಡಲೆಗಳು ಅರಳಿಕೊಳ್ಳುತ್ತವೆ. ಕಡಲೆ ಅರಳಿದ ಬಳಿಕ ಒಲೆ ಆಫ್ ಮಾಡಿ ಉಪ್ಪಿನಿಂದ ಕಡಲೆಯನ್ನು ಬೇರೆ ಮಾಡಿ. ಇದಕ್ಕೆ ತೂತುಗಳಿರುವ ಅಥವಾ ಜರಡಿಯನ್ನು ಬಳಸಿಕೊಳ್ಳಿ.
ಇಷ್ಟು ಮಾಡಿದರೆ ನಿಮ್ಮ ಮುಂದೆ ಮಸಾಲೆಯುಕ್ತ ಹುರಿಗಡಲೆ ರೆಡಿಯಾಗುತ್ತದೆ. ಇದನ್ನು ನೀವು 2 ತಿಂಗಳು ಬೇಕಾದರೂ ಇಟ್ಟು ಸವಿಯಬಹುದು. ಹಾಗೆ ಮನೆಯಲ್ಲೇ ಮಾಡಿರುವುದರಿಂದ ರುಚಿಯೂ ಬೊಂಬಾಟ್ ಎನಿಸುತ್ತದೆ. ನೀವು ಕೂಡ ಅಂಗಡಿಯಿಂದ ಇಂತಹ ಕಡಲೆಯನ್ನು ತರುವ ಬದಲು ಮನೆಯಲ್ಲೇ ಮಾಡಿ ಸವಿದು ನೋಡಿ. ಅದರ ರುಚಿಗೆ ನೀವೇ ಮನೆಯಲ್ಲಿ ಪುನಃ ಮಾಡಲು ಮುಂದಾಗುತ್ತೀರಿ.



Click it and Unblock the Notifications