Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಮೂಳೆ ಬಲವಾಗಲು ಮಾಂಸಖಂಡ ಗಟ್ಟಿಯಾಗಲು ದಿನಕ್ಕೊಂದು ಉಂಡೆ ತಿನ್ನಿ!
ನೀವು ಬಹಳ ವೀಕ್ ಆಗಿದ್ದರೆ ಯಾವಾಗಲು ಸದೃಢವಾಗಿರಲು ಸಹಕಾರಿಯಾಗುವಂತಹ ಖಾದ್ಯಗಳನ್ನು ಮಾಡಿ ಸವಿಯುವ ಬಯಕೆ ಹೊಂದಿರುತ್ತೀರಿ. ಹಾಗೆ ಬಹಳಷ್ಟು ಮಂದಿ ಮೂಳೆ ಹಾಗೂ ಮಾಂಸ ಖಂಡಗಳು ಬಲವಾಗಲು ಹಲವು ರೀತಿಯ ಖಾದ್ಯಗಳ ಸವಿಯಲು ಇಷ್ಟಪಡುತ್ತಾರೆ. ಹಾಗೆ ಮೂಳೆ ಆರೋಗ್ಯಕ್ಕೆ ನಾವಿಂದು ಹೆಸರು ಕಾಳಿನಿಂದ ಮಾಡುವ ರುಚಿ ರುಚಿಯಾದ ಉಂಡೆಯ ಕುರಿತಾಗಿ ತಿಳಿದುಕೊಳ್ಳೋಣ.
ಹೆಸರು ಕಾಳು ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಹಾಗೆ ಬಹಳ ಅಗತ್ಯ ಪೋಷಕಾಂಶಗಳ ಹೊಂದಿರುವ ಒಂದು ಅಂಶಗಳನ್ನು ಹೊಂದಿದೆ. ಹೆಸರು ಕಾಳಿನ ಹಲವು ಖಾದ್ಯಗಳನ್ನು ನೀವು ಬಹಳ ಇಷ್ಟಪಟ್ಟು ಸವಿದಿರುತ್ತೀರಿ. ಅದರಲ್ಲೂ ಈ ಹೆಸರು ಕಾಳಿನ ಉಂಡೆ ಬಹಳ ರುಚಿಕರ ಹಾಗೆ ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮವಾಗಿದೆ.
ಇನ್ನು ಹಲವು ಖಾದ್ಯಗಳ ಪೈಕಿ ಈ ಹೆಸರು ಕಾಳಿನ ಉಂಡೆ ಬಹಳ ಸುಲಭವಾಗಿ ಮಾಡಬಹುದು. ನೀವು ನಿತ್ಯ ಒಂದು ಉಂಡೆ ಸವಿದರೆ ನಿಮ್ಮ ಮೂಳೆಗಳು ಹಾಗೆ ಮಾಂಸಖಂಡಗಳು ಬಲವಾಗುತ್ತದೆ. ಹಾಗಾದ್ರೆ ಈ ಉಂಡೆ ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ಹೆಸರು ಕಾಳಿನ ಉಂಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಹೆಸರು ಕಾಳು
ಬೆಲ್ಲ
ಏಲಕ್ಕಿ
ಗೋಡಂಬಿ
ಬಾದಾಮಿ
ಹೆಸರು ಕಾಳಿನ ಉಂಡೆ ಮಾಡುವ ವಿಧಾನವೇನು?
ಮೊದಲಿಗೆ 2 ಕಪ್ ಹೆಸರು ಕಾಳನ್ನು ಬಾಣಲೆಗೆ ಹಾಕಿಕೊಂಡು ಸಣ್ಣ ಉರಿಯಲ್ಲಿ 10 ನಿಮಿಷ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ. ಅನಂತರ ಅರ್ಧ ಕಪ್ ಶೇಂಗಾ ಕೂಡ ಹಾಕಿಕೊಂಡು ಸಿಪ್ಪೆ ಬಿಡುವಷ್ಟೂ ಹುರಿದುಕೊಳ್ಳಿ. ಅನಂತರ ಇದು ತಣ್ಣಗಾದ ಬಳಿಕ ಸಿಪ್ಪೆಗಳ ತೆಗೆದು ಅದನ್ನು ಸ್ವಲ್ಪ ಪುಡಿ ಮಾಡಬೇಕು ಒಂದು ಶೇಂಗಾ 2 ಪೀಸ್ ಮಾಡಿಕೊಳ್ಳಿ.
ಈಗ ತಣ್ಣಗಾಗಿರುವ ಹೆಸರು ಕಾಳನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಇದನ್ನು ಒಂದು ಬೌಲ್ಗೆ ಹಾಕಿಡಿ. ಈಗ ಒಂದು ಬಾಣಲೆಗೆ ತುಪ್ಪ ಹಾಕಿ ಅದಕ್ಕೆ ಗೋಡಂಬಿ, ಬಾದಾಮಿ ಹಾಕಿ ಫ್ರೈ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಅರ್ಧ ಕಪ್ ಬೆಲ್ಲ ಹಾಕಿ ನೀರು ಹಾಕಿ ಕರಗಲು ಬಿಡಿ. ಇದು ಒಂದು ಎಳೆ ಪಾಕ ಬರಬೇಕು.
ಈಗ ಕುದಿಬರುತ್ತಿರುವ ಬೆಲ್ಲದ ಪಾಕಕ್ಕೆ ಗೋಡಂಬಿ, ಹಾಗೂ ಪುಡಿ ಮಾಡಿದ ಬಾದಾಮಿ ಹಾಕಿಕೊಳ್ಳಿ. ಹಾಗೆ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಈಗ ಗ್ಯಾಸ್ ಆಫ್ ಮಾಡಿಕೊಂಡು ಪುಡಿ ಮಾಡಿಕೊಂಡಿದ್ದ ಹೆಸರು ಕಾಳಿನ ಪುಡಿಯನ್ನು ಸಹ ಸೇರಿಸಿಕೊಂಡು ಮಿಶ್ರಣ ಮಾಡಿ. ಇದು ಗಟ್ಟಿಯಾಗಬೇಕು. ಉಂಡೆ ಕಟ್ಟುವ ಹದಕ್ಕೆ ಬಂದಾಗ ಒಲೆ ಆಫ್ ಮಾಡಿ.
ಬಿಸಿ ಇದ್ದಾಗಲೇ ಕೈಗೆ ನೀರು ಹಚ್ಚಿಕೊಂಡು ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಹೆಸರು ಕಾಳಿನ ಉಂಡೆ ಸಿದ್ದವಾಗುತ್ತೆ. ನೀವು ಸಹ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ. ದೇಹಕ್ಕೆ ಬಹಳ ಉತ್ತಮ ತಿಂಡಿ ಇದು.



Click it and Unblock the Notifications

