Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಒಂದೇ ರೀತಿ ಸಾರು ಸವಿದು ಬೋರ್ ಆಗಿದ್ರೆ ಇಲ್ಲಿದೆ ಹುಳಿ ಗೊಜ್ಜು..! ಮಾಡೋದು ತುಂಬಾ ಸುಲಭ
ಮಧ್ಯಾಹ್ನದ ಊಟ ಹಾಗೆ ರಾತ್ರಿ ಊಟಕ್ಕೆ ಯಾವುದಾದರು ಹುಳಿ ಹುಳಿಯಾದ ಸಾರು, ರಸಂ, ಇದ್ದರೆ ಊಟಕ್ಕೆ ಮತ್ತಷ್ಟು ರುಚಿ ಬರುತ್ತದೆ. ಹೀಗಾಗಿ ಯಾವುದಾದರು ಸಾಂಬಾರ್, ಸಾರು, ಚಟ್ನಿ, ಪಲ್ಯ ಇರುವ ಜೊತೆಗೆ ಯಾವುದಾದರು ಹುಳಿ ಮಾಡುವುದು ಆಲೋಚನೆಯಾಗಿರುತ್ತೆ. ಹಾಗೆ ಹುಳಿ ನಮ್ಮ ಬಾಯಿ ರುಚಿಯನ್ನು ಹೆಚ್ಚಿಸುವ ಖಾದ್ಯ ಇದ್ದರೆ ಊಟಕ್ಕೆ ಮಜಾ ಬರುತ್ತೆ.
ಹೀಗಾಗಿ ನಾವು ಹೆಚ್ಚು ಸಮಯವೂ ಹಿಡಿಯದೆ, ಸುಲಭವಾಗಿ ಮಾಡುವಂತಹ ಹುಳಿ ಗೊಜ್ಜು ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಹುಳಿ ಗೊಜ್ಜು ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಅತ್ಯಂತ ವೇಗವಾಗಿ ಮಾಡಬಹುದಂತಹ ಸಾರು. ಈ ಹುಳಿ ಗೊಜ್ಜು ನಿಮ್ಮ ನಾಲಗೆ ರುಚಿ ಮತ್ತಷ್ಟು ಹೆಚ್ಚಿಸೋದು ಖಚಿತ. ಹಾಗೆ ನೀವು ದಿನಾಲು ಒಂದೇ ರೀತಿ ಸಾರು ಸವಿದು ಬೇಜಾರ್ ಆಗಿದ್ದರೆ ಈ ಖಾದ್ಯ ಸವಿಯಬಹುದು.

ಅದರಲ್ಲೂ ನೀವು ನಿತ್ಯ ಒಂದೇ ರೀತಿಯ ಮಸಾಲೆಗಳ ಬಳಸಿ ಸಾರು, ರಸಂ, ಸಾಂಬಾರ್ ಮಾಡುತ್ತಿದ್ದರೆ ಒಮ್ಮೆ ಈ ಹುಳಿ ಗೊಜ್ಜನ್ನು ಟ್ರೈ ಮಾಡಿ ನೋಡಿ. ಅನ್ನದ ಜೊತೆಗೆ ಈ ಹುಳಿ ಗೊಜ್ಜು ನಿಮ್ಮ ಊಟದ ರುಚಿ ಹೆಚ್ಚಿಸಲಿದೆ. ಹಾಗಾದ್ರೆ ಈ ಹುಳಿ ಗೊಜ್ಜು ಮಾಡುವುದಾದ್ರು ಹೇಗೆ? ಹುಳಿ ಗೊಜ್ಜು ಮಾಡುವ ಕುರಿತ ಸಂಪೂರ್ಣ ಮಾಹಿತಿ ನಾವಿಂದು ತಿಳಿದುಕೊಳ್ಳೋಣ.
ಹುಳಿ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು, ಮಾಡುವ ವಿಧಾನ, ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಕುರಿತು ಇಲ್ಲಿದೆ ಮಾಹಿತಿ.
ಹುಳಿ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು ಏನು?
- ಜೀರಿಗೆ
- ಮೆಣಸು
- ಬೆಳ್ಳುಳ್ಳಿ
- ಹುಣಸೆ ಹಣ್ಣು
- ಸಾಸಿವೆ
- ಮೆಂತ್ಯ ಕಾಳು
- ಕರಿಬೇವಿನ ಎಲೆಗಳು
- ಸಾಂಬಾರ್ ಪುಡಿ
- ಉಪ್ಪು
- ಅರಿಶಿನ ಪುಡಿ
- ಬೆಲ್ಲ
- ಎಣ್ಣೆ
ಹುಳಿ ಗೊಜ್ಜು ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಜೀರಿಗೆ, ಕಾಳು ಮೆಣಸು, ಬೆಳ್ಳುಳ್ಳಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಈಗ ಒಂದು ಬೌಲ್‌ಗೆ ಹುಣಸೆ ಹುಳಿ ಹಾಕಿ ಅದರ ನೀರು ತೆಗೆದುಕೊಂಡು ಒಂದು ಬೌಲ್‌ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಉಪ್ಪು, ಸಾಂಬಾರ್ ಪುಡಿ, ಅರಶಿಣ ಹಾಕಿ ಸ್ಪೂನ್‌ನಿಂದ ಕಲಸಿಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ, ಮೆಂತ್ಯ ಕಾಳು, ಜಜ್ಜಿರುವ ಬೆಳ್ಳುಳ್ಳಿ, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. 4ರಿಂದ 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಬೇಕು. ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಮಸಾಲೆಯನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಿಷದ ಬಳಿಕ ಹುಣಸೆ ಹುಳಿ ಹಿಂಡಿದ ಬೌಲ್‌ನಿಂದ ಅಷ್ಟು ಹುಳಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಪಾತ್ರೆಯ ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಇದಕ್ಕೆ ಸ್ವಲ್ಪ ಬೆಲ್ಲ ಸಹ ಹಾಕಿಕೊಂಡು ಮಿಕ್ಸ್ ಮಾಡಿ ಕುದಿಯಲು ಬಿಡಿ. 3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಯಲು ಬಿಟ್ಟರೆ ನಿಮ್ಮ ಮುಂದೆ ಈ ರುಚಿಕರ ಹುಳಿ ಗೊಜ್ಜು ರೆಡಿಯಾಗುತ್ತದೆ. ಅನ್ನಕ್ಕೆ ಇದು ಹೇಳಿ ಮಾಡಿಸಿದ ಗೊಜ್ಜು. ಅದರಲ್ಲೂ ನಾಲಿಗೆ ರುಚಿಗೆ ಇದನ್ನು ಒಮ್ಮೆ ಮಾಡಿ ನೊಡಿ.



Click it and Unblock the Notifications
