Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಹಬ್ಬಕ್ಕೆ ದೇವಸ್ಥಾನ ಶೈಲಿಯ ಸಾಂಬಾರ್ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ
ಎಲ್ಲರ ಮನೆಯಲ್ಲಿ ಸಾಂಬಾರ್ ಅನ್ನು ಮಾಡಿಯೇ ಮಾಡುತ್ತಾರೆ. ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೆ ಯಾವುದಾದರೊದು ತರಕಾರಿ ಸಾಂಬಾರ್ ಮಾಡೋದು ಸಾಮಾನ್ಯ. ಆದ್ರೆ ಯಾವ ತರಕಾರಿ ಬಳಸಿ ಅದ್ಭುತ ರುಚಿಯ ಸಾಂಬಾರ್ ಮಾಡಬೇಕು ಎಂಬ ಗೊಂದಲ ಅಂತು ಇದ್ದೇ ಇರುತ್ತೆ. ಹೀಗಾಗಿಯೇ ಬಹುತೇಕ ಮಂದಿ ಮಿಕ್ಸ್ ತರಕಾರಿ ಸಾಂಬಾರ್ ಮಾಡುತ್ತಾರೆ.
ಒಂದಕ್ಕಿಂತ ಹೆಚ್ಚು ತರಕಾರಿ ಹಾಕಿ ರುಚಿಕರ ಸಾಂಬಾರ್ ಮಾಡುವುದೇ ಹೆಚ್ಚು. ಇನ್ನು ಕೆಲವರು ಅಂಗಡಿಯಲ್ಲಿ ಸಿಗುವ ಮಸಾಲೆಗಳ ತಂದು ಸಾಂಬಾರ್ ಮಾಡುತ್ತೀರಿ. ಇಲ್ಲವೆ ಮನೆಯಲ್ಲೇ ಸಾಂಬಾರ್ ಮಸಾಲೆ ಮಾಡಿರುತ್ತೀರಿ ಇದನ್ನೇ ಬಳಸಿ ಸಾಂಬಾರ್ ಮಾಡುತ್ತೀರಿ. ಇನ್ನು ನೀವು ಕೆಲವು ವೇಳೆ ಹೋಟೆಲ್‌ನಲ್ಲಿ ಅಥವಾ ದೇವಾಲಯಕ್ಕೆ ಹೋದಾಗ ಅಲ್ಲಿ ಹಾಕುವ ಸಾಂಬಾರ್ ರುಚಿಗೆ ಎಂತವರು ಮರುಳಾಗುತ್ತಾರೆ.

ಹಾಗಾದ್ರೆ ಈ ರೀತಿ ಸಾಂಬಾರ್ ಮಾಡುವುದು ಹೇಗೆ? ಹಬ್ಬಕ್ಕೆ ಮನೆಯಲ್ಲಾ ಘಮ್ ಎನ್ನುವಂತಹ ಸಾಂಬಾರ್ ಮಾಡುವುದಾದ್ರು ಹೇಗೆ? ಮನೆಯಲ್ಲಿ ಈ ರೀತಿ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಹಬ್ಬದ ಸಾಂಬಾರ್ ಮಾಡುವ ಕ್ರಮವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಬ್ಬದ ಸಾಂಬಾರ್ ಮಾಡೋಕೆ ಏನೆಲ್ಲಾ ಪದಾರ್ಥ ಬೇಕು?
- ತೊಗರಿ ಬೇಳೆ
- ಟೊಮೆಟೋ
- ಸೌತೆಕಾಯಿ
- ಕ್ಯಾರೆಟ್
- ಬದನೆಕಾಯಿ
- ಬೀನ್ಸ್
- ಮೂಲಂಗಿ
- ನುಗ್ಗೇಕಾಯಿ
- ಜೀರಿಗೆ
- ಮೆಣಸು
- ಮೆಂತ್ಯ
- ಉದ್ದಿನ ಬೇಳೆ
- ಕಡಲೆ ಬೇಳೆ
- ಸಾಸಿವೆ
- ಇಂಗು
- ಉಪ್ಪು
- ಕೊತ್ತಂಬರಿ ಕಾಳು
- ಕರಿಬೇವು
- ಹುಣಸೆ ಹುಳಿ
- ಬೆಲ್ಲ
ಹಬ್ಬದ ಸಾಂಬಾರ್ ಮಾಡೋದು ಹೇಗೆ?
ಮೊದಲು ಒಂದು ಕಪ್ ತೊಗರಿ ಬೇಳೆ ತೆಗೆದುಕೊಂಡು ಎರಡು ಟಮೆಟೋ ಒಂದು ಕುಕ್ಕರ್‌ಗೆ ಹಾಕಿ ನೀರು ಹಾಕಿಕೊಂಡು ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಈ ಮಿಕ್ಸರ್ ಅನ್ನು ಬದಿಗಿಟ್ಟುಕೊಳ್ಳಿ. ಈಗ ಸಾಂಬಾರ್ ಸೌತೆಕಾಯಿ, ಬದನೆಕಾಯಿ, ಬೀನ್ಸ್, ಮೂಲಂಗಿ ಕ್ಯಾರೆಟ್, ನುಗ್ಗೆಕಾಯಿ ಕತ್ತರಿಸಿ ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ನೀವು ಕತ್ತರಿಸಿಕೊಂಡಿರುವ ಎಲ್ಲಾ ತರಕಾರಿಗಳನ್ನು ಅದಕ್ಕೆ ಹಾಕಿ ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿದರೆ ಸಾಕಾಗುತ್ತದೆ. ಬಳಿಕ ಇದಕ್ಕೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. 15 ನಿಮಿಷಗಳ ಕಾಲ ತರಕಾರಿ ಬೇಯಲು ಬಿಡಿ. ಇನ್ನೊಂದು ಕಡೆ ಮತ್ತೊಂದು ಪಾನ್ ಇಟ್ಟು ಅದಕ್ಕೆ ಸ್ಪೂನ್ ಎಣ್ಣೆ ಹಾಕಿ.
ಇದಕ್ಕೆ ಮೆಣಸು, ಜೀರಿಗೆ, ಕಾಳು ಮೆಣಸು, ಮೆಂತ್ಯ, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಫ್ರೈ ಮಾಡಿ. 1 ನಿಮಿಷ ಫ್ರೈ ಆದರೆ ಸಾಕಾಗುತ್ತದೆ. ಈಗ ಇದಕ್ಕೆ ಕೊತ್ತಂಬರಿ ಕಾಳು ಹಾಕಿ ಹುರಿದುಕೊಳ್ಳಿ. ಕೊನೆಯದಾಗಿ ತೆಂಗಿನ ತುರಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಬಳಿಕ ಈ ಎಲ್ಲಾ ಮಸಾಲೆಯನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ.
ನೀರು ಹಾಕದೆ ಪೌಡರ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಲೆ ಮೇಲೆ ತರಕಾರಿ ಕುದಿಯುತ್ತಿದ್ದರೆ ಅದಕ್ಕೆ ಮೊದಲು ಬೇಯಿಸಿಕೊಂಡ ಬೇಳೆ ಹಾಗೂ ಟೊಮೆಟೋವನ್ನು ಹಾಕಿಕೊಂಡು ಕಲಸಿಕೊಳ್ಳಿ. ಈಗ ರುಬ್ಬಿಕೊಂಡಿರುವ ಮಸಾಲೆಯನ್ನು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಸ್ವಲ್ಪ ಬೆಲ್ಲ ಹಾಗೂ ಹುಣಸೆ ಹುಳಿ, ಉಪ್ಪು ಹಾಕಿಕೊಳ್ಳಿ, ನಂತರ ಕುದಿಯಲು ಬಿಡಿ.
15 ನಿಮಿಷ ಕುದಿಯಲು ಬಿಟ್ಟರೆ ಅದರ ಸುವಾಸನೆ ಹರಡಲು ಆರಂಭವಾಗುತ್ತದೆ. ಈಗ ಕರಿಬೇವು ಹಾಕಿ. ಇದಾದ ನಂತರ ಉರಿ ಸಣ್ಣದಾಗಿ ಇಟ್ಟುಕೊಂಡು ಮೆಣಸು, ಸಾಸಿವೆ, ಇಂಗು ಹಾಕಿ ಒಂದು ಒಗ್ಗರಣೆ ಮಾಡಿ ಸಾಂಬಾರ್‌ಗೆ ಹಾಕಿದರೆ ದೇವಸ್ಥಾನದ ರುಚಿಯಲ್ಲಿ ಹಬ್ಬಕ್ಕೆ ಸವಿಯಲು ಸಾಂಬಾರ್ ರೆಡಿಯಾಗುತ್ತದೆ.



Click it and Unblock the Notifications
