Latest Updates
-
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು!
ಹಬ್ಬದಂದು ಬಾಯಲ್ಲಿ ನೀರು ತರಿಸುವ ರುಚಿ ರುಚಿ ಕಜ್ಜಾಯ: ಸುಲಭದ ವಿಧಾನ ಇಲ್ಲಿದೆ!
ಹಬ್ಬದ ಸಮಯದಲ್ಲಿ ಎಲ್ಲರಿಗೂ ತಿಂಡಿಯ ಮಾಡಿ ಸವಿಯುವುದು ಬಹಳ ಇಷ್ಟವಾಗುತ್ತೆ. ಅದ್ರಲ್ಲೂ ಸುಲಭವಾಗಿ ಮಾಡುವಂತಹ ಸಿಹಿಯಾದ ತಿಂಡಿಗಳು ಕೂಡ ಎಲ್ಲರ ಬಾಯಲ್ಲೂ ನೀರು ತರಿಸಲಿವೆ. ಕೆಲವೊಂದು ಸಿಹಿಗಳೆಂದರೆ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಬಹಳ ಇಷ್ಟಪಡುತ್ತಾರೆ. ಹಾಗೆ ಹಬ್ಬದ ಊಟಕ್ಕೆ ಯಾವುದಾದರೊಂದು ತಿಂಡಿ ಇದ್ದರೇನೆ ಅಲ್ಲಿ ರುಚಿ ದುಪ್ಪಟ್ಟಾಗೋದು.
ನಾವಿಂದು ಸುಲಭವಾಗಿ ರುಚಿ ರುಚಿಯಾಗಿ ಮಾಡಿ ಸವಿಯುವ ಕಜ್ಜಾಯ ಮಾಡಿ ಸವಿಯುವ ಕುರಿತು ತಿಳಿಯೋಣ. ಈ ಕಜ್ಜಾಯವನ್ನು ಎಲ್ಲಾ ಹಬ್ಬದಲ್ಲೂ ಮಾಡಿ ಸವಿಯಬಹುದು. ಹಾಗೆ ಎಲ್ಲರು ಇಷ್ಟಪಡುವಂತಹ ರುಚಿಯ ಸಿಹಿ ಇದು. ಗಣೇಶ ಹಬ್ಬದಿಂದ ಹಿಡಿದು ಎಲ್ಲಾ ಹಬ್ಬದಲ್ಲೂ ಈ ಕಜ್ಜಾಯವೇ ಬಹಳ ಫೇಮಸ್.

ನಾವಿಂದು ಮನೆಯಲ್ಲೇ ಈ ಕಜ್ಜಾಯ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಜ್ಜಾಯ ಮಾಡಲು ಬೇಕಾಗುವ ವಸ್ತುಗಳೇನು?
- ಅಕ್ಕಿ
- ಗಸೆಗಸೆ
- ಬಿಳಿ ಎಳ್ಳು
- ಕೊಬ್ಬರು ತುರಿ
- ಬೆಲ್ಲ
ಕಜ್ಜಾಯ ಮಾಡುವುದು ಹೇಗೆ?
ಮೊದಲು 2 ಕಪ್ ರೇಷನ್ ಅಕ್ಕಿಯನ್ನು ಬೌಲ್‌ಗೆ ಹಾಕಿ 4 ಬಾರಿಯಾದರು ಚೆನ್ನಾಗಿ ತೊಳೆದುಕೊಳ್ಳಿ. ಈ ಅಕ್ಕಿಯನ್ನು ಬರೋಬ್ಬರಿ 2 ದಿನ ನೆನೆಯಲು ಬಿಡಬೇಕು. ಹಾಗೆ ದಿನದಲ್ಲಿ ಮೂರು ಬಾರಿ ನೀರನ್ನು ತೆಗೆದು ಬದಲಾಯಿಸಬೇಕು. 2 ದಿನದ ಬಳಿಕ ಮತ್ತೊಮ್ಮೆ ತೊಳೆದುಕೊಂಡು ಅಕ್ಕಿಯನ್ನು ತೆಗೆದು ಜರಡಿಯಲ್ಲಿ ಹಾಕಿಡಿ.
ನೀರು ಸ್ವಲ್ಪ ಡ್ರೈ ಆದ ಬಳಿಕ ಕಾಟನ್ ಬಟ್ಟೆಯ ಮೇಲೆ ತೆಳುವಾಗಿ ಹರಡಿ 30 ನಿಮಿಷ ಒಣಗಲು ಬಿಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಬಿಳಿ ಎಳ್ಳು ಹಾಕಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ. ಅನಂತರ ಗಸೆಗಸೆಯನ್ನು ಸಹ ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ಈಗ ಮಿಕ್ಸಿ ಜಾರ್‌ಗಡ ಕಾಲು ಕಪ್ ಒಣ ಕೊಬ್ಬರಿ, ಏಲಕ್ಕಿ, ಒಣ ಶುಂಠಿ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಹಾಗೆ ಇದನ್ನು ಹುರಿದಿಟ್ಟುಕೊಂಡ ಎಳ್ಳಿನ ಜೊತೆಗೆ ಹಾಕಿಟ್ಟುಕೊಳ್ಳಿ.
ಈಗ ಒಣಗಿರುವ ಅಕ್ಕಿಯನ್ನು ಕೂಡ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಬೇಕು. ನುಣ್ಣಗೆ ಪುಡಿ ಮಾಡಿ ಜರಡಿಗೆ ಹಾಕಿ ನುಣ್ಣಗಿನ ಹಿಟ್ಟು ತೆಗೆದಿಟ್ಟುಕೊಳ್ಳಿ. ಈ ಹಿಟ್ಟು ಉಂಡೆ ಕಟ್ಟುವಂತಹ ಹದಕ್ಕೆ ಬರಬೇಕು. ಒಂದು ಪಾತ್ರೆಯಲ್ಲಿ ಈ ಹಿಟ್ಟು ಹಾಕಿ ಮುಚ್ಚಿಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು 2 ಕಪ್ ಬೆಲ್ಲ ಕಾಲು ಕಪ್ ನೀರು ಹಾಕಿ ಕರಗಲು ಬಿಡಿ.
ನಂತರ ಮತ್ತೊಂದು ಪಾತ್ರೆಗೆ ಬೆಲ್ಲ ಹಾಕಿ ಕುದಿಯಲು ಬಿಡಿ. ಈ ಪಾಕ ಬಹಳ ಗಟ್ಟುಯಾಗಿ ನೀರಿಗೆ ಹಾಕಿದಾಗ ಉಂಡೆಯಾಗುವಂತ ಹದಕ್ಕೆ ಬರಲಿ. ಹೀಗೆ ಬಂದಾಗ ಈಗ ಕೊಬ್ಬರಿ, ಎಳ್ಳು, ಹೀಗೆ ಪುಡಿ ಮಾಡಿದ ಎಲ್ಲಾ ಪದಾರ್ಥಗಳನ್ನು ಕೂಡ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಸ್ವಲ್ಪ ಸ್ವಲ್ಪವೇ ಅಕ್ಕಿ ಹಿಟ್ಟನ್ನು ಇದಕ್ಕೆ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಇದು ಪಾಕಕ್ಕೆ ಸರಿಹೊಂದುವಷ್ಟು ಹಿಟ್ಟು ಹಾಕಿ ಗಂಟುಗಳು ಇಲ್ಲದಂತೆ ಹಿಟ್ಟು ಮಾಡಿ.
ಬಹಳ ಅಂಟು ಬಂದ ಬಳಿಕ ಮೇಲೆ 2 ಸ್ಪೂನ್ ತುಪ್ಪ ಹಾಕಿ ಸವರಿಕೊಂಡು ಪಾತ್ರೆಗೆ ಮುಚ್ಚಳ ಮುಚ್ಚಿ 5ರಿಂದ 6 ಗಂಟೆಗಳ ಕಾಲ ಹಾಗೆಯೆ ಇಡಿ. ನಂತರ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಉಂಡೆ ಕಟ್ಟಿಕೊಳ್ಳಿ. ಹಾಗೆ ಒಂದು ಪ್ಲಾಸ್ಟಿಕ್ ಮೇಲೆ ನಿಧಾನವಾಗಿ ತಟ್ಟಿಕೊಳ್ಳಿ. ಅನಂತರ ಬಾಣಲಯಲ್ಲಿ ಎಣ್ಣೆ ಹಾಕಿ ಕಾಯಲು ಬಿಟ್ಟು ಈ ಎಲ್ಲಾ ಕಜ್ಜಾಯವನ್ನು ಎಣ್ಣೆಗೆ ಬಿಟ್ಟು ಕರಿದುಕೊಳ್ಳಿ. ಕಜ್ಜಾಯ ಒಳಗೂ ಬೇಯಬೇಕು. ಆಗಾಗ ತಿರುಗಿಸುತ್ತಾ ಕರಿದುಕೊಳ್ಳಿ.



Click it and Unblock the Notifications