Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಾಯಲ್ಲಿಟ್ಟರೆ ಬೆಣ್ಣೆಯಂತೆ ಕರಗುವ 'ಹೆಸರುಬೇಳೆ ಹಲ್ವಾ': ಫಟಾಫಟ್ ಅಂತ ಮಾಡೋದು ಹೇಗೆ?
ಹಲ್ವಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಿಂದಿಡಿದು ವಯಸ್ಸಾದವರೂ ಸಹ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಹೌದು, ಮನೆಯಲ್ಲಿ ಯಾವಾಗಲೂ ಕ್ಯಾರೆಟ್, ಬಾಳೆಹಣ್ಣು, ಗೋಧಿ ಹಿಟ್ಟಿನ ಹಲ್ವಾ (halwa) ಮಾಡಿ ಬೇಜಾರಾಗಿರುತ್ತದೆ. ಹೀಗಾಗಿ, ಒಮ್ಮೆಯಾದರೂ ತುಂಬಾ ಸುಲಭ ಹಾಗೂ ರುಚಿಯಾದ ಹೆಸರುಬೇಳೆ ಹಲ್ವಾ (Moong Dal Halwa) ಟ್ರೈ ಮಾಡಿ. ಒಮ್ಮೆ ಇದರ ರುಚಿ ಸವಿದವರು ಅದನ್ನು ಮತ್ತೆ ಮತ್ತೆ ಕೇಳುತ್ತಾರೆ. ಹೆಸರುಬೇಳೆಯನ್ನು ಮೊದಲು ಹುರಿದು ಬಳಿಕ ಹಲ್ವಾ ತಯಾರಿಸಲಾಗುತ್ತದೆ. ಬನ್ನಿ, ಈ ಹೆಸರುಬೇಳೆ ಹಲ್ವಾ (Moong Dal Halwa Recipe) ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.
ಬಹುತೇಕರು ಊಟದ ನಂತರ ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಇದಲ್ಲದೆ, ಮನೆಗೆ ಬರುವ ಅತಿಥಿಗಳಿಗೆ ಊಟದ ಬಳಿಕ ಸಿಹಿಯನ್ನು ಬಡಿಸುವುದು ಸಾಮಾನ್ಯ. ಪ್ರಸ್ತುತ, ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಸಿಹಿತಿಂಡಿಗಳು ಲಭ್ಯವಿದೆ. ಆದರೆ, ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳ ರುಚಿ ವಿಭಿನ್ನ. ಅದರಲ್ಲೂ, ಮನೆಯಲ್ಲಿ ತಯಾರಿಸಿದ ಹೆಸರುಬೇಳೆ ಹಲ್ವಾ ತುಂಬಾ ರುಚಿಕರವಾಗಿರುತ್ತದೆ. ಹೆಸರುಬೇಳೆ ಹಲ್ವಾ ಎಲ್ಲಾ ಕಾಲದಲ್ಲೂ ಸುಲಭವಾಗಿ ಲಭ್ಯ. ಆದರೂ, ಕೆಲವರು ಹೆಸರುಬೇಳೆ ಹಲ್ವಾ ಮಾಡಲು ಸ್ವಲ್ಪ ಹಿಂದೇಟು ಹಾಕುತ್ತಾರೆ. ಇದು ಕಷ್ಟ ಎಂಬುದು ಹಲವರ ಮಾತು. ಆದರೆ, ನಾವಿಂದು ನಿಮಗೆ ಹೆಸರುಬೇಳೆ ಹಲ್ವಾವನ್ನು ಸುಲಭವಾಗಿ ಮಾಡುವ ಟ್ರಿಕ್ ತಿಳಿಸಿಕೊಡುತ್ತೇವೆ.

ಹೆಸರು ಬೇಳೆ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು
• ಹೆಸರು ಬೇಳೆ - 2 ಕಪ್
• ಸಕ್ಕರೆ ಅಥವಾ ಬೆಲ್ಲ - 1 ಕಪ್
• ಹಾಲು - 2 ಕಪ್
• ತುಪ್ಪ - 1/2 ಕಪ್
• ಗೋಡಂಬಿ - ಸ್ವಲ್ಪ
• ದ್ರಾಕ್ಷಿ - ಸ್ವಲ್ಪ
• ಬಾದಾಮಿ - ಸ್ವಲ್ಪ
• ಏಲಕ್ಕಿ ಪುಡಿ - 1/2 ಚಮಚ
ಹೆಸರು ಬೇಳೆ ಹಲ್ವಾ ಮಾಡುವ ವಿಧಾನ
ಮೊದಲು, 2 ದೊಡ್ಡ ಕಪ್ ಹೆಸರು ಬೇಳೆಯನ್ನು ತೆಗೆದುಕೊಂಡು ಎರಡು ಬಾರಿ ಚೆನ್ನಾಗಿ ತೊಳೆಯಿರಿ. ಬಳಿಕ ನೀರು ಹೋಗುವಂತೆ ಮಾಡಿ. ಈಗ ಅದನ್ನು ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ಈಗ ಬೇಳೆಯನ್ನು ತಣ್ಣಗಾಗಲು ಬಿಡಿ. ಬಳಿಕ ಹುರಿದ ಹೆಸರುಕಾಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. ಒರಟಾಗಿ ರುಬ್ಬಿದ ಬೇಳೆಯಿಂದ ಹಲ್ವಾ ಮಾಡಿದರೆ ಹೆಚ್ಚು ರುಚಿಕರವಾಗಿರುತ್ತದೆ.
ಈಗ ಬಾಣಲೆಗೆ ರುಬ್ಬಿದ ಹೆಸರು ಬೇಳೆಯನ್ನು ಹಾಕಿ ಸ್ವಲ್ಪ ಹುರಿಯಿರಿ. ಬಳಿಕ ಬೇಳೆಗೆ ಸುಮಾರು 1 ಕಪ್ ತುಪ್ಪವನ್ನು ಹಾಕಿ, ಅದು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬೇಳೆ ಚೆನ್ನಾಗಿ ಹುರಿದ ಬಳಿಕ, ಅದಕ್ಕೆ ನೀರು ಸೇರಿಸಿ ಮತ್ತು ಸ್ವಲ್ಪ ಮಿಕ್ಸ್ ಮಾಡಿ ದಪ್ಪವಾಗಿಸಿ. ಈಗ ಹಲ್ವಾಗೆ ಅರ್ಧ ಕಪ್ ಮಾವಾ ಹಾಕಿ. ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ, ಸುಮಾರು 1 ಕಪ್ ಸಕ್ಕರೆ ಬೆರೆಸಿ. ಈಗ ಹಲ್ವಾವನ್ನು ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಹಾಗೆಯೇ ಸ್ವಲ್ಪ ಸಮಯ ಹೆಸರು ಬೇಳೆ ಹಲ್ವಾವನ್ನು ಮಿಕ್ಸ್ ಮಾಡುತ್ತಾ ಬೇಯಿಸಿ. ಹಲ್ವಾ ಎಣ್ಣೆ ಬಿಡಲು ಪ್ರಾರಂಭಿಸಿದಾಗ, ಗ್ಯಾಸ್ ಆಫ್ ಮಾಡಿ.
4 ದಿನ ಇಟ್ಟರೂ ಕೆಡುವುದಿಲ್ಲ
ಈಗ ಕತ್ತರಿಸಿದ ಗೋಡಂಬಿ, ಬಾದಾಮಿ ಮತ್ತು ಪಿಸ್ತಾಗಳನ್ನು ಹಲ್ವಾ ಮೇಲೆ ಹಾಕಿ ಅಲಂಕರಿಸಿ. ಇಷ್ಟು ಮಾಡಿದರೆ ಸಾಕು, ರುಚಿಕರವಾದ ಹೆಸರುಬೇಳೆ ಹಲ್ವಾ ಸಿದ್ಧವಾಗುತ್ತದೆ. ಹೆಸರುಕಾಳು ಹಲ್ವಾ ಮಳೆಗಾಲದಲ್ಲಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ವಿಶೇಷವೆಂದರೆ, ಹೆಸರುಕಾಳು ಹಲ್ವಾ 3 ರಿಂದ 4 ದಿನಗಳವರೆಗೆ ಕೆಡುವುದಿಲ್ಲ. ನೀವು ಅದನ್ನು ಫ್ರಿಡ್ಜ್ ನಲ್ಲಿಟ್ಟು ಸುಲಭವಾಗಿ ಬಿಸಿ ಮಾಡಿ ತಿನ್ನಬಹುದು. ಮನೆಗೆ ಬರುವ ಅತಿಥಿಗಳಿಗೆ ಇದನ್ನು ಬಿಸಿಬಿಸಿಯಾಗಿ ಬಡಿಸಬಹುದು.



Click it and Unblock the Notifications
