Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ರೊಟ್ಟಿ, ಚಪಾತಿ, ಊಟಕ್ಕೆ ಪನೀರ್ ಮಸಾಲ: ಸಿಂಪಲ್ ರೆಸಿಪಿ ಸೂಪರ್ ಟೇಸ್ಟ್!
ಮನೆಯಲ್ಲಿ ಚಪಾತಿ, ಪೂರಿ, ದೋಸೆ, ಇಡ್ಲಿ ಸೇರಿದಂತೆ ವಿಶೇಷ ಖಾದ್ಯಗಳಾದ ಪರೋಠ, ರೊಟ್ಟಿ ಅಂತಹ ಖಾದ್ಯ ಮಾಡಿದಾಗ ಅದನ್ನು ಸವಿಯಲು ರುಚಿ ರುಚಿಯ ಸೈಡ್ ಡಿಷ್ ಮಾಡುವುದು ಸಾಮಾನ್ಯ. ಹಾಗೆ ಇಂತಹ ರುಚಿ ಸವಿಯಲು ನಾವಿಂದು ಪನೀರ್ ಮಸಾಲ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಪನೀರ್ ಮಸಾಲ ನೀವು ಎಲ್ಲಾ ತಿಂಡಿಯೊಂದಿಗೆ ಹಾಗೆ ಊಟದೊಂದಿಗೂ ಸಹ ಸವಿಯಲು ಒಂದು ಖಾದ್ಯ.
ನೀವು ಪನೀರ್ನಿಂದ ಮಾಡುವ ಹಲವು ಖಾದ್ಯಗಳ ಮಾಡಿ ಸವಿದಿರುತ್ತೀರಿ. ಪನೀರ್ನಲ್ಲಿ ಸಿಗುವಂತಹ ಅಂಶಗಳು ನಿಮಗೆ ಬಹಳ ಹಾಗೆ ದೇಹದ ಪ್ರೋಟೀನ್ ಪೂರೈಕೆಗೆ ಉತ್ತಮ. ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ಹಾಲಿನಿಂದ ತಯರಿಸುವ ಅಂಶವಾಗಿರುವುದರಿಂದ ನಿಮ್ಮ ದೇಹದ ಪ್ರಮುಖ ಪೋಷಕಾಂಶ ಪಡೆಯುವ ವಿಧಾನವಿದು.

ಸದ್ಯ ನೀವು ಪನೀರ್ನಿಂದ ಹಲವು ರೀತಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಹಾಗೆ ನಾವಿಂದು ರುಚಿ ರುಚಿಯಾದ ಪನೀರ್ ಮಸಾಲ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಈ ಪನೀರ್ ಮಸಾಲ ಎಲ್ಲಾ ಖಾದ್ಯದೊಂದಿಗೆ ಬಹಳ ರುಚಿ ನೀಡಲಿದೆ. ಹಾಗೆ ಈ ಪನೀರ್ ಮಸಾಲವು ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಬಹಳ ಇಷ್ಟಪಟ್ಟು ಸವಿಯುಯತ್ತಾರೆ.
ಪನೀರ್ ಮಸಾಲ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಪನೀರ್ ಮಸಾಲ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಪನೀರ್ - 200 ಗ್ರಾಂ
- ಖಾರದ ಪುಡಿ
- ಅರಿಶಿನ ಪುಡಿ
- ಪಲಾವ್ ಎಲೆ
- ದಾಲ್ಚಿನ್ನಿ
- ಏಲಕ್ಕಿ
- ಲವಂಗ
- ಈರುಳ್ಳಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಒಣ ಮೆಣಸು
- ಧನಿಯಾ ಪುಡಿ
- ಗರಂ ಮಸಾಲ ಪುಡಿ
- ಟೊಮೆಟೊ
- ಕೊತ್ತಂಬರಿ ಸೊಪ್ಪು
- ಮೊಸರು
- ಉಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಪನೀರ್ ಮಸಾಲ ಮಾಡುವ ಸುಲಭದ ವಿಧಾನವೇನು?
ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಖಾರದ ಪುಡಿ, ಅರಶಿಣ, ಉಪ್ಪು ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿಕೊಂಡು ಬಳಿಕ ಕತ್ತರಿಸಿಕೊಂಡಿರುವ ಪನೀರ್ ಅನ್ನು ಇದಕ್ಕೆ ಹಾಕಿ ಫ್ರೈ ಮಾಡಿಕೊಳ್ಳಿ.
ಪನೀರ್ ಸ್ವಲ್ಪ ಕ್ರಿಸ್ಪಿಯಾಗಬೇಕು. ನಂತರ ಪನೀರ್ ತೆಗೆದು ಮತ್ತೊಂದು ಪ್ಲೇಟ್ಗೆ ತೆಗೆದಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಪಲಾವ್ ಎಲೆ ಚಕ್ಕೆ, ಏಲಕ್ಕಿ, ಲವಂಗ ಸೋಂಪು ಹಾಕಿ ಬಿಸಿ ಮಾಡಿ. ಅನಂತರ ಈರುಳ್ಳಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹುರಿಯುವಾಗ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ.
ಇದಕ್ಕೆ ಅರಶಿಣ, ಖಾರದ ಪುಡಿ, ಗರಂ ಮಸಾಲ, ಧನಿಯಾ ಪುಡಿ ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಒಲೆ ಸಣ್ಣದಾಗಿ ಇಟ್ಟುಕೊಂಡು ಟೊಮೆಟೋ ಹೆಚ್ಚಿ ಅದನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ಬಳಿಕ ಅದಕ್ಕೆ ಅರ್ಧ ಕಪ್ ಮೊಸರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ರುಬ್ಬಿದ ಪೇಸ್ಟ್ ಅನ್ನು ಈ ಬಾಣಲೆಗೆ ಹಾಕಿ ಮಿಕ್ಸ್ ಮಾಡಿ.
ಹೀಗೆ ಈ ಮಸಾಲೆಯನ್ನು ಮುಚ್ಚಳ ಮುಚ್ಚಿ 2 ನಿಮಿಷ ಬಿಡಿ. ಈಗ ಗಟ್ಟಿಯಾದ ಮಸಾಲೆಗೆ ಅರ್ಧ ಕಪ್ ನೀರು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಮತ್ತೆ 2 ನಿಮಿಷ ಫ್ರೈ ಆಗಲು ಬಿಡಿ. ಈಗ ಫ್ರೈ ಮಾಡಿಕೊಂಡಿದ್ದ ಪನೀರ್ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.



Click it and Unblock the Notifications
