Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಬಾಯಲ್ಲಿ ನೀರು ತರಿಸುವ ಈ ಹೆಸರುಬೇಳೆ ಕೋಸಂಬರಿ ಮಾಡಿ..! 5 ನಿಮಿಷ ಟೈಮ್ ಸಾಕು..!
ಊಟದ ಜೊತೆಗೆ ಚಟ್ನಿ, ಉಪ್ಪಿನಕಾಯಿ, ಪಲ್ಯ, ಕರಿದ ತಿಂಡಿಗಳ ಸವಿಯುವುದು ಸಾಮಾನ್ಯವಾಗಿ ನಾವು ನೋಡಿರುತ್ತೇವೆ. ಆದ್ರೆ ಊಟದ ಜೊತೆಗೆ ಒಂದು ಕೋಸಂಬರಿ ಇದ್ದರೆ ಎಷ್ಟು ರುಚಿ ಇರುತ್ತೆ ಅನ್ನೋದು ನಾವು ನೋಡಿದ್ದೇವೆ. ಶುಭ ಸಮಾರಂಭದಲ್ಲಿ ಈ ಕೋಸಂಬರಿ ಇಲ್ಲದೇ ಯಾವ ಊಟವೂ ಮುಗಿಯೋದಿಲ್ಲ. ಕೋಸಂಬರಿ ಅನ್ನೋದು ಶುಭ ಸಂಕೇತದ ಜೊತೆಗೆ ಸೇರಿಕೊಂಡಿದೆ.
ಕೆಲವರಿಗೆ ಕೋಸಂಬರಿ ಅಂದ್ರೆ ಬಹಳ ಇಷ್ಟ. ಪಲ್ಯದಂತೆ ಅವರು ಕೋಸಂಬರಿ ಸವಿಯಲು ಮುಂದಾಗುತ್ತಾರೆ. ಕೋಸಂಬರಿ ಮಕ್ಕಳಿಗೂ ಕೂಡ ಅತ್ಯಂತ ರುಚಿ ನೀಡುತ್ತೆ. ಹೀಗಾಗಿ ಎಲ್ಲರಿಗೂ ಕೋಸಂಬರಿ ಸವಿಯೋದು ಅಂದ್ರೆ ಎಲ್ಲಿಲ್ಲದ ಇಷ್ಟ. ಇನ್ನು ಕೋಸಂಬರಿಯಲ್ಲಿ ಹತ್ತಾರು ರೀತಿಯ ಖಾದ್ಯ ಮಾಡುತ್ತಾರೆ. ಒಂದೊಂದು ವಿಧ ಕೂಡ ಒಂದೊಂದು ರೀತಿಯ ರುಚಿಯಲ್ಲಿರಲಿದೆ.

ಕೋಸಂಬರಿಗೆ ಹಾಕುವ ಪ್ರತಿಯೊಂದು ವಸ್ತುಗಳು ಕೂಡ ರುಚಿ ನೀಡುತ್ತವೆ. ನಾವಿಂದು ಕೋಸಂಬರಿಯಲ್ಲಿ ಅತ್ಯಂತ ರುಚಿಯ ಹೆಸರು ಬೇಳೆ ಕೋಸಂಬರಿ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಹೆಸರು ಬೇಳೆ ಕೋಸಂಬರಿ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಇದಕ್ಕೆ ಹಸಿ ಜೋಳ, ಕಡಲೆ, ಕ್ಯಾರೆಟ್, ಹೆಸರು ಬೇಳೆ ಹಾಕಿ ಮಾಡುವುದರಿಂದ ರುಚಿ ಅದ್ಭುತವಾಗಿರುತ್ತೆ.
ಹಾಗಾದ್ರೆ ಈ ಹೆಸರು ಬೇಳೆ ಕೋಸಂಬರಿ ಮಾಡುವುದು ಹೇಗೆ? ಹೆಸರು ಬೇಳೆ ಕೋಸಂಬರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಹೇಗೆ ಮಾಡಿದರೆ ಅದರ ರುಚಿ ಅದ್ಭುತವಾಗಿ ಬರಲಿದೆ? ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆಸರು ಬೇಳೆ ಕೋಸಂಬರಿ ಮಾಡಲು ಯಾವೆಲ್ಲಾ ಪದಾರ್ಥಗಳು
- ಹೆಸರು ಬೇಳೆ - 100 ಗ್ರಾಂ
- ಸೌತೆಕಾಯಿ - 2
- ಸಾಸಿವೆ
- ಕರಿಬೇವಿನ ಎಲೆ
- ಕೆಂಪು ಮೆಣಸಿನಕಾಯಿ
- ತುರಿದ ತೆಂಗಿನಕಾಯಿ
- ಕೊತ್ತಂಬರಿ ಸೊಪ್ಪು
- ದಾಳಿಂಬೆ
- ಹಸಿ ಜೋಳ
- ಎಣ್ಣೆ
- ರುಚಿಗೆ ಉಪ್ಪು
ಹೆಸರು ಬೇಳೆ ಕೋಸಂಬರಿ ಮಾಡುವುದು ಹೇಗೆ?
ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಹೆಸರು ಬೇಳೆ ಹಾಕಿ ಅದಕ್ಕೆ ನೀರು ಹಾಕಿ ಚೆನ್ನಾಗಿ ತೊಳೆದು ನೆನೆಸಿಡಬೇಕು. 30 ನಿಮಿಷ ನೆನೆಸಿ ಇಟ್ಟರೆ ಸಾಕು. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಕರಿಬೇವು, ಒಣ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಈ ಒಗ್ಗರಣೆ ಬದಿಗಿಟ್ಟುಕೊಳ್ಳಿ.
ಇನ್ನೊಂದು ಕಡೆ ಹೆಸರುಬೇಳೆಯನ್ನು ನೀರಿನಿಂದ ತೆಗೆದು 2 ಸೌತೆಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಒಗ್ಗರಣೆಯನ್ನು ಕೂಡ ಹಾಕಿಕೊಳ್ಳಿ. ನಂತರ ಇದಕ್ಕೆ ಹಸಿ ಜೊಳ, ತೆಂಗಿನಕಾಯಿ ತುರಿ, ದಾಳಿಂಬೆ ಬೀಜ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಎಲ್ಲಾ ಮಸಾಲೆಗಳು ಬೆರೆಯುವಂತೆ ಮಿಕ್ಸ್ ಮಾಡಿಕೊಳ್ಳಿ.
ಕೊನೆಯದಾಗಿ ಇದಕ್ಕೆ ನಿಂಬೆ ಹುಳಿ ರಸವನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ಹೆಸರು ಬೇಳೆ ಕೋಸಂಬರಿ ನಿಮ್ಮ ಮುಂದೆ ಇರಲಿದೆ. ಈ ಕೋಸಂಬರಿಯನ್ನು ಎಲ್ಲರು ಬಾಯಿ ಚಪ್ಪರಿಸಿ ಸವಿಯುತ್ತಾರೆ. ಮನೆಯಲ್ಲಿ ಯಾವುದಾದರು ಪೂಜೆ, ಕಾರ್ಯಕ್ರಮ ಇದ್ದರೆ ಈ ಕೋಸಂಬರಿ ತಪ್ಪದೆ ಮಾಡಿ ನೋಡಿ. ಇಲ್ಲವೆ ಶುಕ್ರವಾರ ಪೂಜೆ ಮಾಡುವಾಗಲು ಇದನ್ನು ಮಾಡಿ ನಂತರ ನೈವೇದ್ಯ ಮಾಡಿ ಸವಿಯಬಹುದು. ನೀವು ಕೂಡ ಒಮ್ಮೆ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
