Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
Hakka Noodles: ಇದು ಪಕ್ಕಾ ರೆಸ್ಟೋರೆಂಟ್ ಸ್ಟೈಲ್.. ಹಕ್ಕಾ ನೂಡಲ್ಸ್ ಹೀಗೂ ಮಾಡಬಹುದು! ಹೇಗೆ ಗೊತ್ತಾ?
ನೂಡಲ್ಸ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲೋ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಇಷ್ಟ ಇರಲ್ಲ. ಮಕ್ಕಳು ಮತ್ತು ವಯಸ್ಕರಿಗಂತೂ ಇದು ಹಾಟ್ ಫೇವರಿಟ್. ನೀವು ಮನೆಯಲ್ಲಿ ರೆಸ್ಟೋರೆಂಟ್‌ನಂತೆ ರುಚಿಕರವಾದ ನೂಡಲ್ಸ್ ಮಾಡಬಹುದು. ಮಿಸ್ ಮಾಡದೇ ಈ ಸ್ಟೋರಿ ಓದಿ. ಹೌದು, ನೀವು ಮನೆಯಲ್ಲಿ ರುಚಿಕರವಾದ ಹಕ್ಕಾ ನೂಡಲ್ಸ್ (Hakka Noodles) ತಯಾರಿಬಹುದು. ಇದಕ್ಕೆ ಹೆಚ್ಚು ಸಮಯ ಬೇಕಿಲ್ಲ. ಮನೆಯಲ್ಲಿರುವ ವಸ್ತು ಬಳಸಿ, ಈ ರುಚಿಕರವಾದ ನೂಡಲ್ಸ್ (Noodles) ಮಾಡಬಹುದು. ಇನ್ನೇಕೆ ತಡ.. ಬನ್ನಿ, ಎಲ್ಲರಿಗೂ ಇಷ್ಟವಾದ ಹಕ್ಕಾ ನೂಡಲ್ಸ್ ಹೇಗೆ ತಯಾರಿಸಬೇಕು ಅಂತ ನೋಡೋಣ.
ಇದು ಸುಲಭ ಮತ್ತು ತ್ವರಿತ ರೆಸಿಪಿ (ಪಾಕವಿಧಾನ) ಆಗಿದೆ. ಯಾರೂ ಬೇಕಾದರೂ ತುಂಬಾ ಸುಲಭವಾಗಿ ಮಾಡಬಹುದು. ಮಕ್ಕಳು ಮತ್ತು ವಯಸ್ಕರು ಇಬ್ಬರೂ ಹಕ್ಕಾ ನೂಡಲ್ಸ್ ಇಷ್ಟಪಡುತ್ತಾರೆ. ಇದು ಪಾರ್ಟಿಗಳು, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕೆ ಸೂಕ್ತವಾಗಿದೆ. ಇದಕ್ಕೆ ಕೆಲವು ಹಂತಗಳು ಮತ್ತು ಸಲಹೆಗಳನ್ನು ಫಾಲೋ ಮಾಡಬೇಕು. ಇದು ನೂಡಲ್ಸ್‌ನ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ನೀವು ವಿಭಿನ್ನ ಮತ್ತು ರುಚಿಕರವಾದ ರೆಸಿಪಿ ಮಾಡಲು ಬಯಸಿದರೆ, ಖಂಡಿತವಾಗಿಯೂ ಇದನ್ನು ಒಮ್ಮೆ ಟ್ರೈ ಮಾಡಿ.

ಹಕ್ಕಾ ನೂಡಲ್ಸ್ ತಯಾರಿಸಲು ಬೇಕಾಗುವ ಪದಾರ್ಥಗಳು
ಅಡುಗೆ ಎಣ್ಣೆ - 1/4 ಕಪ್
ಬೇಯಿಸಿದ ನೂಡಲ್ಸ್ - 2 ಕಪ್
ಈರುಳ್ಳಿ - 1/4 ಕಪ್ (ಸಣ್ಣಗೆ ಕತ್ತರಿಸಿ)
ಬೆಳ್ಳುಳ್ಳಿ - 2 ಚಮಚ (ಸಣ್ಣಗೆ ಕತ್ತರಿಸಿ)
ಮೆಣಸಿನಕಾಯಿ - 8 (ಮುರಿದ)
ಕ್ಯಾರೆಟ್ - 1/2 ಕಪ್
ಎಲೆಕೋಸು - 1/4 ಕಪ್ (ಕತ್ತರಿಸಿದ)
ಕ್ಯಾಪ್ಸಿಕಂ - 1/2 ಕಪ್ (ಸಣ್ಣಗೆ ಕತ್ತರಿಸಿ)
ಸೋಯಾ ಸಾಸ್ - 1 ಟೀಸ್ಪೂನ್
ಕಪ್ಪು ಮೆಣಸಿನ ಪುಡಿ - ಒಂದು ಚಿಟಿಕೆ
ಸ್ಪ್ರಿಂಗ್ ಆನಿಯನ್ (ಈರುಳ್ಳಿ ಸೊಪ್ಪು) - 2 ಟೇಬಲ್ ಚಮಚ (ಸಣ್ಣಗೆ
ಕತ್ತರಿಸಿ)
ರುಚಿಗೆ ತಕ್ಕಷ್ಟು ಉಪ್ಪು
ಹಕ್ಕಾ ನೂಡಲ್ಸ್ ತಯಾರಿಸುವ ವಿಧಾನ
ಮೊದಲು, ಒಂದು ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ. ಎಣ್ಣೆಯಿಂದ ಸಣ್ಣ ಹೊಗೆ ಬರಲು ಪ್ರಾರಂಭಿಸುವವರೆಗೆ ಹೆಚ್ಚಿನ ಉರಿಯಲ್ಲಿ ಬಿಸಿ ಮಾಡಿ. ಈಗ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ. ಈಗ ಪೀಸ್ ಮಾಡಿರುವ ಒಣ ಮೆಣಸಿನಕಾಯಿ ಬೆರೆಸಿ. ಇದಾದ ಬಳಿಕ ಉರಿಯನ್ನು (ಬೆಂಕಿ) ಆಫ್ ಮಾಡಿ. ಎಣ್ಣೆಯನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ಈರುಳ್ಳಿಯ ಬಿಳಿ ಭಾಗಗಳು, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಒಣಗಿದ ಮೆಣಸಿನಕಾಯಿಗಳನ್ನು ಸೇರಿಸಿ ಮತ್ತು ಹೆಚ್ಚಿನ ಉರಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಹುರಿಯಿರಿ. ಹೀಗೆ ಮಾಡಿದರೆ ಸುವಾಸನೆ ಬರುತ್ತದೆ.
ಇದರ ನಂತರ, ಕಟ್ ಮಾಡಿರುವ ಕ್ಯಾರೆಟ್ ತುಂಡುಗಳು, ತುರಿದ ಎಲೆಕೋಸು ಮತ್ತು ಕತ್ತರಿಸಿದ ಕ್ಯಾಪ್ಸಿಕಂ ಹಾಕಿ. ಮತ್ತು 1 ರಿಂದ 2 ನಿಮಿಷಗಳ ಕಾಲ ಹೆಚ್ಚಿನ ಹುರಿಯಿರಿ. ಬಳಿಕ ಅದಕ್ಕೆ ಬೇಯಿಸಿದ ನೂಡಲ್ಸ್ ಮಿಶ್ರಣ ಮಾಡಿ. ಜೊತೆಗೆ ಸೋಯಾ ಸಾಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಚೆನ್ನಾಗಿ ಬೆರೆಸಿ 1 ರಿಂದ 2 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಬೇಯಿಸಿ. ಇದಕ್ಕೆ ಕರಿಮೆಣಸಿನ ಪುಡಿ ಹಾಕಿ. ಜೊತೆಗೆ ಮೊದಲೇ ತಯಾರಿಸಿದ 2 ಟೀ ಚಮಚ ಮೆಣಸಿನ ಎಣ್ಣೆಯನ್ನು ಬಳಸಿ. ಮತ್ತು ನೂಡಲ್ಸ್ ನೊಂದಿಗೆ ಚೆನ್ನಾಗಿ ಬೆರೆಸಿ. ಸ್ಪ್ರಿಂಗ್ ಆನಿಯನ್ ಅನ್ನು ಮೇಲೆ ಹಾಕಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರ ಮಾಡಿ. ಇಷ್ಟು ಮಾಡಿದರೆ, ಬಿಸಿ ಬಿಸಿ ಹಕ್ಕಾ ನೂಡಲ್ಸ್ ಸವಿಯಲು ಸಿದ್ಧವಾಗುತ್ತದೆ.



Click it and Unblock the Notifications
