Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮದುವೆ ಮನೆ ರುಚಿಯ ರಸಂ ಮನೆಯಲ್ಲೇ ಮಾಡಿ: 4 ವಸ್ತು ಇದ್ರೆ ಸಾಕು!
ಈಗ ಮದುವೆಯ ಸೀಸನ್ ನಡೆಯುತ್ತಿದೆ. ಎಲ್ಲಿ ನೋಡಿದ್ರು ಮದುವೆ ಊಟದ ಸುದ್ದಿಯೇ. ಅದ್ರಲ್ಲೂ ಮದುವೆ ಮನೆಯ ಊಟದ ಖಾದ್ಯ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಕೆಲವರ ಬಾಯಲ್ಲಿ ನೀರು ತರಿಸಲಿದೆ. ಹಾಗೆ ಊಟದ ಜೊತೆಗೆ ಮದುವೆ ಮನೆಯ ಊಟದ ರುಚಿ ಸವಿಯುವುದು ಅಂದರೆ ಎಲ್ಲಿಲ್ಲದ ಪ್ರೀತಿ. ಹಾಗೆ ಮದುವೆ ಮನೆಯಲ್ಲಿ ಮಾಡುವ ಕೆಲವೊಂದು ಖಾದ್ಯಗಳನ್ನು ನಾವು ಮನೆಯಲ್ಲೇ ಮಾಡಿ ಸವಿಯಲು ಮುಂದಾಗುವುದು ಕೂಡ ನೋಡುತ್ತೇವೆ.
ಅಂತಹ ಖಾದ್ಯದಲ್ಲಿ ಮುಖ್ಯವಾಗಿ ಕೆಲವೊಂದು ಪಲ್ಯಗಳು, ಪಾಯಸ, ಹಾಗೆ ಸಾಂಬಾರ್ ಹಾಗೂ ರಸಂ ಮಾಡುವುದು ಹೆಚ್ಚು. ಮದುವೆ ಮನೆಯ ಈ ರಸಂ ಹಾಗೂ ಸಾಂಬಾರ್ ಘಮ ಘಮ ಎನ್ನುವಂತಹ ಸುವಾಸನೆಯ ಜೊತೆಗೆ ಅದ್ಭುತ ರುಚಿ ಹೊಂದಿರಲಿದೆ. ಹೀಗಾಗಿ ಎಲ್ಲರಿಗೂ ಮದುವೆ ಮನೆ ರಸಂ ಅಂದರೆ ಬಹಳ ಇಷ್ಟವಾಗುತ್ತೆ.

ಘಮ ಘಮಿಸುವ ಈ ರಸಂ ಮಾಡಿದ್ರೆ ಮನೆ ಮಂದಿ ಎಲ್ಲಾ ಮದುವೆ ಮನೆಯ ರುಚಿಯಲ್ಲಿ ಸವಿಯುವುದು ನೋಡಬಹುದು. ಹಾಗೆ ಈ ರಸಂ ಅನ್ನು ಮನೆಯಲ್ಲಿ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಮದುವೆ ಮನೆ ರುಚಿಯಲ್ಲಿ ಈ ಘಮ ಘಮಿಸುವ ರಸಂ ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ಮದುವೆ ಮನೆ ರುಚಿಯ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮದುವೆ ಮನೆ ರುಚಿಯ ರಸಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಟೊಮೆಟೋ
- ಹಸಿ ಮೆಣಸು
- ಒಣ ಮೆಣಸು
- ತೆಂಗಿನ ಹಾಲು
- ತೊಗರಿ ಬೇಳೆ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಉಪ್ಪು
- ಎಣ್ಣೆ
- ಜೀರಿಗೆ
- ಸಾಸಿವೆ
ಮದುವೆ ಮನೆ ರುಚಿಯ ರಸಂ ಮಾಡುವುದು ಹೇಗೆ?
ಮೊದಲಿಗೆ ತೊಗರಿ ಬೇಳೆಯನ್ನು ಕುಕ್ಕರ್‌ನಲ್ಲಿ ಬೇಯಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಅದರ ನೀರು ಮಾಡಿಟ್ಟುಕೊಳ್ಳಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ನಂತರ ಎಣ್ಣೆ ಹಾಕಿಕೊಂಡು ನಂತರ ಹಸಿ ಮೆಣಸು, ಟೊಮೆಟೋ, ಹಾಗೆ ಒಂದು ಬೌಲ್‌ನಲ್ಲಿ ಹಾಕಿರುವ ಹುಣಸೆ ಹುಳಿಯ ರಸವನ್ನು ಕೂಡ ಹಾಕಿ. ನಂತರ ಈಗ ತೊಗರಿ ಬೇಳೆಯ ರಸವನ್ನು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ.
ಈಗ ಸಾರಿನ ಪುಡಿಯನ್ನು ಕೂಡ ತೆಗೆದುಕೊಂಡು ಇದಕ್ಕೆ ಹಾಕಿಕೊಳ್ಳಿ. ನಂತರ ಒಂದು ಕಪ್ ತೆಂಗಿನಹಾಲು ಮಾಡಿಕೊಂಡು ಇದಕ್ಕೆ ಹಾಕಿಕೊಂಡು ಬಳಿಕ ಎಷ್ಟು ತೆಳುವಾಗಿ ಈ ಸಾರು ಬೇಕು ಅನ್ನೋದರ ಮೇಲೆ ನೀರು ಹಾಕಿಕೊಂಡು ಮಿಕ್ಸ್ ಮಾಡಿ 3 ನಿಮಿಷ ಕುದಿಯಲು ಬಿಡಿ. ಈಗ ಸ್ವಲ್ಪ ಬೆಲ್ಲ ಕೂಡ ಹಾಕಿಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ಕೊನೆಯಲ್ಲಿ ಇಂಗು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ನಂತರ ಒಗ್ಗರಣೆಯನ್ನು ಸಾರಿಗೆ ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಮದುವೆ ರುಚಿಯ ತಿಳಿಸಾರು ರೆಡಿಯಾಗುತ್ತದೆ. ನೀವು ಕೂಡ ಈ ರಸಂ ಮಾಡಿ ಸವಿದು ನೋಡಿ. ಮನೆಯಲ್ಲೇ ಮದುವೆ ಮನೆ ಸ್ವಾದ ಆನಂದಿಸಿ. ಇದೇ ವಿಧಾನದಲ್ಲಿ ಮದುವೆ ಮನೆಯಲ್ಲೂ ರಸಂ ಮಾಡಲಾಗುತ್ತೆ. ಊಟದ ಜೊತೆಗೆ ಈ ರಸಂ ಸವಿಯಲು ಬಹಳ ರುಚಿಯಾಗಲಿದೆ.



Click it and Unblock the Notifications
