Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕೋಸಿನಿಂದ ಹೊಸ ತಿಂಡಿ ಮಾಡಿ ನೋಡಿ..! ಈ ರೀತಿ ತಿಂಡಿ ನೀವೆಂದು ಮಾಡಿರಲ್ಲ!
ಊಟದೊಂದಿಗೆ ಸವಿಯಲು ನೀವು ರುಚಿ ರುಚಿಯ ಎಲೆಕೋಸಿನ ಪಲ್ಯ ಮಾಡಿರುತ್ತೀರಿ. ಕೋಸಿನ ಪಲ್ಯ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಮದುವೆ ಮನೆಯಲ್ಲಿ, ಶುಭ ಸಮಾರಂಭದಲ್ಲಿ ಮಾಡುವಂತಹ ಕೋಸು ಪಲ್ಯದ ರುಚಿಗೆ ಎಲ್ಲರ ಬಾಯಲ್ಲೂ ನೀರು ಬರೋದು ಖಚಿತ. ಹಾಗೆ ಕೋಸಿನಿಂದ ಹಲವು ಬಗೆಯ ಖಾದ್ಯಗಳ ಮಾಡಿ ಸವಿಯೋದು ಸಹ ಇದೆ. ಅದ್ರಲ್ಲೂ ನಾವಿಂದು ರುಚಿ ರುಚಿಯ ಬೆಳಗಿನ ತಿಂಡಿ ಮಾಡೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಕೋಸಿನಿಂದ ಅದ್ಭುತ ರುಚಿಯ ತಿಂಡಿಯೊಂದನ್ನು ಮಾಡಬಹುದು. ಅದ್ರಲ್ಲೂ ಸುಲಭವಾಗಿ ಬೆಳಗ್ಗಿನ ತಿಂಡಿಗೆ ಸವಿಯಲು ತರಕಾರಿಗಳ ಬಳಸಿಕೊಂಡು ತಿಂಡಿ ಮಾಡಬಹುದು. ಹಾಗಾದ್ರೆ ಈ ತಿಂಡಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ನೀವು ಬೆಳಗ್ಗೆ ತಿಂಡಿಗೆ ವಿಶೇಷವಾಗಿ ಏನಾದರು ಮಾಡಿ ಸವಿಯಲು ಇಷ್ಟಪಡುವ ಮುಂದಿ ಆಗಿದ್ದರೆ ಇಂದು ನಾವು ಕೋಸಿನಿಂದ ಮಾಡುವ ಹೊಸ ರೀತಿಯ ತಿಂಡಿ ಕುರಿತು ತಿಳಿದುಕೊಳ್ಳೋಣ.

ಕೋಸನ್ನು ಬಳಸಿ ಬೆಳಗ್ಗೆ ತಿಂಡಿಗೆ ಈ ರೀತಿಯ ರುಚಿ ರುಚಿ ತಿಂಡಿ ಮಾಡಬಹುದು. ಹಾಗಾದ್ರೆ ಈ ತಿಂಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೋಸು ಬಳಸಿ ಹೊಸ ತಿಂಡಿ ಮಾಡಲು ಯಾವೆಲ್ಲಾ ವಸ್ತು
ಬೇಕು?
- ಎಲೆಕೋಸು
- ಈರುಳ್ಳಿ
- ಹಸಿ ಮೆಣಸಿನ ಕಾಯಿ
- ಕರಿಬೇವಿನ ಸೊಪ್ಪು
- ಹಸಿ ಕೊತಂಬರಿ ಸೊಪ್ಪು
- ಖಾರದ ಪುಡಿ
- ಗರಂ ಮಸಾಲ
- ರುಚಿಗೆ ತಕ್ಕಷ್ಟು ಉಪ್ಪು
- ಜೀರಿಗೆ
- ಜೋಳದ ಹಿಟ್ಟು
- ಕಡಲೆ ಹಿಟ್ಟು
ಕೋಸು ಬಳಸಿ ಹೊಸ ತಿಂಡಿ ಮಾಡುವುದು ಹೇಗೆ?
ಮೊದಲಿಗೆ ಕೋಸನ್ನು ತೊಳೆದು ತುರಿದುಕೊಳ್ಳಬಹುದು. ಇಲ್ಲವೆ ಸಣ್ಣದಾಗಿ ಹೆಚ್ಚಿಕೊಳ್ಳಿ. ನಂತರ ಒಂದು ಬೌಲ್ಗೆ ಹಾಕಿ ಅದಕ್ಕೆ ಕರಿಬೇವು, ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಬಳಿಕ ಖಾರದ ಪುಡಿ, ಜೀರಿಗೆ, ಉಪ್ಪು ಹಾಕಿಕೊಂಡು ಮೊದಲು ಡ್ರೈ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡುವಾಗ ಗರಂ ಮಸಾಲ ಹಾಕಿಕೊಂಡು ಮಿಶ್ರಣ ಮಾಡಿ.
ನಂತರ ಇದಕ್ಕೆ 3 ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್ ಹಾಗೆ 3 ಚಮಚ ಕಡಲೆ ಹಿಟ್ಟು ಹಾಕಿ 3 ಚಮಚ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಇದು ಈರುಳ್ಳಿ ಬೋಂಡಾ ಮಾಡಲು ರೆಡಿ ಮಾಡುವ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಚ್ಚಿಕೊಂಡು ಬಿಸಿ ಮಾಡಿ.
ಈಗ ಮಿಕ್ಸ ಮಾಡಿಕೊಂಡ ಪದಾರ್ಥವನ್ನು ಒಂದು ತಟ್ಟೆಯಲ್ಲಿ ಹಾಕಿ ಸ್ವಲ್ಪ ತಟ್ಟಿಕೊಳ್ಳಿ. ಅದು ಪೂರಿ ಗಾತ್ರಕ್ಕೆ ಅಥವಾ ನಿಪ್ಪಟ್ಟು ಗಾತ್ರದಲ್ಲಿ ಮಾಡಿ ಕಾವಲಿ ಮೇಲೆ ಹಾಕಿ ಕರಿದುಕೊಳ್ಳಿ. ಎರಡು ಭಾಗವನ್ನು ಚೆನ್ನಾಗಿ ಕರಿದುಕೊಳ್ಳಬೇಕು. ಕಾವಲಿ ಮೇಲೆಯೇ ಹಾಕಿಕೊಂಡು ತಟ್ಟಿಕೊಳ್ಳಬಹುದು. ಬೇಕಿದ್ದರೆ ಮೇಲೆ ತುಪ್ಪ ಕೂಡ ಸವರಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಕೋಸಿನ ತಿಂಡಿ ರೆಡಿಯಾಗುತ್ತದೆ.
ಬೆಳಗ್ಗೆ ಬ್ರೇಕ್ ಫಾಸ್ಟ್ಗೆ ಅದ್ರಲ್ಲೂ ಮಕ್ಕಳಿಗೆ ಇದನ್ನು ಮಾಡಿ ಸವಿಯಲು ನೀಡಿ ಅವರು ಕೂಡ ಬಹಳ ಇಷ್ಟಪಟ್ಟು ಸವಿಯಲು ಮುಂದಾಗುತ್ತಾರೆ.



Click it and Unblock the Notifications
