Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
Bread Roll: ಮಕ್ಕಳು ಹುಚ್ಚರಾಗ್ತಾರೆ! ಮನೆಯಲ್ಲಿಯೇ ಬ್ರೆಡ್ ರೋಲ್ ಮಾಡೋದು ಹೇಗೆ?
ಮಕ್ಕಳು ಈ ರೋಲ್‌ನ ರುಚಿಗೆ ಹುಚ್ಚರಾಗುತ್ತಾರೆ! ಇದು ಮಕ್ಕಳ ಟಿಫಿನ್‌ಗೆ ಬೆಸ್ಟ್. ಮತ್ತು ಸಂಜೆ ಟೀ ಜೊತೆ ಸವಿಯಲು ಸೂಪರ್. ಹೌದು, ನಾವು ಹೇಳುತ್ತಿರುವುದು ಬ್ರೆಡ್ ರೋಲ್ (Bread Roll) ಬಗ್ಗೆ. ಇದು ಭಾರತೀಯ ಜನಪ್ರಿಯ ತಿಂಡಿಗಳಲ್ಲಿ ಒಂದು. ಇದನ್ನು ಮಾಡುವುದು ತುಂಬಾ ಸುಲಭ. ಬೇಯಿಸಿದ ಆಲೂಗಡ್ಡೆ ಮತ್ತು ಬ್ರೆಡ್ ಸ್ಲೈಸ್ ಇದ್ದರೆ ಸಾಕು. ಕೇವಲ 20 ನಿಮಿಷಗಳಲ್ಲಿ ತಯಾರಿಸಬಹುದು. ಬನ್ನಿ, ಈ ರುಚಿಕರವಾದ ಬ್ರೆಡ್ ರೋಲ್ (Bread Roll Recipe) ಮಾಡುವ ವಿಧಾನ ಮತ್ತು ಇದರ ರುಚಿ ಮತ್ತಷ್ಟು ಹೆಚ್ಚಿಸಲು ಏನು ಮಾಡಬೇಕು? ಎನ್ನುವುದನ್ನು ತಿಳಿಯೋಣ.
ತಮ್ಮ ಮಕ್ಕಳಿಗೆ ರುಚಿಯಾಗಿ ಮತ್ತು ಸ್ಪೆಷಲ್ ಆಗಿ ಏನಾದರೂ ಮಾಡಲು ಬಯಸಿದರೆ ಬ್ರೆಡ್ ರೋಲ್ ಉತ್ತಮ ಆಯ್ಕೆ. ಇದರ ರುಚಿ ಎಷ್ಟು ಅದ್ಭುತವಾಗಿದೆ ಅಂದ್ರೆ, ಮಕ್ಕಳು ಒಮ್ಮೆ ತಿಂದರೆ ಹುಚ್ಚರಾಗುತ್ತಾರೆ. ಎಲ್ಲಾ ವಯಸ್ಸಿನವರು ಸಹ ಇದನ್ನು ಇಷ್ಟಪಡ್ತಾರೆ. ವಿಶೇಷವಾಗಿ, ಸಂಜೆ ಟೀ ಅಥವಾ ಕಾಫಿ ಜೊತೆಗೆ ಖಾರವಾದ ತಿಂಡಿ ತಿನ್ನಬೇಕು ಅಂತ ಅನಿಸಿದ್ರೆ, ಬ್ರೆಡ್ ರೋಲ್‌ಗಿಂತ ಉತ್ತಮವಾದದ್ದು ಯಾವುದೂ ಇಲ್ಲ. ಈ ರೋಲ್‌ನ ರುಚಿ ಮತ್ತು ಸ್ಪೈಸಿಯು ನಿಮ್ಮ ಬಾಯಲ್ಲಿ ನೀರೂರಿಸುತ್ತದೆ. ಮನೆಗೆ ಬರುವ ಅತಿಥಿಗಳಿಗೂ ಇದನ್ನು ಚಹಾದೊಂದಿಗೆ ನೀಡಬಹುದು.

ಬ್ರೆಡ್ ರೋಲ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಆಲೂಗಡ್ಡೆ : 4
ಬೇಯಿಸಿದ ಬಟಾಣಿ : ಅರ್ಧ ಕಪ್
ಹಸಿ ಮೆಣಸಿನಕಾಯಿ : 2 (ಸಣ್ಣಗೆ ಕತ್ತರಿಸಿದ್ದು)
ಶುಂಠಿ : 1 ಟೀಸ್ಪೂನ್ (ಸಣ್ಣಗೆ ತುರಿದಿದ್ದು)
ಕೊತ್ತಂಬರಿ ಸೊಪ್ಪು : 2 ಚಮಚ (ಸಣ್ಣಗೆ ಕತ್ತರಿಸಿದ್ದು)
ಕೆಂಪು ಮೆಣಸಿನ ಪುಡಿ : ಅರ್ಧ ಚಮಚ
ಗರಂ ಮಸಾಲ : ಅರ್ಧ ಚಮಚ
ಆಮ್ಚೂರ್ ಪುಡಿ : ಅರ್ಧ ಚಮಚ
ಬ್ರೆಡ್ ಸ್ಲೈಸ್‌ಗಳು : 8 ರಿಂದ 10 (ಅಂಚುಗಳನ್ನು ಕತ್ತರಿಸಿ)
ನೀರು : ಬ್ರೆಡ್ ನೆನೆಸಲು
ಅಡುಗೆ ಎಣ್ಣೆ : ಸ್ವಲ್ಪಿ (ಹುರಿಯಲು)
ಉಪ್ಪು : ರುಚಿಗೆ ತಕ್ಕಷ್ಟು
ಬ್ರೆಡ್ ರೋಲ್ ಮಾಡಲು ಈ ವಿಧಾನ ಫಾಲೋ ಮಾಡಿ
ಮೊದಲು ನೀವು, ಬೇಯಿಸಿದ ಆಲೂಗಡ್ಡೆಯನ್ನು ಒಂದು ಪಾತ್ರೆಯಲ್ಲಿ ಚೆನ್ನಾಗಿ ಮಿಶ್ರಣ (ಮ್ಯಾಶ್) ಮಾಡಬೇಕು. ಬೇಯಿಸಿದ ಬಟಾಣಿ, ಹಸಿ ಮೆಣಸಿನಕಾಯಿ, ಶುಂಠಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಒಣ ಮಾವಿನ ಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಾದ ಬಳಿಕ, ಒಂದು ಬ್ರೆಡ್ ಸ್ಲೈಸ್ ತೆಗೆದುಕೊಂಡು ಅದನ್ನು ನೀರಿನಲ್ಲಿ ಮುಳುಗಿಸಿ (ಅದ್ದಿ) ತಕ್ಷಣ ಹೊರಗಡೆ ತೆಗೆಯಿರಿ. ಹಾಗೆಯೇ ನಿಮ್ಮ ಕೈಗಳಿಂದ ನಿಧಾನವಾಗಿ ಒತ್ತಿ ಹೆಚ್ಚುವರಿ ನೀರು ತೆಗೆಯಿರಿ.
ಈಗ ಆಲೂಗಡ್ಡೆ ಸ್ಟಫಿಂಗ್ ಅನ್ನು ಅದರ ಮಧ್ಯದಲ್ಲಿ ಇಡಿ. ಹಾಗೆಯೇ ಬ್ರೆಡ್ ಅನ್ನು ರೋಲ್‌ನಂತೆ ಮಡಿಸಿ. ಎಲ್ಲಾ ಬ್ರೆಡ್ ಸ್ಲೈಸ್‌ಗಳನ್ನು ಇದೇ ರೀತಿ ಮಾಡಬೇಕು. ಇದಾದ ಬಳಿಕ, ಒಂದು ಬಾಣಲೆ ತೆಗೆದುಕೊಳ್ಳಿ. ಅದರಲ್ಲಿ ಅಡುಗೆ ಎಣ್ಣೆ ಬಿಸಿ ಮಾಡಬೇಕು. ಎಣ್ಣೆ ಚೆನ್ನಾಗಿ ಬಿಸಿಯಾದಾಗ, ತಯಾರಾದ ಬ್ರೆಡ್ ರೋಲ್‌ಗಳನ್ನು ಹಾಕಿ. ಇವು ಗೋಲ್ಡನ್ ಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಚೆನ್ನಾಗಿ ಫ್ರೈ ಮಾಡಬೇಕು. ಬಳಿಕ ಅಡುಗೆ ಎಣ್ಣೆಯಿಂದ ಬ್ರೆಡ್ ರೋಲ್‌ಗಳನ್ನು ಹೊರ ತೆಗೆಯಿರಿ. ಹಾಗೆಯೇ ಟಿಶ್ಯೂ ಪೇಪರ್ ಮೇಲೆ ಇಡಿ. ಹೀಗೆ ಮಾಡಿದರೆ, ಬಿಸಿಬಿಸಿಯಾದ ಬ್ರೆಡ್ ರೋಲ್ ಸವಿಯಲು ಸಿದ್ಧವಾಗುತ್ತದೆ.
ಒಟ್ಟಾರೆ, ಬ್ರೆಡ್ ಬಳಸಿ ಸ್ಯಾಂಡ್ ವಿಚ್, ಬ್ರೆಡ್ ರೋಸ್ಟ್, ಉಪ್ಪಿಟ್ಟು ಸೇರಿದಂತೆ ಹಲವು ಬಗೆಯ ತಿಂಡಿಗಳನ್ನು ಮಾಡಬಹುದು. ಅದರಲ್ಲೂ ಬ್ರೆಡ್ ನಿಂದ ತಯಾರಿಸುವ ಬ್ರೆಡ್ ರೋಲ್ ಎಲ್ಲರ ಅಚ್ಚುಮೆಚ್ಚು. ನೀವು ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ಮಕ್ಕಳಿಗೆ ಬಡಿಸಿ.



Click it and Unblock the Notifications