Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಊಟದ ರುಚಿ ಹೆಚ್ಚಿಸುವ ಬೆಂಡೆಕಾಯಿ ಕಾಯಿರಸ ಸವಿದು ನೋಡಿ..!
ಊಟದ ಜೊತೆಗೆ ರುಚಿ ರುಚಿಯ ಸಾಂಬಾರ್, ಹುಳಿ, ರಸಂ ಮಾಡುವುದು ಕಾಮನ್. ಮಧ್ಯಾಹ್ನದ ಊಟದೊಂದಿಗೆ ಹಾಗೆ ರಾತ್ರಿ ಊಟದೊಂದಿಗೆ ಸವಿಯಲು ನೀವು ಯಾವಾಗಲು ರುಚಿ ರುಚಿಯ ಖಾದ್ಯಗಳ ಮಾಡುವುದನ್ನು ಇಷ್ಟಪಡುತ್ತೀರಿ. ಹಾಗೆ ಊಟದೊಂದಿಗೆ ಆರೋಗ್ಯಕರ ಹುಳಿಗಳಿದ್ದರೆ ರುಚಿ ಮತ್ತೂ ಅದ್ಭುತವಾಗಿರಲಿದೆ. ಹೀಗಾಗಿ ನಾವಿಂದು ಊಟದೊಂದಿಗೆ ಕಾಯಿರಸ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ನೀವು ಊಟಕ್ಕೆ ಹಲವು ರೀತಿಯ ಕಾಯಿರಸವನ್ನು ಮಾಡಿ ಸವಿದಿರುತ್ತೀರಿ. ಹಲವು ವಸ್ತುಗಳಿಂದ ರುಚಿ ರುಚಿಯ ಕಾಯಿರಸ ಮಾಡಬಹುದು. ತಂಬುಳಿ, ಗೊಜ್ಜು ಹಾಗೆ ತಿಳಿಸಾರಿಗಿಂತಲೂ ಈ ಕಾಯಿರಸ ಅದ್ಭುತ ರುಚಿ ನೀಡಲಿದೆ. ಈ ಕಾಯಿರಸವನ್ನು ನೀವು ಎಲ್ಲಾ ಖಾದ್ಯದೊಂದಿಗೆ ಸವಿಯಬಹುದು. ಇದು ಆರೋಗ್ಯಕ್ಕೂ ಕೂಡ ಬಹಳ ಉತ್ತಮವಾಗಿದೆ.

ಆದ್ರೆ ನಾವಿಂದು ವಿಭಿನ್ನ ರುಚಿ ನೀಡುವಂತಹ ಬೆಂಡೆಕಾಯಿ ಕಾಯಿರಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಬೆಂಡೆಕಾಯಿಯಲ್ಲಿ ಮಾಡುವ ಹಲವು ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತವೆ. ಬೆಂಡೆಕಾಯಿಯಲ್ಲಿ ಹಲವು ರೆಸಿಪಿ ಮಾಡಬಹುದಾದರು ಈ ಕಾಯಿರಸ ಅದ್ಬುತ ರುಚಿ ನೀಡಲಿದೆ. ಹಾಗಾದ್ರೆ ನಾವಿಂದು ಈ ಬೆಂಡೆಕಾಯಿ ಕಾಯಿರಸ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಬೆಂಡೆಕಾಯಿ ಕಾಯಿರಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಂಡೆಕಾಯಿ ಕಾಯಿರಸ ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ಬೆಂಡೆಕಾಯಿ - ಕಾಲು ಕೆ.ಜಿ
- ಉದ್ದಿನ ಬೇಳೆ
- ಹಸಿ ಮೆಣಸು
- ಅರಶಿಣ
- ಉಪ್ಪು
- ಹುಣಸೆ ಹುಳಿ
- ತೆಂಗಿನಕಾಯಿ
- ಕರಿಬೇವು
- ಜೀರಿಗೆ
- ಸಾಸಿವೆ
- ಎಣ್ಣೆ
ಬೆಂಡೆಕಾಯಿ ಕಾಯಿರಸ ಮಾಡುವುದು ಹೇಗೆ?
ಮೊದಲು ಬಾಣಲೆಯಲ್ಲಿ ಉದ್ದಿನ ಬೇಳೆ, ಹಸಿ ಮೆಣಸು ಸೀಳಿಕೊಂಡು ಹಾಕಿ ಹುರಿದುಕೊಳ್ಳಬೇಕು. ನಂತರ ಇದನ್ನು ತೆಗೆದಿಟ್ಟು ಅದೇ ಬಾಣಲೆಗೆ ಈಗ ಎಣ್ಣೆ ಹಾಕಿಕೊಳ್ಳಿ. ಈಗ ತೊಳೆದು ಕತ್ತರಿಸಿಕೊಂಡಿರುವ ಬೆಂಡೆಕಾಯಿ ಹಾಕಿಕೊಳ್ಳಿ. ಪಲ್ಯ ಮಾಡಲು ಹೆಚ್ಚಿಕೊಳ್ಳುವಂತೆಯೇ ಈ ಕಾಯಿಸಾರಿಗೂ ಕೂಡ ಹೆಚ್ಚಿಕೊಳ್ಳಿ.
ಈ ಬೆಂಡೆಕಾಯಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು, ಈ ರೀತಿ 2 ನಿಮಿಷ ಹುರಿದ ಬಳಿಕ ಇದಕ್ಕೆ ಅರಶಿಣ, ಉಪ್ಪು, ಹುಣಸೆ ಹುಳಿ ರಸ, ನೀರು ಹಾಕಿಕೊಂಡು ಬೇಯಲು ಬಿಡಬೇಕು. 5 ನಿಮಿಷಗಳ ಕಾಲ ಚೆನ್ನಾಗಿ ಕುದಿಬರಬೇಕು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನ ಕಾಯಿ ತುರಿ ಹಾಗೆ ಮೊದಲು ಹುರಿದುಕೊಂಡಿದ್ದ ಉದ್ದಿನ ಬೇಳೆ ಮೆಣಸು, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ಬೆಂಡೆಕಾಯಿ ಬೆಂದಿದ್ದರೆ ಉರಿ ಸಣ್ಣ ಮಾಡಿಕೊಂಡು ಈ ರುಬ್ಬಿಕೊಂಡಿರುವ ಉದ್ದಿನ ಮಸಾಲೆಯನ್ನು ಇದಕ್ಕೆ ಹಾಕಿಕೊಳ್ಳಬೇಕು. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಆದ್ರೆ ಕುದಿಬರಲು ಬಿಡಬೇಡಿ. ಮಿಕ್ಸ್ ಮಾಡಿದ ಬಳಿಕ 1 ನಿಮಿಷದಲ್ಲಿ ಒಲೆಯಿಂದ ಕೆಳಗೆ ಇಳಿಸಿಕೊಳ್ಳಿ. ಈಗ ಒಲೆ ಮೇಲೆ ಸಣ್ಣ ಬಾಣಲೆ ಇಟ್ಟು ಒಗ್ಗರಣೆ ರೆಡಿ ಮಾಡಿ.
ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸು ಹಾಕಿ ಒಂದು ಒಗ್ಗರಣೆ ಮಾಡಿಕೊಂಡು ಈ ಕಾಯಿರಸಕ್ಕೆ ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಬೆಂಡೆಕಾಯಿ ಕಾಯಿರಸ ರೆಡಿಯಾಗುತ್ತದೆ. ನೀವು ಸಹ ಇದನ್ನು ಮನೆಯಲ್ಲೇ ಮಾಡಿ ನೋಡಿ. ಊಟದ ಜೊತೆಗೆ ಇದು ಅದ್ಭುತ ರುಚಿ ನೀಡಲಿದೆ. ಈ ಕಾಯಿರಸವನ್ನು ಮಧ್ಯಾಹ್ನ, ರಾತ್ರಿ ಊಟದ ಜೊತೆಗೆ ಸವಿಯಬಹುದು. ಇದು ಆರೋಗ್ಯದ ದೃಷ್ಟಿಯಲ್ಲು ಬಹಳ ಉತ್ತಮ ರೆಸಿಪಿ.



Click it and Unblock the Notifications
